ಕಥೆ ಕದ್ದ ಆರೋಪ; ‘ಮೈದಾನ್’ ಚಿತ್ರಕ್ಕೆ ತಡೆಕೊಟ್ಟ ಮೈಸೂರು ಕೋರ್ಟ್
ಅಮಿತ್ ಶರ್ಮಾ ಅವರು ‘ಮೈದಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋಸ್, ಬೋನಿ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್, ಪ್ರಿಯಾಮಣಿ ಮೊದಲಾದವರು ನಟಿಸಿದ್ದಾರೆ. ಸೈಯದ್ ಅಬ್ದುಲ್ ರಹೀಮ್ ಎಂಬ ವ್ಯಕ್ತಿ ಬಗ್ಗೆ ಇದೆ.
ಬೋನಿ ಕಪೂರ್ (Boney Kapoor) ನಿರ್ಮಾಣದ, ಅಜಯ್ ದೇವಗನ್ ನಟನೆಯ ‘ಮೈದನಾ್’ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಗಬೇಕಿದೆ. ಇದಕ್ಕೂ ಮೊದಲೇ ಸಿನಿಮಾಗೆ ತಡೆ ನೀಡಲಾಗಿದೆ. ಅಮಿತ್ ಶರ್ಮಾ ನಿರ್ದೇಶನದ ಈ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ತೊಂದರೆ ಎದುರಾಗಿದೆ. ಈ ತಡೆಯನ್ನು ತೆಗೆಯುವಂತೆ ಚಿತ್ರತಂಡ ಕೋರ್ಟ್ ಮೆಟ್ಟಿಲೇರೋ ಸಾಧ್ಯತೆ ಇದೆ. ಕಥೆ ಕದ್ದ ಆರೋಪವನ್ನು ‘ಮೈದಾನ್’ ತಂಡ ಎದುರಿಸುತ್ತಿದೆ.
ತಮ್ಮ ಸಿನಿಮಾದ ಮೂಲ ಕತೆ ಕದ್ದಿದ್ದಾರೆ ಎಂದು ದೂರು ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ ದೂರು ನೀಡಿದ್ದರು. ‘2018ರಲ್ಲಿ ಚಿತ್ರದ ಕತೆ ಬಗ್ಗೆ ಲಿಂಕ್ಡಿನ್ನಲ್ಲಿ ಹಾಕಿದ್ದೆ. ಕಥೆ ಗಮನಿಸಿ ಸುಕ್ದಾಸ್ ಸೂರ್ಯವಂಶಿ ಎಂಬುವವರು ಚರ್ಚಿಸಿದ್ದರು. 2019ರ ಫೆಬ್ರವರಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದೆ. ನನ್ನ ಮೂಲ ಕತೆ ಕದ್ದು ಮೈದಾನ್ ಎಂದು ಹೆಸರಿಟ್ಟಿದ್ದಾರೆ. ನನಗೆ ಮೈಸೂರು ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ’ ಎಂದು ಮೈಸೂರಿನಲ್ಲಿ ದೂರುದಾರ ಕಿರಣ್ ಕುಮಾರ್ ಹೇಳಿದ್ದಾರೆ.
ಅಮಿತ್ ಶರ್ಮಾ ಅವರು ‘ಮೈದಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋಸ್, ಬೋನಿ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್, ಪ್ರಿಯಾಮಣಿ ಮೊದಲಾದವರು ನಟಿಸಿದ್ದಾರೆ. ಸೈಯದ್ ಅಬ್ದುಲ್ ರಹೀಮ್ ಎಂಬ ವ್ಯಕ್ತಿ ಬಗ್ಗೆ ಇದೆ. ಅವರು ಭಾರತದ ಫುಟ್ಬಾಲ್ ಕೋಚ್ ಆಗಿದ್ದರು. ಅವರು ಫುಟ್ಬಾಲ್ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: ‘ಶೈತಾನ್’ ಗೆದ್ದ ಬಳಿಕ ಅಜಯ್ ದೇವಗನ್ಗೆ ಬಂತಾ ಓವರ್ ಕಾನ್ಫಿಡೆನ್ಸ್?
ಬಾಲಿವುಡ್ನಲ್ಲಿ ಅಜಯ್ ದೇವಗನ್ ಅವರು ‘ಶೈತಾನ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗಿದೆ. ಇದಾದ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ಎನ್ನುವ ಕಾರಣಕ್ಕೂ ‘ಮೈದಾನ್’ ಚಿತ್ರದ ಬಗ್ಗೆ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ