AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಛಾವಣಿಯ ಮೇಲೆ ಚಿರತೆ, ಕರಡಿ ಓಡಾಟ, ಇಲ್ಲಿದೆ ಭಯಾನಕ ವಿಡಿಯೋ

ಮನೆಯ ಛಾವಣಿಯ ಮೇಲೆ ಚಿರತೆ, ಕರಡಿ ಓಡಾಟ, ಇಲ್ಲಿದೆ ಭಯಾನಕ ವಿಡಿಯೋ

ಅಕ್ಷಯ್​ ಪಲ್ಲಮಜಲು​​
|

Updated on: Apr 06, 2024 | 1:04 PM

Share

ಊಟಿಯ ಯಲ್ಲನಳ್ಳಿ ಕೈಕಟ್ಟಿ ಗ್ರಾಮದ ಮನೆಯೊಂದರ ಛಾವಣಿಯ ಮೇಲೆ ಚಿರತೆ ಓಡಾಟ ನಡೆಸಿದೆ. ಚಿರತೆ ಹೋದ ಸ್ವಲ್ಪ ಹೊತ್ತಿನ ನಂತರ ಅದೇ ಮನೆಯ ಛಾವಣಿಯ ಮೇಲೆ ಕರಡಿ ತಿರುಗಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ವನ್ಯಜೀವಿಗಳು ಹಾಗೂ ಇಂತಹ ಅಪಾಯಕಾರಿ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಯಲ್ಲನಳ್ಳಿ, ಎ.06: ತಮಿಳುನಾಡಿನ ಊಟಿಯ ಜನವಸತಿ ಪ್ರದೇಶಗಳಲ್ಲಿ ಚಿರತೆ ಮತ್ತು ಕರಡಿ ರಾತ್ರಿ ಹೊತ್ತು ಮನೆಯ ಛಾವಣಿ ಮೇಲೆ ಓಡಾಟ ನಡೆಸುತ್ತಿದೆ. ಈ ಘಟನೆಯ ಬಗ್ಗೆ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ . ಊಟಿಯ ಯಲ್ಲನಳ್ಳಿ ಕೈಕಟ್ಟಿ ಗ್ರಾಮದ ಮನೆಯೊಂದರ ಛಾವಣಿಯ ಮೇಲೆ ಚಿರತೆ ಓಡಾಟ ನಡೆಸಿದೆ. ಚಿರತೆ ಹೋದ ಸ್ವಲ್ಪ ಹೊತ್ತಿನ ನಂತರ ಅದೇ ಮನೆಯ ಛಾವಣಿಯ ಮೇಲೆ ಕರಡಿ ತಿರುಗಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ವನ್ಯಜೀವಿಗಳು ಹಾಗೂ ಇಂತಹ ಅಪಾಯಕಾರಿ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಇಂತಹ ಘಟನೆ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ.

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More