ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ: ಪಾಪ ನಿಂತುಕೊಂಡೇ ಐಪಿಎಲ್ ಪಂದ್ಯ ವೀಕ್ಷಿಸಿದ ಫ್ಯಾನ್ಸ್
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯವನ್ನು ನೋಡಬೇಕೆಂದು ಉತ್ಸುಕರಾಗಿದ್ದ ವ್ಯಕ್ತಿಯೊಬ್ಬರು ಪಂದ್ಯದ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ದುರದೃಷ್ಟವಶಾತ್, ಅವರು ಸೀಟು ಕಾಯ್ದಿರಿಸಿದರೂ ಇಡೀ ಪಂದ್ಯವನ್ನು ನಿಂತು ನೋಡುವ ಪರಿಸ್ಥಿತಿ ಎದುರಾಗಿದೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಈಗಾಗಲೇ ಶುರುವಾಗಿ ಕೆಲ ದಿನಗಳಾಗಿದೆ. ಪ್ರತಿ ಬಾರಿಯಂತೆ ಈ ಸಲ ಕೂಡ ತಮ್ಮ ನೆಚ್ಚಿನ ಆಟಗಾರರು ಮತ್ತು ತಂಡವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕ್ರೀಡಾಂಗಣಗಳಿಗೆ ಮುಗಿ ಬೀಳುತ್ತಿದ್ದಾರೆ. ಐಪಿಎಲ್ನ ಪ್ರತಿ ಪಂದ್ಯಕ್ಕೂ ಟಿಕೆಟ್ ದರ ದುಬಾರಿ ಇದೆ. ಅಷ್ಟಾದರೂ ಅಭಿಮಾನಿಗಳು ಟಿಕೆಟ್ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಇಲ್ಲೊಬ್ಬರು ಫ್ಯಾನ್ಸ್ಗೆ ಟಿಕೆಟ್ ಸಿಕ್ಕಿದ್ದರೂ ಕೂಡ ಕುಳಿತುಕೊಳ್ಳಲು ಕುರ್ಚಿ ಮಾತ್ರ ಸಿಕ್ಕಿಲ್ಲ. ಹೌದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯವನ್ನು ನೋಡಬೇಕೆಂದು ಉತ್ಸುಕರಾಗಿದ್ದ ವ್ಯಕ್ತಿಯೊಬ್ಬರು ಪಂದ್ಯದ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ದುರದೃಷ್ಟವಶಾತ್, ಅವರು ಸೀಟು ಕಾಯ್ದಿರಿಸಿದರೂ ಇಡೀ ಪಂದ್ಯವನ್ನು ನಿಂತು ನೋಡುವ ಪರಿಸ್ಥಿತಿ ಎದುರಾಗಿದೆ.
ಜುನೈದ್ ಅಹ್ಮದ್ ಎಂಬ ವ್ಯಕ್ತಿ SRH ಮತ್ತು CSK ಪಂದ್ಯ ನೋಡಲು 4.5 ಸಾವಿರ ರೂ. ನೀಡಿ ಟಿಕೆಟ್ ಖರೀದಿಸಿದ್ದಾರೆ. ಆದರೆ ಅವರು ಸ್ಟೇಡಿಯಂ ಹೋಗಿ ನೋಡಿದಾಗ ಅವರಿಗೆ ಆಸನ ಪತ್ತೆ ಆಗಿಲ್ಲ. ಈ ಕುರಿತಾಗಿ ಅವರು ತಮ್ಮ ಎಕ್ಸ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ‘ನಾನು ಟಿಕೆಟ್ ಕಾಯ್ದಿರಿಸಿದ್ದೇನೆ. ಆಸನ ಸಂಖ್ಯೆ ಜೆ 66. ಆದರೆ ನಾನು ನಿಂತುಕೊಂಡು ಪಂದ್ಯ ನೋಡಿದ್ದೇನೆ’ ಎಂದು ಬೇಸರಗೊಂಡಿದ್ದಾರೆ.
Disappointed that I’ve booked a ticket and seat Number was J66 in Stand.
Sorry state that seat doesn’t exist and had to stand and enjoy the game. Do I get a refund and compensation for this.#SRHvCSK #IPL2024 @JayShah @BCCI @IPL @JaganMohanRaoA @SunRisers pic.twitter.com/0fwFnjk641
— Junaid Ahmed (@junaid_csk_7) April 5, 2024
‘ಕಾಯ್ದಿರಿಸಿದ್ದ ಆಸನವು ಕಾಣೆಯಾಗಿದ್ದು, ನಿಂತುಕೊಂಡು ಪಂದ್ಯವನ್ನು ಆನಂದಿಸಬೇಕಾಗಿತ್ತು. ಇದಕ್ಕಾಗಿ ನಾನು ಮರುಪಾವತಿ ಮತ್ತು ಪರಿಹಾರವನ್ನು ಪಡೆಯುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎದೆಯ ಮೇಲೆ ಫ್ಯಾನ್ ಅಳವಡಿಸಿಕೊಂಡ ಬಂದ ಊರ್ಫಿ ಜಾವೇದ್: ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಷೇಧಿಸಿ ಎಂದ ನೆಟ್ಟಿಗರು
ಜುನೈದ್ ಅಹ್ಮದ್ ಅವರು ತಮ್ಮ ಬೇಸರವನ್ನು ಎಕ್ಸ್ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಜನರು ಈ ರೀತಿಯ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಓರ್ವ ನಾಯಕ ಬಂದು ಕುರ್ಚಿಯನ್ನು ಕದ್ದಿರಬೇಕು. ಏಕೆಂದರೆ ಅವರಿಗೆ ಕುರ್ಚಿಯೆಂದರೆ ಇಷ್ಟವೆಂದಿದ್ದಾರೆ. ಮತ್ತೊಬ್ಬರು ಇದು “ಸ್ಕ್ಯಾಮ್ 2024” ಎಂದು ಕರೆದಿದ್ದಾರೆ.
ಸಂಖ್ಯೆಯ ಅನುಗುಣವಾಗಿ ಆಸನವು ಕೆಲಸ ಮಾಡುವುದಿಲ್ಲ ಭಾಯ್, ಇದು ಮೊದಲು ಬಂದವರಿಗೆ ಮೊದಲ ಸೇವೆಯ ಆಧಾರದ ಮೇಲೆ ಎಂದಿದ್ದಾರೆ. ಮತ್ತೊಬ್ಬರು, ಇದು ಹೈದರಾಬಾದ್‌ನಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಭಾವೈಕ್ಯತೆಯ ಸಂಗಮ; ದೇವಾಲಯಕ್ಕೆ ತೆರಳುವ ಭಕ್ತರಿಗಾಗಿ ಮುಸ್ಲಿಂ ವ್ಯಕ್ತಿಯ ಮಾನವೀಯ ಕಾರ್ಯ
ಪಂದ್ಯ ನಡುವೆ ಜುನೈದ್ ಅಹ್ಮದ್ ಮತ್ತೊಂದು ಟ್ವೀಟ್ ಮಾಡಿದ್ದು, ಕಾಣೆಯಾಗಿದ್ದ ಜೆ 69-70 ಆಸನವು ಪಂದ್ಯದ ಇನ್ನಿಂಗ್ಸ್ನಲ್ಲಿ ಪತ್ತೆಯಾಗಿದೆ. ಯಾರೋ ಅದನ್ನು ಅದಲು ಬದಲು ಮಾಡದ್ದಾರೆ ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 pm, Sun, 7 April 24