ಬೆಂಗಳೂರು: 1 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ, ಸಿಸಿಬಿ ಪೊಲೀಸರಿಂದ 7 ಪೆಡ್ಲರ್​ಗಳ ಬಂಧನ

ಬೆಂಗಳೂರಿನಲ್ಲಿ ಡ್ರಗ್ಸ್​ ಪೆಡ್ಲರ್​ಗಳ ಹಾವಳಿ ಹೆಚ್ಚಾಗಿದೆ. ಅಮಾಯಕ ಯುವಕ, ಯುವತಿಯರನ್ನೇ ಟಾರ್ಗೆಟ್​ ಮಾಡಿಕೊಂಡು ಡ್ರಗ್ಸ್​ ಮಾರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಡ್ರಗ್ಸ್​ ಪೆಡ್ಲರ್​​ಗಳ ಮೇಲೆ ಕಣ್ಣಿಟ್ಟಿದ್ದು, ಆರೋಪಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಅದರಂತೆ ಇದೀಗ ಸಿಸಿಬಿ ಪೊಲೀಸರು 7 ಡ್ರಗ್​​ ಪೆಡ್ಲರ್​​ಗಳನ್ನು ಬಂಧಿಸಿದ್ದಾರೆ.

ಬೆಂಗಳೂರು: 1 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ, ಸಿಸಿಬಿ ಪೊಲೀಸರಿಂದ 7 ಪೆಡ್ಲರ್​ಗಳ ಬಂಧನ
ವಶಪಡಿಸಿಕೊಳ್ಳಲಾದ ಡ್ರಗ್ಸ್​​
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ವಿವೇಕ ಬಿರಾದಾರ

Updated on: Jan 30, 2024 | 2:36 PM

ಬೆಂಗಳೂರು, ಜನವರಿ 30: ಬೆಂಗಳೂರು ನಗರ ಪೊಲೀಸರು (Bengaluru City Police) ಡ್ರಗ್ಸ್​ ಪೆಡ್ಲರ್​​ಗಳ ವಿರುದ್ಧ ಸಮರ ಸಾರಿದ್ದಾರೆ. ಡ್ರಗ್ಸ್​ (Drugs)​ ಮುಕ್ತ ನಗರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಅದರಂತೆ ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ನಗರದಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ಏಳು ಜನ ಡ್ರಗ್ಸ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ. ಪುಲಿಕೇಶಿನಗರ, ಬಾಣಸವಾಡಿ, ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ನಗರದ ಹಲವೆಡೆ ಆರೋಪಿಗಳು ಡ್ರಗ್ಸ್​​ ಮಾರುತ್ತಿದ್ದರು. 219 ಎಕ್ಸ್​​​​ಟೆಸಿ ಪಿಲ್ಸ್​​​, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್​​​, 130 ಗ್ರಾಂ ತೂಕದ ಚರಸ್, ಕೊಕೇನ್​​ ಒಟ್ಟು 1 ಕೋಟಿ 52 ಲಕ್ಷದ 50 ಸಾವಿರ ಮೌಲ್ಯದ ಡ್ರಗ್ಸ್​​​ ವಶಪಡಿಸಿಕೊಂಡಿದ್ದಾರೆ.

21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಆಫ್ರಿಕಾ ಮೂಲದ ಆರೋಪಿ ಬಂಧನ

ಹೊಸ ವರ್ಷಕ್ಕೆಂದು ಮಾರಾಟಕ್ಕೆ 21 ಕೋಟಿ ಮೌಲ್ಯದ ಡ್ರಗ್ಸ್​​ ತಂದಿದ್ದ​ ಆಫ್ರಿಕಾ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿ. ಬಂಧಿತನಿಂದ 21 ಕೋಟಿ ಮೌಲ್ಯದ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಲಾಗಿತ್ತು.

ಬ್ಯುಸಿನೆಸ್ ವೀಸಾ ಪಡೆದುಕೊಂದು ಆರೋಪಿ ಲಿಯೋನಾರ್ಡ್ ಬೆಂಗಳೂರಿಗೆ ಬಂದು ರಾಮಮೂರ್ತಿನಗರದಲ್ಲಿ ನೆಲೆಸಿದ್ದನು. ಈ ಹೊಸ ವರ್ಷಕ್ಕೆ ಮತ್ತೇರಿಸಲು ಅಪಾರ ಪ್ರಮಾಣದ ಡ್ರಗ್ಸ್​ ತಂದಿದ್ದನು. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಡ್ರಗ್ಸ್ ವಶಕ್ಕೆ ಪಡೆದಿದ್ದರು. ಆರೋಪಿಯು ಬೆಡ್​ಶೀಟ್​​ ಕವರ್​​, ಸೋಪ್​​ ಬಾಕ್ಸ್​​​ ಹಾಗೂ ಚಾಕೊಲೇಟ್​ ಬಾಕ್ಸ್​ನಲ್ಲಿ ಡ್ರಗ್ಸ್​ ಸಾಗಾಟ ಮಾಡುತ್ತಿದ್ದನು. ಹೊಸ ವರ್ಷಕ್ಕೆ ರೇವ್ ಪಾರ್ಟಿಗೆ ಡ್ರಗ್ಸ್ ಸಾಗಿಸಲು ಮುಂದಾಗಿದ್ದ ವೇಳೆ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದನು. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ 2023ರಲ್ಲಿ 100 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್​​ ಜಪ್ತಿ

ಹುಕ್ಕಾ ಬಾರ್​ಗಳ ನಿಷೇಧದ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪ

ಬೆಂಗಳೂರಿನಲ್ಲಿ ಹುಕ್ಕಾ ಬಾರ್​ಗಳ ನಿಷೇಧದ ಕುರಿತು ವಿಧಾನಸಭೆಯಲ್ಲಿ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನೆ ಮಾಡಿದ್ದರು. ಹುಕ್ಕಾ ಬಾರ್​ಗಳನ್ನು ನಿಷೇಧ ಮಾಡುವಂತೆ ವಿಪಕ್ಷ ಬಿಜೆಪಿ ಶಾಸಕರು ಆಗ್ರಹಿಸಿದ್ದರು. ನಿಮ್ಮ ಅವಧಿಯಲ್ಲಿ ನಿಷೇಧ ಮಾಡಿಲ್ಲ. ಈಗ ಹೇಳುತ್ತಿದ್ದೀರಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದರು. ಪಂಜಾಬ್ ರೀತಿ ಬೆಂಗಳೂರು ಆಗುವುದು ಬೇಡ ಎಂದು ಶಾಸಕ ಅರವಿಂದ ಬೆಲ್ಲದ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಗ ಹುಕ್ಕಾ ಬಾರ್ ವಿಚಾರವಾಗಿ ಕಾಯ್ದೆ ತರುವುದಾಗಿ ಸದನಕ್ಕೆ ಗೃಹ ಸಚಿವ ಪರಮೇಶ್ವರ್ ಭರವಸೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ