ಪ್ರೇಮಿಗಳ ವಾರಕ್ಕೆ ಪಿವಿಆರ್-ಐನಾಕ್ಸ್ ಕಡೆಯಿಂದ ಸಿಕ್ತು ಭರ್ಜರಿ ಉಡುಗೊರೆ
ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್ ಸಿನಿಮಾಗಳು ರೀ ರಿಲೀಸ್ ಆಗುತ್ತವೆ. ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ನೀವು ಈ ಚಿತ್ರಗಳನ್ನು ನೋಡಬಹುದು. ಒಂದು ವಾರಗಳ ಕಾಲ ಈ ಆಫರ್ ಇರಲಿದೆ. ಟಿಕೆಟ್ ದರ ಕೂಡ 112 ರೂಪಾಯಿ ಮಾತ್ರ ಇರಲಿದೆ.
ಪ್ರೇಮಿಗಳ ದಿನವನ್ನು ಫೆಬ್ರವರಿ 14ರಂದು ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ಒಂದು ವಾರಗಳಿಂದಲೇ ಸಂಭ್ರಮಾಚರಣೆ ಆರಂಭ ಆಗಿರುತ್ತದೆ. ಈ ಸಂದರ್ಭದಲ್ಲಿ ಅನೇಕ ಲವ್ಸ್ಟೋರಿ ಸಿನಿಮಾಗಳು ರಿಲೀಸ್ ಆಗುತ್ತವೆ. ಈಗ ಪಿವಿಆರ್ ಐನಾಕ್ಸ್ (PVR Inox) ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ಸ್ಪೆಷಲ್ ಉಡುಗೊರೆ ಸಿಗುತ್ತಿದೆ. ಲವ್ಸ್ಟೋರಿಗಳಿಗೆ ಫೇಮಸ್ ಆದ ಚಿತ್ರಗಳನ್ನು ಮತ್ತೆ ರಿಲೀಸ್ ಮಾಡಲು ಈ ಮಲ್ಟಿಪ್ಲೆಕ್ಸ್ ಚೈನ್ ಮುಂದಾಗಿದೆ. ಇಂದಿನಿಂದ (ಫೆಬ್ರವರಿ 9) ಆರಂಭಿಸಿ, ಫೆಬ್ರವರಿ 15ರವರೆಗೆ ಈ ಆಫರ್ ಇರಲಿದೆ.
ಪಿವಿಆರ್ ಐನಾಕ್ಸ್ ವ್ಯಾಲೆಂಟೈನ್ಸ್ಡೇ ಆಚರಿಸಲು ಮುಂದಾಗಿದೆ. ಐಕಾನಿಕ್ ಸಿನಿಮಾಗಳು ಎನಿಸಿಕೊಂಡ ಹಿಂದಿಯ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ‘, ‘ಯೇ ಜವಾನಿ ಹೇ ದಿವಾನಿ’, ‘ಜಬ್ ವಿ ಮೆಟ್’, ‘ತು ಜೂಟಿ ಮೇ ಮಕ್ಕರ್’ ಹಾಲಿವುಡ್ನ ‘ಟೈಟಾನಿಕ್’ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಈ ವಿಚಾರ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಬುಕ್ ಮೈ ಶೋನಲ್ಲಿ ಬುಕಿಂಗ್ ಓಪನ್ ಆಗಿದೆ.
ಬಾಲಿವುಡ್, ಹಾಲಿವುಡ್ ಹಾಗೂ ಸ್ಥಳೀಯ ಭಾಷೆಯ ಸಿನಿಮಾಗಳು ಈ ಸಾಲಿನಲ್ಲಿ ಇವೆ. ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಭಾರತದ ಪ್ರಮುಖ 70ಕ್ಕೂ ಹೆಚ್ಚು ನಗರಗಳಲ್ಲಿ ನೀವು ಈ ಚಿತ್ರಗಳನ್ನು ನೋಡಬಹುದು. ಒಂದು ವಾರಗಳ ಕಾಲ ಈ ಆಫರ್ ಇರಲಿದೆ. ಮೇಲೆ ಹೆಸರಿಸಿದ ಸಿನಿಮಾಗಳ ಜೊತೆ ‘ವೀರ್ ಜರಾ’, ‘ಮೊಹಾಬತೆ’, ‘ಸೋನು ಕೆ ಟಿಟು ಕಿ ಸ್ವೀಟಿ’, ‘ತು ಜೂಟಿ ಮೇ ಮಕ್ಕರ್’, ‘ಪ್ಯಾರ್ ಕಾ ಪಂಚನಾಮ’, ‘ದೇ ದೇ ಪ್ಯಾರ್’ ಸಿನಿಮಾಗಳು ರಿಲೀಸ್ ಆಗುತ್ತಿವೆ.
ಕನ್ನಡದ ಕೆಲ ಸಿನಿಮಾಗಳೂ ರೀ ರಿಲೀಸ್ ಆಗುತ್ತಿವೆ. ಈಗಾಗಲೇ ಥಿಯೇಟರ್ನಲ್ಲಿ ಯಶಸ್ವಿ ಪ್ರದರ್ಶನ ಕಂಡು ಒಟಿಟಿಯಲ್ಲಿ ಪ್ರಸಾರ ಕಾಣುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಬಿ’ ಸಿನಿಮಾಗಳು ಥಿಯೇಟರ್ನಲ್ಲಿ ರೀ ರೀಲೀಸ್ ಆಗುತ್ತಿವೆ. ಈ ಚಿತ್ರಗಳನ್ನು ಒಟಿಟಿಯಲ್ಲಿ ನೋಡಿ ದೊಡ್ಡ ಪರದೆಯಲ್ಲಿ ಇವನ್ನು ನೋಡಬೇಕಿತ್ತು ಎಂದು ಕೊರಗಿದವರು ಇರುತ್ತಾರೆ. ಅಂಥವರು ಈ ಚಿತ್ರವನ್ನು ಥಿಯೇಟರ್ನಲ್ಲಿ ನೋಡಬಹುದು. ಇದರ ಜೊತೆಗೆ ರಾಜ್ ಬಿ ಶೆಟ್ಟಿ ನಟನೆಯ ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರ ಕೂಡ ರೀರಿಲೀಸ್ ಆಗುತ್ತಿದೆ.
ತೆಲುಗಿನಲ್ಲಿ ರಿಲೀಸ್ ಆದ ಐಕಾನಿಕ್ ಸಿನಿಮಾ ‘ಸೀತಾ ರಾಮಂ’ ಥಿಯೇಟರ್ನಲ್ಲಿ ಮರು ಬಿಡುಗಡೆ ಆಗುತ್ತಿದೆ. ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಕಾಂಬಿನೇಷನ್ನ ಈ ಸಿನಿಮಾ ಗಮನ ಸೆಳೆದಿದೆ.
ಇದನ್ನೂ ಓದಿ: ಮಲ್ಟಿಪ್ಲೆಕ್ಸ್ಗಳ ವಿರುದ್ಧ ಸಿಡಿದೆದ್ದ ಹೊಂಬಾಳೆ, ಸರಣಿ ಟ್ವೀಟ್ ಮಾಡಿದ ಪಿವಿಆರ್ ಸಿಇಒ
ಈ ಚಿತ್ರಗಳಿಗೆ ಟಿಕೆಟ್ ಮೇಲೆ ಆಫರ್ ನೀಡಲಾಗಿದೆ. ಈ ಸಿನಿಮಾಗಳನ್ನು ನೀವು ಕೇವಲ 112 ರೂಪಾಯಿಗಳಿಗೆ ನೋಡಬಹುದು. ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ ದರ ದುಬಾರಿ ಎಂದು ದೂರಿದವರು ಅನೇಕರಿದ್ದಾರೆ. ಅವರಿಗೆ 112 ರೂಪಾಯಿ ಟಿಕೆಟ್ ಆಫರ್ ಸಹಕಾರಿ ಆಗಲಿದೆ. ವ್ಯಾಲೆಂಟೈನ್ಸ್ ಡೇನ ವಿಶೇಷವಾಗಿ ಆಚರಿಸಬೇಕು ಎನ್ನುವ ಕಾರಣಕ್ಕೆ ಈ ಆಫರ್ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ