ಶಾಂತವಾಗಿದ್ದ ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪ್ರಯತ್ನದಲ್ಲಿವೆ: ಡಿಕೆ ಶಿವಕುಮಾರ್
ಪಂಚಾಯಿತಿಯು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಮಾತ್ರ ಹಾರಿಸಬೇಕೆಂದು ಹೇಳಿದ್ದರೂ ಹನುಮ ಧ್ವಜ ಹಾರಿಸಿದ್ದಾರೆ. ಬಿಜೆಪಿ ನಾಯಕರೇ ಅಲ್ವಾ, ಘರ್ ಘರ್ ತಿರಂಗಾ ಅಂತ ಘೋಷಣೆ ಸಾರಿದ್ದು, ಎಲ್ಲಿ ಹೋಯಿತು ಅ ಘೋಷಣೆ? ಅವರು ರಾಷ್ಟ್ರಧ್ವಜವನ್ನು ಬಿಟ್ಟು ಹನುಮ ಧ್ವಜವನ್ನೇ ಹಾರಿಸಿಕೊಂಡಿರಲಿ ಎಂದು ಶಿವಕುಮಾರ್ ಕುಹುಕವಾಡಿದರು.
ಬೆಂಗಳೂರು: ನಗರದಲ್ಲಿಂದು ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾನೂನು ಸುವ್ಯವಸ್ಥೆಯನ್ನು (Law and Order) ಹಾಳುಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ (old Mysuru region) ಜನ ಶಾಂತಿ-ಸೌಹಾರ್ದತೆಗಳಿಂದ ಬದುಕುತ್ತಿದ್ದರು ಆದರೆ ಈಗ ಈ ಪ್ರಾಂತ್ಯದಲ್ಲೂ ಅವರು ಕಾನೂನು ಮತ್ತು ಸುವ್ಯವಸ್ಥೆ ಕದಡುವ ಹುನ್ನಾರದಲ್ಲಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಈ ಪ್ರಾಂತ್ಯದ ಎಲ್ಲ ಗ್ರಾಮಗಳ ನಿವಾಸಿಗಳಲ್ಲಿ ಪರಸ್ಪರ ಭ್ರಾತೃತ್ವದ ಭಾವನೆಗಳಿವೆ, ಊರಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮದಿಂದ ಆಚರಿಸುತ್ತಾರೆ, ಅವರ ನಡುವಿನ ಸೌಹಾರ್ದತೆ ಹಾಳುಮಾಡು ಹೊಸ ಪ್ರಯೋಗವನ್ನು ಬಿಜೆಪಿ ನಾಯಕರು ಜಾರಿಗೆ ತಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಪಂಚಾಯಿತಿಯು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಮಾತ್ರ ಹಾರಿಸಬೇಕೆಂದು ಹೇಳಿದ್ದರೂ ಹನುಮ ಧ್ವಜ ಹಾರಿಸಿದ್ದಾರೆ. ಬಿಜೆಪಿ ನಾಯಕರೇ ಅಲ್ವಾ, ಘರ್ ಘರ್ ತಿರಂಗಾ ಅಂತ ಘೋಷಣೆ ಸಾರಿದ್ದು, ಎಲ್ಲಿ ಹೋಯಿತು ಅ ಘೋಷಣೆ? ಅವರು ರಾಷ್ಟ್ರಧ್ವಜವನ್ನು ಬಿಟ್ಟು ಹನುಮ ಧ್ವಜವನ್ನೇ ಹಾರಿಸಿಕೊಂಡಿರಲಿ ಎಂದು ಶಿವಕುಮಾರ್ ಕುಹುಕವಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ