ರಾತ್ರಿಹೊತ್ತು ಒಂಟಿಯಾಗಿ ಪ್ರಯಾಣಿಸುವ ಹೆಣ್ಣುಮಕ್ಕಳೇ ಭಯ ಬೇಡ; ಇನ್ಮುಂದೆ ಧೈರ್ಯವಾಗಿ ಪ್ರಯಾಣಿಸಬಹುದು
ರಾಜಧಾನಿಯಲ್ಲಿ ಒಂಟಿಯಾಗಿ ರಾತ್ರಿ ಹೊತ್ತು ಪ್ರಯಾಣ ಮಾಡುವ ಮಹಿಳೆಯರಿಗೆ ಭರವಸೆ ಮೂಡಿಸುವ ಸುದ್ದಿಯಿದು. ಮಿಡ್ ನೈಟ್ ನಲ್ಲಿ ಬಾಲ ಬಿಚ್ಚೋ ಕೆಲವು ಆಟೋ ಚಾಲಕರೇ ಹುಷಾರ್. ಪ್ರಯಾಣಿಕರನ್ನು ದರೋಡೆ, ಸುಲಿಗೆ, ಲೈಂಗಿಕ ಕಿರುಕುಳ ನೀಡಿ ಎಸ್ಕೇಪ್ ಆಗೋದು ಕಷ್ಟ. ನಕ್ರ ಮಾಡಿದ್ರೆ ಪೋಲಿಸರು ಏರೋಪ್ಲೇನ್ ಹತ್ತಿಸೋದು ಫಿಕ್ಸ್.

ಬೆಂಗಳೂರು, ಜ.30: ಮೆಜೆಸ್ಟಿಕ್ ಸೇರಿದಂತೆ ನಗರದಲ್ಲಿ ಇನ್ಮುಂದೆ ಮಹಿಳೆಯರು ಆಟೋದಲ್ಲಿ (Auto Rickshaw) ಎಷ್ಟೊತ್ತಿಗೆ ಬೇಕಾದರೂ ಧೈರ್ಯದಿಂದ ಓಡಾಡಬಹುದು. ಮೆಜೆಸ್ಟಿಕ್ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್ ನಲ್ಲಿ ನಗರ ಪೊಲೀಸರು (Bengaluru Police) ಹೈ ಅಲರ್ಟ್ ಆಗಿದ್ದಾರೆ. ಕೆಲ ಆಟೋ ಚಾಲಕರು ರಾತ್ರಿ ಹೊತ್ತು ಪ್ರಯಾಣಿಕರಿಗೆ ತೊಂದ್ರೆ ಕೊಡ್ತಿರುವ ಆರೋಪ ಕೇಳಿ ಬಂದಿತ್ತು. ಸದ್ಯ ಹೆಣ್ಣು ಮಕ್ಕಳ ಸುರಕ್ಷಿತೆಗಾಗಿ ಪೊಲೀಸರು ಹೊಸ ಮಾರ್ಗ ಕಂಡು ಕೊಂಡಿದ್ದಾರೆ.
ಮಿಡ್ ನೈಟ್ ನಲ್ಲಿ ಆಟೋದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಒಡವೆ ಕಸಿಯೋದು, ಹಣ ಮತ್ತು ಮೊಬೈಲ್ ಫೋನ್ ಸೇರಿದಂತೆ ಇನ್ನಿತರ ರೀತಿಯಲ್ಲಿ ತೊಂದ್ರೆ ಕೊಡ್ತಿದ್ರು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರತಿಯೊಂದು ಆಟೋದಲ್ಲಿ ಒಂದು, ಎರಡು ಅಥವಾ ಮೂರು ಡಿಜಿಟ್ ನಂಬರ್ ಮೆನ್ಷನ್ ಮಾಡಲು ಸೂಚನೆ ನೀಡಿದೆ. ಇದರಿಂದ ಯಾರೋ ಕೆಲವು ಆಟೋ ಚಾಲಕರು ಮಾಡುವ ಕೃತ್ಯದಿಂದ ಎಲ್ಲರಿಗೂ ಕೆಟ್ಟ ಹೆಸರು ಬರುವುದು ತಪ್ಪುತ್ತದೆ ಎಂದು ಮೆಜೆಸ್ಟಿಕ್ ಆಟೋ ಚಾಲಕರು ತಿಳಿಸಿದ್ದಾರೆ.
ಇದನ್ನೂ ಓದಿ: ಸುದ್ದಿಗೋಷ್ಟಿಯಲ್ಲಿ ಅಸಂಸದೀಯ ಪದ ಬಳಸುವ ಶಾಸಕ ನರೇಂದ್ರಸ್ವಾಮಿಗೆ ನಾಲಗೆ ಮೇಲೆ ಹಿಡಿತವಿಲ್ಲ!
ಇನ್ನೂ ಮೆಜೆಸ್ಟಿಕ್ ನ ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಗಳ ಬಳಿ ಇರುವ ಆಟೋ ಸ್ಟ್ಯಾಂಡ್ ನಲ್ಲಿರುವ ಪ್ರತಿ ಆಟೋಗೂ ಮುಂಭಾಗದಲ್ಲಿ ಸ್ಟೀಕರ್ ಅಂಟಿಸಲಾಗಿದೆ. ಆ ನಂಬರ್ ನ ಜೊತೆಗೆ ಪೋಲಿಸ್ ಇಲಾಖೆಯ ಸ್ಟೀಕರ್ ಕೂಡ ಹಾಕಲಾಗಿದೆ. ಅಲ್ಲಿ ಆಟೋ ಚಾಲಕನ ಸಂಪೂರ್ಣ ಮಾಹಿತಿ ಇರಲಿದೆ. ಆ ಆಟೋ ಮೇಲಿದ್ದ ನಂಬರ್ ನ್ನ ಪೋಲಿಸ್ ಸ್ಟೇಷನ್ ನಲ್ಲಿ ಜಸ್ಟ್ ಟೈಪ್ ಮಾಡಿದ್ರೆ ಸಾಕು ಆ ಆಟೋ ಡ್ರೈವರ್ ನ ಸಂಪೂರ್ಣ ಜಾತಕ ತೆರೆದುಕೊಳ್ಳಲಿದೆ. ಇಷ್ಟು ದಿನ ಪ್ರಯಾಣಿಕರಿಗೆ ಯಾವ ಆಟೋ ಚಾಲಕ ತೊಂದರೆ ಕೊಟ್ಟ ಅನ್ನೋದನ್ನ ಪತ್ತೆ ಹಚ್ಚಲು ಪೋಲಿಸರಿಗೆ ಕಷ್ಟ ಆಗ್ತಿತ್ತು. ಆಟೋ ನಂಬರ್ ನ್ನ ಕರೆಕ್ಟಾಗಿ ನೆನೆಪಿಟ್ಟುಕೊಳ್ಳುವಲ್ಲಿ ಪ್ರಯಾಣಿಕರು ಯಡವುತಿದ್ರು. ಇದರಿಂದ ಆಟೋ ಚಾಲಕರು ಎಸ್ಕೇಪ್ ಆಗ್ತಿದ್ರು. ಆದರೆ ಈಗ ಸ್ಟೀಕರ್ ನಲ್ಲಿ 2-3 ಡಿಜಿಟ್ ನಂಬರ್ ಇರೋದರಿಂದ ನೆನಪಿಟ್ಟುಕೊಳ್ಳೋದು ಕೂಡ ತುಂಬಾ ಸುಲಭ. ಇದರಿಂದ ಮಹಿಳಾ ಪ್ರಯಾಣಿಕರು ಕೂಡ ಫುಲ್ ಖುಷ್ ಆಗಿದ್ದಾರೆ.
ಒಟ್ನಲ್ಲಿ ಮೆಜೆಸ್ಟಿಕ್ ಗೆ ಬೇರೆಬೇರೆ ರಾಜ್ಯ, ಮತ್ತು ಜಿಲ್ಲೆಗಳಿಂದ ಬರ್ತಿದ್ದ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದ ಕೆಲ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಲು ಪೋಲಿಸ್ ಇಲಾಖೆ ಏನೋ ಮಾಸ್ಟರ್ ಪ್ಲಾನ್ ಮಾಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಅಂತ ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ