AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗೆ ಸೇರಿದ ಬಳಿಕ 2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ

ಅನೇಕ ವರ್ಷಗಳಿಂದ ಕಂಗನಾ ರಣಾವತ್​ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಮೊದಲಿನಿಂದಲೂ ಅವರು ಬಿಜೆಪಿ ಪರ ನಿಲುವು ಹೊಂದಿದ್ದಾರೆ. ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರವನ್ನು ಅವರು ಹೊಗಳುತ್ತಾ ಬಂದಿದ್ದರು. ಕೆಲವೇ ದಿನಗಳ ಹಿಂದೆ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ನೀಡಿದರು. ಬಿಜೆಪಿಗೆ ಸೇರ್ಪಡೆ ಆದ ಬಳಿಕ ಕಂಗನಾ ಐಷಾರಾಮಿ ಕಾರು ಖರೀದಿಸಿದ್ದಾರೆ.

ಬಿಜೆಪಿಗೆ ಸೇರಿದ ಬಳಿಕ 2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ
ಕಂಗನಾ ರಣಾವತ್​, ಮರ್ಸಿಡಿಸ್​ ಮೆಬ್ಯಾಕ್​
ಮದನ್​ ಕುಮಾರ್​
|

Updated on: Apr 08, 2024 | 4:08 PM

Share

ನಟಿ ಕಂಗನಾ ರಣಾವತ್​ (Kangana Ranaut) ಅವರು ಹೊಸ ಕಾರು ಖರೀದಿ ಮಾಡಿದ್ದಾರೆ. ಆ ಮೂಲಕ ಅವರು ಸುದ್ದಿ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆ ಆದರು. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಂ.ಪಿ. ಅಭ್ಯರ್ಥಿ ಆಗಿರುವ ಕಂಗನಾ ರಣಾವತ್​ ಅವರ ಮನೆಗೆ ಮರ್ಸಿಡಿಸ್​ ಮೆಬ್ಯಾಕ್​ ಜಿಎಲ್​ಎಸ್​ (Mercedes Maybach GLS) ಕಾರು ಬಂದಿದೆ. ಇದರ ಬೆಲೆ ಬರೋಬ್ಬರಿ 2.46 ಕೋಟಿ ರೂಪಾಯಿ! ಹೊಸ ಕಾರಿನ ಕಾರಣಕ್ಕೆ ಕಂಗನಾ ರಣಾವತ್​ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕಂಗನಾ ರಣಾವತ್​ ಅವರು ಆ್ಯಕ್ಟೀವ್​ ಆಗಿದ್ದಾರೆ. ಮೊದಲಿನಿಂದಲೂ ಅವರು ಬಿಜೆಪಿ ಪರವಾದ ನಿಲುವು ಹೊಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಹೊಗಳುತ್ತಾ ಬಂದಿದ್ದರು. ಈಗ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಂತೆಯೇ ಅವರು ಐಷಾರಾಮಿ ಕಾರು ಖರೀದಿ ಮಾಡಿರುವುದು ಅಚ್ಚರಿ ಮೂಡಿಸಿದೆ.

View this post on Instagram

A post shared by yogen shah (@yogenshah_s)

ಈ ಮೊದಲು ಕೂಡ ಕಂಗನಾ ರಣಾವತ್​ ಅವರ ಬಳಿ ಐಷಾರಾಮಿ ಕಾರು ಇತ್ತು. ಅವರು ಈ ಹಿಂದೆ ಖರೀದಿಸಿದ್ದ ಮರ್ಸಿಡಿಸ್​ ಮೆಬ್ಯಾಕ್​ ಎಸ್​680 ಕಾರಿನ ಬೆಲೆ 3.6 ಕೋಟಿ ರೂಪಾಯಿ. ಈಗ ಅವರು ಆ ಹಳೇ ಕಾರಿನ ಬದಲಾಗಿ ಹೊಸ ಕಾರು ಖರೀದಿಸಿದ್ದಾರಾ ಅಥವಾ ಎರಡನೇ ಕಾರು ಅವರ ಕಲೆಕ್ಷನ್​ಗೆ ಸೇರ್ಪಡೆ ಆಗಿದೆಯಾ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಭಾನುವಾರ (ಏಪ್ರಿಲ್​ 7) ಕಂಗನಾ ರಣಾವತ್​ ಅವರು ಮುಂಬೈನ ಬೀದಿಗಳಲ್ಲಿ ಹೊಸ ಕಾರಿನಲ್ಲಿ ಸುತ್ತಾಡಿದ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ‘ಮಂಗಳ ಗ್ರಹದಿಂದ ಬಂದಂತೆ ವಿಚಿತ್ರವಾಗಿದ್ದಾರೆ’; ರಾಹುಲ್​ ಗಾಂಧಿಗೆ ಕಂಗನಾ ಟೀಕೆ

ಕಂಗನಾ ರಣಾವತ್​ ಅವರು ಮೊದಲಿನಿಂದಲೂ ನೇರ-ನಿಷ್ಠುರವಾದ ಮಾತುಗಳಿಂದ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ನೀಡುವುದಕ್ಕೂ ಮುನ್ನ ಅವರು ಶಿವಸೇನಾ ಪಕ್ಷದ ಜೊತೆ ಕಿರಿಕ್​ ಮಾಡಿಕೊಂಡಿದ್ದರು. ಈಗ ಹಲವು ಕಡೆಗಳಲ್ಲಿ ಅವರು ಸಂದರ್ಶನ ನೀಡುತ್ತಿದ್ದಾರೆ. ಕೆಲವು ತಪ್ಪು ಮಾಹಿತಿ ಹರಡಿದ ಕಾರಣಕ್ಕೆ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.