ನೇತಾಜಿ​​ ಭಾರತದ ಮೊದಲ ಪ್ರಧಾನಿ ಎಂದ ಕಂಗನಾ ರಣಾವತ್: ಪಾಠ ಮಾಡಿದ ನೆಟ್ಟಿಗರು

ಕಂಗನಾ ರಣಾವತ್​​ರ ಪ್ರಕಾರ ‘ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ನೇತಾಜಿ ಬೋಸ್ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದರು. ಸರ್ದಾರ್ ಪಟೇಲ್ ಅವರಿಗೆ ಇಂಗ್ಲಿಷ್ ಮಾತನಾಡಲು ಬಾರದ ಕಾರಣ ಅವರು ಪ್ರಧಾನಿ ಆಗಲಿಲ್ಲ’ ಎಂದು ಹೇಳಿದ್ದಾರೆ. ಈ ಹೇಳಿಕೆಯೇ ಸದ್ಯ ಇಂಟರ್ನೆಟ್​ನಲ್ಲಿ ಸಾಕಷ್ಟು ಹಲ್​ ಚಲ್ ಎಬ್ಬಿಸಿದೆ.​

ನೇತಾಜಿ​​ ಭಾರತದ ಮೊದಲ ಪ್ರಧಾನಿ ಎಂದ ಕಂಗನಾ ರಣಾವತ್: ಪಾಠ ಮಾಡಿದ ನೆಟ್ಟಿಗರು
ಕಂಗನಾ ರಣಾವತ್
Follow us
|

Updated on:Apr 07, 2024 | 10:21 PM

ನಟಿ ಕಂಗನಾ ರಣಾವತ್​ (Kangana Ranaut) ಅವರಿಗೆ ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣಾ ಟಿಕೆಟ್ ನೀಡಿದೆ. ಇಡೀ ವಿಶ್ವದಲ್ಲಿ ಸಣ್ಣ ಕಾಶಿ ಅಂತ ಪ್ರಸಿದ್ಧವಾಗಿರುವ ಮಂಡಿ ಕ್ಷೇತ್ರದಿಂದ ಅವರು ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಅವರು ಈಗಾಗಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಿಸಿಕೊಂಡಿದ್ದಾರೆ. ಆದರೆ ಅವರು ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಿಂದ ಸದ್ಯ ಸಾಕಷ್ಟು ಚರ್ಚೆಗೊಳಗಾಗುತ್ತಿದ್ದಾರೆ. ನಟಿ ಕಂಗನಾ ರಣಾವತ್ ಅವರು ಸಂದರ್ಶನವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಬಾಸ್ ಚಂದ್ರ ಬೋಸ್ ಅವರನ್ನು ಭಾರತದ ಮೊದಲ ಪ್ರಧಾನಿ ಎಂದು ಹೇಳಿದ್ದಾರೆ. ಈ ಹೇಳಿಕೆಯೇ ಸದ್ಯ ಇಂಟರ್ನೆಟ್​ನಲ್ಲಿ ಸಾಕಷ್ಟು ಹಲ್​ ಚಲ್ ಎಬ್ಬಿಸಿದೆ.​

ಕಂಗನಾ ರಣಾವತ್​​ರ ಪ್ರಕಾರ ‘ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ನೇತಾಜಿ ಬೋಸ್ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದರು. ಸರ್ದಾರ್ ಪಟೇಲ್ ಅವರಿಗೆ ಇಂಗ್ಲಿಷ್ ಮಾತನಾಡಲು ಬಾರದ ಕಾರಣ ಅವರು ಪ್ರಧಾನಿ ಆಗಲಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎದೆಯ ಮೇಲೆ ಫ್ಯಾನ್​ ಅಳವಡಿಸಿಕೊಂಡ ಬಂದ ಊರ್ಫಿ ಜಾವೇದ್: ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಷೇಧಿಸಿ ಎಂದ ನೆಟ್ಟಿಗರು

ಭಾರತದ ಮೊದಲ ಪ್ರಧಾನ ಮಂತ್ರಿ ಹೇಳಿಕೆ ನೀಡಿದ ಬಳಿಕ ಕಂಗನಾ ರಣಾವತ್ ಅವರ “ಜ್ಞಾನ” ದ ಬಗ್ಗೆ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಹಲವಾರು ನೆಟಿಗರು ಕಮೆಂಟ್ ಮಾಡುವ ಮೂಲಕ ಕಂಗನಾ ರಣಾವತ್ ಅವರಿಗೆ ಸರಿಯಾದ ಪಾಠ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮುಂದಿನ 5 ವರ್ಷ ಇಂತಹ ಹೆಚ್ಚು ಹೆಚ್ಚು ಜೋಕ್‌ಗಳಿಗಾಗಿ ಮಂಡಿ ಕ್ಷೇತ್ರದ ಜನರು ಕಂಗನಾ ರಣಾವತ್​ರಿಗೆ ಮತ ಹಾಕಿ ಎಂದು ಕಿಚಾಯಿಸಿದ್ದಾರೆ.

ಇದನ್ನೂ ಓದಿ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ: ಪಾಪ ನಿಂತುಕೊಂಡೇ ಐಪಿಎಲ್​ ಪಂದ್ಯ ವೀಕ್ಷಿಸಿದ ಫ್ಯಾನ್ಸ್​​

ಬಿಆರ್​ಎಸ್​ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಕೂಡ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಸುಭಾಷ್ ಚಂದ್ರ ಬೋಸ್ ನಮ್ಮ ಮೊದಲ ಪ್ರಧಾನಿ ಎಂದು ಬಿಜೆಪಿ ಅಭ್ಯರ್ಥಿಯೊಬ್ಬರು ಹೇಳುತ್ತಾರೆ. ದಕ್ಷಿಣದ ಮತ್ತೊಬ್ಬ ಬಿಜೆಪಿ ನಾಯಕ ಮಹಾತ್ಮಾ ಗಾಂಧಿ ನಮ್ಮ ಪ್ರಧಾನಿ ಎಂದು ಹೇಳುತ್ತಾರೆ. ಇವರೆಲ್ಲ ಎಲ್ಲಿಂದ ಪದವಿ ಪಡೆದರು?’ ಎಂದು ತಮ್ಮ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಕೆಟಿ ರಾಮರಾವ್ ಟ್ವೀಟ್​ 

ಇಷ್ಟೆಲ್ಲಾ ಆದ ಬಳಿಕ ನಟಿ ಕಂಗನಾ ರಣಾವತ್ ಅವರು ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು  ಸಮರ್ಥಿಸಿಕೊಂಡಿದ್ದಾರೆ. ಕಲಿಕೆಗಾರರಿಗೆ ಕೆಲವು ಸಾಮಾನ್ಯ ಜ್ಞಾನ ಎಂದು ಬರೆದುಕೊಂಡಿದ್ದಾರೆ.  ಸಿಂಗಾಪುರದಲ್ಲಿ ಮುಕ್ತ ಭಾರತಕ್ಕಾಗಿ ಸರ್ಕಾರವನ್ನು ರಚಿಸಿದ ನಂತರ ಸುಭಾಷ್ ಚಂದ್ರ ಬೋಸ್ ಅವರು ತಮ್ಮನ್ನು ತಾವು ಪ್ರಧಾನಿ ಎಂದು ಘೋಷಿಸಿಕೊಂಡಿದ್ದರು ಎನ್ನುವ ಸ್ಕ್ರೀನ್‌ಶಾಟ್ ಅನ್ನು ಅವರು ಹಂಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:18 pm, Sun, 7 April 24

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ