AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ರೂಪಾಯಿ ಬಾಡಿಗೆ ಮನೆ ಖರೀದಿಸಲಿರುವ ಅಕ್ಷಯ್​ ಕುಮಾರ್​; ಕಾರಣ ಏನು?

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರ ಏಪ್ರಿಲ್​ 10ರಂದು ಬಿಡುಗಡೆ ಆಗಲಿದೆ. ಆ ಪ್ರಯುಕ್ತ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಅಕ್ಷಯ್​ ಕುಮಾರ್​ ಹಂಚಿಕೊಂಡಿದ್ದಾರೆ. 500 ರೂಪಾಯಿ ಬಾಡಿಗೆ ಮನೆಯ ಬಗ್ಗೆಯೂ ಅವರು ಮಾತಾಡಿದ್ದಾರೆ.

500 ರೂಪಾಯಿ ಬಾಡಿಗೆ ಮನೆ ಖರೀದಿಸಲಿರುವ ಅಕ್ಷಯ್​ ಕುಮಾರ್​; ಕಾರಣ ಏನು?
ಅಕ್ಷಯ್​ ಕುಮಾರ್​
ಮದನ್​ ಕುಮಾರ್​
|

Updated on: Apr 08, 2024 | 8:44 PM

Share

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಬಹುಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಹಲವು ಕಡೆಗಳಲ್ಲಿ ಅವರು ಪ್ರಾಪರ್ಟಿ ಖರೀದಿಸಿದ್ದಾರೆ. ಅಚ್ಚರಿ ಏನೆಂದರೆ, ಈಗ ಅವರು ಒಂದು ಹಳೇ ಕಟ್ಟಡವನ್ನು ಕೊಂಡುಕೊಳ್ಳಲು ಬಯಸಿದ್ದಾರೆ. ಒಂದು ಕಾಲದಲ್ಲಿ ಅದಕ್ಕೆ 500 ರೂಪಾಯಿ ಬಾಡಿಗೆ ನೀಡಲಾಗುತ್ತಿತ್ತು. ಈಗ ಆ ಮನೆಯನ್ನು (Rented House) ಖರೀದಿಸಲು ಅಕ್ಷಯ್​ ಕುಮಾರ್​ ಅವರು ಉತ್ಸಾಹ ತೋರಿಸಿದ್ದಾರೆ. ದೊಡ್ಡ ದೊಡ್ಡ ಬಂಗಲೆ ಹೊಂದಿರುವ ಅಕ್ಷಯ್​ ಕುಮಾರ್​ ಅವರು ಆ ಚಿಕ್ಕ ಮನೆ (Akshay Kumar House) ಖರೀದಿಸಲು ಮುಂದಾಗಿರುವುದು ಯಾಕೆ ಎಂಬುದು ಕುತೂಹಲದ ಪ್ರಶ್ನೆ. ಆ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಅಕ್ಷಯ್​ ಕುಮಾರ್​ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಈಗ ಅವರಿಗೆ ಬಾಲ್ಯದ ನೆನಪು ಖುಷಿ ನೀಡುತ್ತಿದೆ. ಬಾಲ್ಯದಲ್ಲಿ ತಂದೆ-ತಾಯಿ, ಸಹೋದರಿ ಜೊತೆ ಅಕ್ಷಯ್​ ಕುಮಾರ್​ ಅವರು ವಾಸಿಸುತ್ತಿದ್ದ ಮನೆಯ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು ಎಂಬುದು ಅಕ್ಷಯ್​ ಕುಮಾರ್​ ಅವರ ಆಸೆ. ಆ ಹಳೇ ಮನೆಯ ಬಗ್ಗೆ ಅವರು ಕೆಲವು ಅಪರೂಪದ ವಿಚಾರಗಳನ್ನು ಹಂಚಿಕೊಂಡಿದ್ದಾರೆ

‘ಆ ಮನಸ್ಥಿತಿ ಏನು ಎಂಬುದು ನನಗೆ ಅರ್ಥ ಆಗಿಲ್ಲ. ಬಾಲ್ಯದಲ್ಲಿ ದಿನ ಕಳೆದ ಜಾಗಗಳಿಗೆ ಹೋಗಲು ಖುಷಿ ಆಗುತ್ತದೆ. ನನ್ನ ಹಳೇ ಮನೆಗೆ ಹೋಗುವುದು ನನಗೆ ಇಷ್ಟ. ನಾವು ಆ ಮನೆಗೆ 500 ರೂಪಾಯಿ ಬಾಡಿಗೆ ನೀಡುತ್ತಿದ್ದೆವು. ಆ ಕಟ್ಟಡವನ್ನು ಈಗ ರಿನೋವೇಟ್​ ಮಾಡುತ್ತಿದ್ದಾರೆ ಎಂಬುದು ಗೊತ್ತಾಯಿತು. ನಾನು ಮೂರನೇ ಮಹಡಿಯನ್ನು ಕೊಂಡುಕೊಳ್ಳುತ್ತೇನೆ ಎಂದು ಅವರಿಗೆ ಹೇಳಿದ್ದೇನೆ. ನಾವು ಅಲ್ಲಿ ವಾಸಿಸುತ್ತಿದ್ದೆವು. 2 ಬೆಡ್​ ರೂಮ್​ನ ಫ್ಲಾಟ್​ ನಿರ್ಮಾಣ ಆಗುತ್ತಿದೆ ಅಲ್ಲಿ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ‘ಬದುಕುವ ಸಾಧ್ಯತೆ ಶೇ.30 ಮಾತ್ರ’: ಇದು ಅಕ್ಷಯ್​ ಕುಮಾರ್​ ಜೀವನದ ಅಪಾಯಕಾರಿ ಸ್ಟಂಟ್

‘ಈಗ ಅಲ್ಲಿ ನಮ್ಮವರು ಯಾರೂ ಇಲ್ಲ. ಆದರೂ ಆ ಮನೆಯನ್ನು ಉಳಿಸಿಕೊಳ್ಳಬೇಕು ಅಂತ ಬಯಸಿದ್ದೇನೆ. ನಮ್ಮ ತಂದೆ 9 ಗಂಟೆಯಿಂದ 6 ಗಂಟೆ ತನಕ ಕೆಲಸಕ್ಕೆ ಹೋಗುತ್ತಿದ್ದರು. ಅವರು ವಾಪಸ್​ ಬರುವುದನ್ನು ನಾನು ಮತ್ತು ನನ್ನ ಸಹೋದರಿ ಕಾಯುತ್ತಿದ್ದ ದಿನಗಳು ಈಗಲೂ ನನಗೆ ನೆನಪಿದೆ. ಆ ದೃಶ್ಯ ಹಾಗೆಯೇ ಇದೆ. ಅಲ್ಲೊಂದು ಪೇರಲ ಮರ ಇತ್ತು. ಹಣ್ಣುಗಳನ್ನು ನಾವು ಕೀಳುತ್ತಿದ್ದೆವು. ಈಗಲೂ ನಾನು ಪ್ರತಿ ತಿಂಗಳು ಅಲ್ಲಿಗೆ ಹೋಗುತ್ತೇನೆ. ಅಲ್ಲಿಂದ ಕೆಲವು ಹೂವು ಮತ್ತು ಪೇರಲ ಹಣ್ಣು ತರುತ್ತೇನೆ. ಆ ಸಂಗತಿಗಳೊಂದಿಗೆ ಇರಲು ನಾನು ಬಯಸುತ್ತೇನೆ. ಅಲ್ಲಿಂದಲೇ ನಾನು ಬಂದಿದ್ದು’ ಎಂದಿದ್ದಾರೆ ಅಕ್ಷಯ್​ ಕುಮಾರ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್