Viral Video: ಜಾಹೀರಾತು ಬಂಟಿಂಗ್ಸ್ ಮೇಲಿನ ಮಾಡೆಲ್ ಫೋಟೊಗೆ ಮುತ್ತಿಟ್ಟ ಪೋಲಿ ತಾತ
'ಹುಣಸೆ ಮರ ಮುಪ್ಪಾದ್ರೂ ಹುಳಿ ಮುಪ್ಪಲ್ಲ' ಎಂಬ ಗಾದೆ ಮಾತನ್ನು ಪುಷ್ಠೀಕರಿಸುವಂತಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಲಿ ತಾತನೊಬ್ಬ ಯಾವುದೋ ವಾಹನದ ಮೇಲೆ ಅಂಟಿಸಿದ್ದ ಜಾಹಿರಾತು ಬಂಟಿಂಗ್ಸ್ ಮೇಲಿನ ಮಾಡೆಲ್ ಫೋಟೊಗೆ ಮುತ್ತಿಟ್ಟಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ತರಹೇವಾರಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ದೃಶ್ಯಗಳು ಭಾವನಾತ್ಮಕವಾಗಿದ್ದರೆ, ಇನ್ನೂ ಹಲವು ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸದ್ಯ ಅಂತಹದ್ದೇ ಹಾಸ್ಯಮಯ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಹುಣಸೆ ಮರ ಮುಪ್ಪಾದ್ರೂ ಹುಳಿ ಮುಪ್ಪಲ್ಲ ಎಂಬ ಮಾತಿನಂತೆ, ಪೋಲಿ ತಾತನೊಬ್ಬ ವಾಹನದ ಮೇಲೆ ಅಂಟಿಸಿದ್ದ ಜಾಹಿರಾತು ಬಂಟಿಂಗ್ಸ್ ಮೇಲಿನ ಮಾಡೆಲ್ ಫೋಟೋಗೆ ಮುತ್ತಿಟ್ಟಿದ್ದಾನೆ. ತಾತಪ್ಪನ ಈ ಪೋಲಿ ಆಟವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಈ ವೈರಲ್ ವಿಡಿಯೋವನ್ನು @bhagwakrantee ಎಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ವಾಹನದಲ್ಲಿ ಬ್ಯೂಟಿ ಪ್ರಾಡಕ್ಟ್ಸ್ ಬಗೆಗಿನ ಜಾಹಿರಾತು ಬಂಟಿಂಗ್ಸ್ ಒಂದನ್ನು ಅಂಟಿಸಲಾಗಿತ್ತು. ಅದರಲ್ಲಿ ಸುಂದರ ಮಾಡೆಲ್ ಗಳಿಬ್ಬರ ಫೋಟೊ ಇತ್ತು. ಮಾಡೆಲ್ ಗಳ ಅಂದವನ್ನು ಕಂಡ ತಾತಪ್ಪನೊಬ್ಬ ಅಲ್ಲೇ ನಿಂತಿರುವುದನ್ನು ಕಾಣಬಹುದು. ನಂತರ ನೋಡ ನೋಡುತ್ತಿದ್ದಂತೆ ಪೋಲಿ ತಾತ ಜಾಹಿರಾತು ಬಂಟಿಂಗ್ಸ್ ಮೇಲಿನ ಮಾಡೆಲ್ ಫೋಟೋಗೆ ಮುತ್ತಿಟ್ಟಿದ್ದಾನೆ.
पहेले दोनों पर नज़र डालिए और फिर एक को सेलेक्ट करिए। pic.twitter.com/HNK2VsYFRR
— भगवा क्रांति (@bhagwakrantee) April 4, 2024
ಇದನ್ನೂ ಓದಿ: Viral Video: ಲಿಫ್ಟ್ ಒಳಗೆ ಸೆಲ್ಫಿ ತೆಗೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ರೆ ಈ ವಿಡಿಯೋ ನೀವು ನೋಡಲೇ ಬೇಕು
ಏಪ್ರಿಲ್ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ ಹುಣಸೆ ಮರ ಮುಪ್ಪಾದ್ರೂ ಹುಳಿ ಮುಪ್ಪಲ್ಲ ಎನ್ನುತ್ತಾ ಪೋಲಿ ತಾತನನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:24 am, Sun, 7 April 24