Viral News: ಎಣ್ಣೆಯ ಬದಲಿಗೆ ತಪ್ಪಾಗಿ ಶವರ್ ಜೆಲ್ ಬಳಸಿ ಚಿಕನ್ ಕರಿ ತಯಾರಿಸಿದ ಮಹಿಳೆ
ಚಿಕನ್ ಕರಿ ತಯಾರಿಸಿ ಆದ ಬಳಿಕ ರುಚಿ ನೋಡಿದ ವೇಳೆ ಶವರ್ ಜೆಲ್ ಬಳಸಿರುವುದು ತಿಳಿದುಬಂದಿದೆ. ರುಚಿ ನೋಡಿದಾಗ, ವಾಕರಿಕೆ ಬಂದಿದ್ದು, ಅದರಲ್ಲಿ ಸೋಪಿನ ರುಚಿ ಇರುವುದರಿಂದ ಶವರ್ ಜೆಲ್ ಬಳಸಿರುವುದು ಗೊತ್ತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸಾಕಷ್ಟು ವಿಚಿತ್ರ ಸುದ್ದಿಗಳು ಹರಿದಾಡುತ್ತಿರುತ್ತವೆ. ಇದೀಗ ಮಹಿಳೆಯೊಬ್ಬಳ ವಿಶೇಷ ಖಾದ್ಯದ ಸುದ್ದಿ ಸಖತ್ ಆಗಿ ವೈರಲ್ ಆಗಿದೆ. ಈ ಮಹಿಳೆ ಅಡುಗೆ ಮಾಡುವ ಅವಸರದಲ್ಲಿ ಎಣ್ಣೆ ತುಪ್ಪ ಬಳಸುವ ಬದಲು ತಪ್ಪಾಗಿ ಶವರ್ ಜೆಲ್ ಬಳಸಿ ಚಿಕನ್ ಕರಿ ತಯಾರಿಸಿದ್ದಾಳೆ. ಸನ್‌ನಲ್ಲಿನ ವರದಿಯ ಪ್ರಕಾರ, ಕ್ಯಾಮೆರಾನ್ ಜೇನ್ ಎಂಬ ಮಹಿಳೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು ತಮ್ಮ ತಾಯಿ ಮಾಡಿದ ವಿಶೇಷ ಖಾದ್ಯದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ತನ್ನ ತಾಯಿ ಚಿಕನ್ ಎಂಬ ಖಾದ್ಯವನ್ನು ಮಾಡಿದ್ದು ಇದಕ್ಕಾಗಿ ಅವರು ಆನ್‌ಲೈನ್‌ನಲ್ಲಿ ಆಲಿವ್ ಎಣ್ಣೆಯನ್ನು ಆರ್ಡರ್ ಮಾಡಿದ್ದಾರೆ. ಆಯಿಲ್ ಕಂಟೈನರ್ ಮೇಲೆ ‘ಪ್ಯೂರ್ ಗ್ರೀಕ್ ಆಲಿವ್’ ಎಂದು ಬರೆಯಲಾಗಿತ್ತು. ಆದರೆ ಸರಿಯಾಗಿ ಗಮನಿಸದೇ ಇದನ್ನೇ ಅಡುಗೆಗೆ ಹಾಕಿದ್ದಾಳೆ.
“ನನ್ನ ತಾಯಿ ಕಂಟೇನರ್‌ನ ಮೇಲಿರುವ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಓದಲಿಲ್ಲ. ಅದರಲ್ಲಿ ‘ಶುದ್ಧ ಗ್ರೀಕ್ ಆಲಿವ್ ಶವರ್ ಜೆಲ್’ ಎಂದು ಬರೆದಿತ್ತು, ಇದನ್ನೇ ನನ್ನ ತಾಯಿ ಆಲಿವ್ ಎಣ್ಣೆ ಎಂದು ತಪ್ಪಾಗಿ ತಿಳಿದು ಚಿಕನ್ ಕರಿ ಮಾಡಿದ್ದಾರೆ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: Viral Video: ಲಿಫ್ಟ್ ಒಳಗೆ ಸೆಲ್ಫಿ ತೆಗೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ರೆ ಈ ವಿಡಿಯೋ ನೀವು ನೋಡಲೇ ಬೇಕು
ಚಿಕನ್ ಕರಿ ತಯಾರಿಸಿ ಆದ ಬಳಿಕ ರುಚಿ ನೋಡಿದ ವೇಳೆ ಶವರ್ ಜೆಲ್ ಬಳಸಿರುವುದು ತಿಳಿದುಬಂದಿದೆ. ರುಚಿ ನೋಡಿದಾಗ, ವಾಕರಿಕೆ ಬಂದಿದ್ದು, ಅದರಲ್ಲಿ ಸೋಪಿನ ರುಚಿ ಇರುವುದರಿಂದ ಶವರ್ ಜೆಲ್ ಬಳಸಿರುವುದು ಗೊತ್ತಾಗಿದೆ. ಇಡೀ ಘಟನೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋಗೆ ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ