ಗೆಳತಿಯ ಆಕ್ಷೇಪಾರ್ಹ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದ ಗೆಳೆಯ
ಗೆಳೆಯನೇ ಗೆಳತಿಯ ಬಾಳಿಗೆ ಮುಳುವಾಗಿದ್ದಾನೆ. ಹೌದು ಅವರಿಬ್ಬರು ಪಿಯುಸಿಯಲ್ಲಿ ಸಹಪಾಠಿಯಾಗಿದ್ದರು. ಮುಂದೆ ಯುವತಿ ಹೆಚ್ಚಿನ ಶಿಕ್ಷಣಕ್ಕಾಗಿ ಬೇರೆ ಕಾಲೇಜಿಗೆ ದಾಖಲು ಆಗಿದ್ದಾಳೆ. ಆದರೆ ಪಿಯುಸಿ ಗೆಳೆಯ ಯುವತಿಯ ಸಂಪರ್ಕದಲ್ಲಿದ್ದು, ಮುಂದೆ ಮಾಡಬಾರದ ಕೆಲಸ ಮಾಡಿದ್ದಾನೆ. ಅದೇನು ಈ ಸ್ಟೋರಿ ಓದಿ...
ಚಿಕ್ಕಬಳ್ಳಾಪುರ, ಜನವರಿ 30: ಯುವಕನೋರ್ವ ಯುವತಿಯ ಆಕ್ಷೇಪಾರ್ಹ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಶಿಡ್ಲಘಟ್ಟ (Sidlaghatta) ಟೌನ್‍ನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಓದುತ್ತಿರುವ ವಿದ್ಯಾರ್ಥಿನಿ, ಗೆಳೆಯನ ಕಿರುಕುಳಕ್ಕೆ ಮನನೊಂದು ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ. ಊದವಾರಪಲ್ಲಿ ಗ್ರಾಮದ ನಿವಾಸಿ ಕಾರ್ತಿಕ್.ಆರ್ ಮತ್ತು ಯುವತಿ ಇಬ್ಬರೂ ಬಾಗೇಪಲ್ಲಿ (Bagepalli) ತಾಲೂಕಿನ ಚೇಳೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ.
ಪಿಯುಸಿ ನಂತರ ಯುವತಿ ಶಿಡ್ಲಘಟ್ಟದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಳೆ. ಯುವತಿಯ ಸಹಪಾರಿಯಾಗಿದ್ದ ಯುವಕ ಏಳು ತಿಂಗಳ ಹಿಂದೆ ವಿದ್ಯಾರ್ಥಿನಿಯ ಆಕ್ಷೇಪಾರ್ಹ ಪೋಟೋಗಳನ್ನು ತೆಗೆದು ಬ್ಲಾಕ್‍ಮೇಲ್ ಮಾಡಲು ಆರಂಭಿಸಿದ್ದಾನೆ. ಇದರಿಂದ ಬೆದರಿದ ವಿದ್ಯಾರ್ಥಿನಿ ಆತನ ತಾಳಕ್ಕೆ ತಕ್ಕಂತೆ ಕುಣಿದಿದ್ದಾಳೆ.
ಬ್ಲಾಕ್‍ಮೇಲ್‍ಗೆ ಹೆದರಿ ಹೇಳಿದಂತೆ ಕೇಳಿದ ವಿದ್ಯಾರ್ಥಿನಿ
ಪಿಯುಸಿ ಸಹಪಾಠಿ ಕಾರ್ತಿಕ್ ಹೇಳಿದಂತೆ ವಿದ್ಯಾರ್ಥಿನಿ ಕೇಳಿದ್ದಾಳೆ. ಆತನ ಮನಸ್ಸೋ ಇಚ್ಚೆಯಂತೆ ಯುವತಿ ನಡೆದುಕೊಂಡಿದ್ದಾಳೆ. ಕಾರ್ತಿಕ್ ಅಕ್ಷೇಪಾರ್ಹ ಪೋಟೋ ಇಟ್ಟುಕೊಂಡು ಗೆಳತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾನಂತೆ.
ಇದನ್ನೂ ಓದಿ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ; ‘ಪುಷ್ಪ’ ಚಿತ್ರದ ನಟ ಅರೆಸ್ಟ್
ವಿದ್ಯಾರ್ಥಿನಿಯ ತಂದೆಗೆ ತಿಳಿದ ಬ್ಲಾಕ್‍ಮೇಲ್
ಕಾರ್ತಿಕ್.ಆರ್ ಬ್ಲಾಕ್‍ಮೇಲ್, ಮಾನಸಿಕ, ದೈಹಿಕ ಕಿರುಕುಳ ನೀಡುವ ವಿಚಾರ ವಿದ್ಯಾರ್ಥಿನಿಯ ತಂದೆಗೆ ತಿಳಿದಿದೆ. ಇದರಿಂದ ರೊಚ್ಚಿಗೆದ್ದ ಆಕೆಯ ತಂದೆ ಮಗಳಿಗೆ ಬುದ್ದಿ ಹೇಳಿ, ಕಾರ್ತಿಕ್ ಮನೆಗೆ ಹೋಗಿ ಆತನ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ತಿಕ್ ತನ್ನ ಪಿಯುಸಿ ಸಹಪಾಠಿಯ ಅಕ್ಷೇಪಾರ್ಹ ಪೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣ ಪೇಸ್‍ಬುಕ್‍ನಲ್ಲಿ ಹರಿಬಿಟ್ಟು ಗೆಳೆತಿಯ ಬಾಳಿಗೆ ಕೊಳ್ಳೆ ಇಟ್ಟಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 354 ಹಾಗೂ ಐಟಿ ಆಕ್ಟ್ 66ಇ, 77ಎರಡಿ ದೂರು ಸಲ್ಲಿಸಿ ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ