AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15ನೇ ವಯಸ್ಸಿಗೆ ನಟಿ; 8 ಫಿಲ್ಮ್​ಫೇರ್ ಅವಾರ್ಡ್; ಜಯಾ ಬಚ್ಚನ್ ನಡೆದು ಬಂದ ಹಾದಿ

Jaya Bachchan Birthday: ಜಯಾ ಬಚ್ಚನ್ ಅವರು ಭಾರತೀಯ ಸಿನಿಮಾ ಹಾಗೂ ದೂರದರ್ಶನ ಸಂಸ್ಥೆಯಲ್ಲಿ ಪದವಿ ಪಡೆದಿದ್ದು ಅಲ್ಲದೆ ಚಿನ್ನದ ಪದಕ ಪಡೆದಿದ್ದಾರೆ. ಅವರದ್ದು ಬೆಂಗಾಲಿ ಕುಟುಂಬ. ಹೀಗಾಗಿ ಜಯಾ ಅವರು ಬೆಂಗಾಲಿ ಸಿನಿಮಾ ‘ಮಹಾನಗರ್’ ಮೂಲಕ ಸಿನಿಮಾ ಬದುಕು ಆರಂಭಿಸಿದರು. 

15ನೇ ವಯಸ್ಸಿಗೆ ನಟಿ; 8 ಫಿಲ್ಮ್​ಫೇರ್ ಅವಾರ್ಡ್; ಜಯಾ ಬಚ್ಚನ್ ನಡೆದು ಬಂದ ಹಾದಿ
ಜಯಾ ಬಚ್ಚನ್ ಹಾಗೂ ಕುಟುಂಬ
 ಶ್ರೀಲಕ್ಷ್ಮೀ ಎಚ್
| Edited By: |

Updated on:Apr 09, 2024 | 7:41 AM

Share

ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ (Jaya Bachchan) ಅವರಿಗೆ ಇಂದು (ಏಪ್ರಿಲ್ 9) ಜನ್ಮದಿನ. ಅವರಿಗೆ ಈಗ 76 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಅವರು ಬಾಲಿವುಡ್​ಗೆ ಕಾಲಿಟ್ಟಿದ್ದು 15ನೇ ವಯಸ್ಸಿನಲ್ಲಿ ಅನ್ನೋದು ವಿಶೇಷ. ಸಿನಿಮಾ ರಂಗದಲ್ಲಿ ಗೆಲುವು ಕಂಡು ಅವರು ರಾಜಕೀಯಕ್ಕೆ ಬಂದರು. ಇಲ್ಲಿಯೂ ಅವರಿಗೆ ಗೆಲುವು ಸಿಕ್ಕಿತು. ಅವರು ನಂತರ ಅಮಿತಾಭ್ ಬಚ್ಚನ್ ಅವರನ್ನು ಮದುವೆ ಆದರು. ಅವರಿಗೆ ಶ್ವೇತಾ ಹಾಗೂ ಅಭಿಷೇಕ್ ಬಚ್ಚನ್ ಹೆಸರಿನ ಮಕ್ಕಳಿದ್ದಾರೆ. ಈ ದಂಪತಿಗೆ ಆರಾಧ್ಯಾ ಬಚ್ಚನ್, ನವ್ಯಾ ನವೇಲಿ ಹಾಗೂ ಅಗಸ್ತ್ಯ ಹೆಸರಿನ ಮೊಮ್ಮಕಳಿದ್ದಾರೆ.

ಜಯಾ ಬಚ್ಚನ್ ಅವರು ಕವಿ ತರುಣ್ ಕುಮಾರ್ ಭದುರಿ ಅವರ ಮಗಳು. ಜಯಾ ಓದಿನಲ್ಲಿ ಮುಂದಿದ್ದರು. ಅವರು ಭಾರತೀಯ ಸಿನಿಮಾ ಹಾಗೂ ದೂರದರ್ಶನ ಸಂಸ್ಥೆಯಲ್ಲಿ ಪದವಿ ಪಡೆದಿದ್ದು ಅಲ್ಲದೆ ಚಿನ್ನದ ಪದಕ ಪಡೆದಿದ್ದಾರೆ. ಅವರದ್ದು ಬೆಂಗಾಲಿ ಕುಟುಂಬ. ಹೀಗಾಗಿ ಜಯಾ ಅವರು ಬೆಂಗಾಲಿ ಸಿನಿಮಾ ‘ಮಹಾನಗರ್’ ಮೂಲಕ ಸಿನಿಮಾ ಬದುಕು ಆರಂಭಿಸಿದರು.

ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ‘ಗುಡ್ಡೀ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದರು. ಜಯಾ ಅವರು 1970ರಲ್ಲಿ ಸೂಪರ್​ಸ್ಟಾರ್ ಆಗಿದ್ದರು. ಆಗ ಅಮಿತಾಭ್ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರು ದೊಡ್ಡ ಗೆಲುವು ಕಾಣುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಜಯಾ ಇದನ್ನು ಊಹಿಸಿದ್ದರು. ಜಯಾ ಹಾಗೂ ಅಮಿತಾಭ್ ಅವರದ್ದು ಹಿಟ್ ಜೋಡಿ ಆಯಿತು. ‘ಜಂಜೀರ್, ‘ಚುಪ್ಕೆ ಚುಪ್ಕೆ’, ‘ಅಭಿಮಾನ್’ಮ ‘ಸಿಲ್ಸಿಲಾ’, ‘ಮಿಲಿ’, ‘ಶೋಲೆ’ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದರು. ಜಯಾ ಬಚ್ಚನ್​ಗೆ ಧರ್ಮೇಂದ್ರ ಅವರು ಫೇವರಿಟ್ ನಟ ಆಗಿದ್ದರು.

ನಟಿಸಿದ 47 ಸಿನಿಮಾಗಳಲ್ಲಿ  ಜಯಾ ಅವರು 14 ಬಾರಿ ಫಿಲ್ಮ್​ಫೇರ್ ಅವಾರ್ಡ್​ಗೆ ನಾಮಿನೇಟ್ ಆಗಿದ್ದು, 8 ಬಾರಿ ಅವಾರ್ಡ್​ ಪಡೆದುಕೊಂಡಿದ್ದಾರೆ. ಈ ಪೈಕಿ 8 ಅತ್ಯುತ್ತಮ ನಟಿ, 3 ಅತ್ಯುತ್ತಮ ಪೋಷಕ ನಟಿ ಕೂಡ ಇದೆ. ಅವರಿಗೆ ಪದ್ಮಶ್ರೀ ಅವಾರ್ಡ್ ಕೂಡ ಸಿಕ್ಕಿದೆ. ಇವರದ್ದು ಪ್ರೇಮ ವಿವಾಹ. ಮದುವೆ ಬಳಿಕ ಜಯಾ ಬಚ್ಚನ್ ಅವರು ನಟನೆಯಿಂದ ಬ್ರೇಕ್ ಪಡೆದರು.

1995ರಲ್ಲಿ ಜಯಾ ಮತ್ತೆ ನಟನೆಗೆ ಮರಳಿದರು. ಮರಾಠಿಯ ‘ಅಕ್ಕ’ ಚಿತ್ರದಲ್ಲಿ ಅವರು ನಟಿಸಿದರು. ಇದರಲ್ಲಿ ಅಮಿತಾಭ್ ಬಚ್ಚನ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ನಂತರ ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದರು.

ಇದನ್ನೂ ಓದಿ: 90ರ ದಶಕದಲ್ಲಿ ಅಮಿತಾಭ್ ದಿವಾಳಿಯಾಗಿದ್ದಾಗ ಮೌನವಾಗಿದ್ದ ಜಯಾ ಬಚ್ಚನ್ 

2023ರಲ್ಲಿ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಜಯಾ ಬಚ್ಚನ್ ಅವರು ನಟಿಸಿದ್ದರು. ರಣವೀರ್ ಸಿಂಗ್ ಅವರ ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಪರೂಪಕ್ಕೆ ಒಮ್ಮೆ ಅವರು ಸಿನಿಮಾದಲ್ಲಿ ನಟಿಸಿ ಗಮನ ಸೆಳೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Tue, 9 April 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್