AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದ್ದಿಗೋಷ್ಟಿಯಲ್ಲಿ ಅಸಂಸದೀಯ ಪದ ಬಳಸುವ ಶಾಸಕ ನರೇಂದ್ರಸ್ವಾಮಿಗೆ ನಾಲಗೆ ಮೇಲೆ ಹಿಡಿತವಿಲ್ಲ!

ಸುದ್ದಿಗೋಷ್ಟಿಯಲ್ಲಿ ಅಸಂಸದೀಯ ಪದ ಬಳಸುವ ಶಾಸಕ ನರೇಂದ್ರಸ್ವಾಮಿಗೆ ನಾಲಗೆ ಮೇಲೆ ಹಿಡಿತವಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 30, 2024 | 1:10 PM

ಅವರು ಬಳಸಿದ ಕೆಟ್ಟ ಪದವನ್ನು ನಾವು ಉಲ್ಲೇಖಿಸುವಂತಿಲ್ಲ ಮತ್ತು ವಿಡಿಯೋದಲ್ಲೂ ಅದನ್ನು ನಿಶ್ಶಬ್ದಗೊಳಿಸಲಾಗಿದೆ. ಕಾಂಗ್ರೆಸ್ ನಾಯಕರ ದೇಶಪ್ರೇಮದ ಬಗ್ಗೆ ಅವರು ಹೇಳಿಕೊಳ್ಳುತ್ತಾರೆ, ಹೇಳಿಕೊಳ್ಳಲಿ ಅದರಲ್ಲಿ ಅಭ್ಯಂತರವೇನೂ ಇಲ್ಲ, ಆದರೆ ವಿರೋಧ ಪಕ್ಷದ ನಾಯಕರನ್ನು ರಾಷ್ಟ್ರಭಕ್ತಿಯ ಆಧಾರದಲ್ಲಿ ಟೀಕಿಸಬೇಕಾದರೆ ಯೋಗ್ಯ ಪದಗಳ ಆಯ್ಕೆ ಮಾಡಿಕೊಳ್ಳಲಿ.

ಮಂಡ್ಯ: ರಾಜಕಾರಣಿಗಳಿಗೆ ಸಾರ್ವಜನಿಕವಾಗಿ ಮಾತಾಡುವಾಗ ಯಾವುದೇ ಸಂಹಿತೆ ಅನ್ವಯವಾಗುವುದಿಲ್ಲವೇ? ಬೇರೆಯವರಿಗೆ ಅನ್ವಯಿಸುತ್ತೆ ಆದರೆ ಮಳವಳ್ಳಿಯ ಕಾಂಗ್ರೆಸ್ ಶಾಸಕ ಪಿಎಮ್ ನರೇಂದ್ರ ಸ್ವಾಮಿಗೆ (PM Narendra Swamy) ಅನ್ವಯಿಸಲ್ಲ ಅನಿಸುತ್ತೆ. ರಾಜಕಾರಣಿಗಳ ನಡುವೆ ಪರಸ್ಪರ ದೋಷರೋಪಣೆ (criticism), ಟೀಕೆ, ಖಂಡನೆ ನಡೆಯೋದನ್ನು ನಾವು ಪ್ರತಿದಿನ ನೋಡುತ್ತೇವೆ, ಅದರೆ ಹೆಚ್ಚು ಕಡಿಮೆ ಎಲ್ಲ ನಾಯಕರು ಭಾಷೆಯ (language) ಎಲ್ಲೆ ಮೀರಲ್ಲ; ತುಚ್ಛ, ಕೀಳು ಅಭಿರುಚಿ ಮತ್ತು ಅಸಂಸದೀಯ ಪದಗಳನ್ನು ಬಳಸುವುದಿಲ್ಲ. ಶಾಸಕ ನರೇಂದ್ರ ಸ್ವಾಮಿ ಸುಸಂಸ್ಕೃತ ರಾಜಕಾರಣಿಗಳ ಸಾಲಿಗೆ ಸೇರಿಲ್ಲ್ಲ ಅನ್ನೋದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಇಂದು ಮಂಡ್ಯದಲ್ಲಿ ಕೆರಗೋಡು ಹನುಮ ಧ್ವಜ ವಿವಾದಕ್ಕೆ ಸಚಿವ ಎನ್ ಚಲುವರಾಯಸ್ವಾಮಿ ಜೊತೆ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ನರೇಂದ್ರಸ್ವಾಮಿ, ಬಿಜೆಪಿ ನಾಯಕರನ್ನು ಟೀಕುಸುವ ಭರದಲ್ಲಿ ತೆಗಳಲಾರಂಭಿಸಿ, ಅಸಂಸದೀಯ ಪದಗಳನ್ನು ಬಳಸಿದರು. ಅವರು ಬಳಸಿದ ಕೆಟ್ಟ ಪದವನ್ನು ನಾವು ಉಲ್ಲೇಖಿಸುವಂತಿಲ್ಲ ಮತ್ತು ವಿಡಿಯೋದಲ್ಲೂ ಅದನ್ನು ನಿಶ್ಶಬ್ದಗೊಳಿಸಲಾಗಿದೆ. ಕಾಂಗ್ರೆಸ್ ನಾಯಕರ ದೇಶಪ್ರೇಮದ ಬಗ್ಗೆ ಅವರು ಹೇಳಿಕೊಳ್ಳುತ್ತಾರೆ, ಹೇಳಿಕೊಳ್ಳಲಿ ಅದರಲ್ಲಿ ಅಭ್ಯಂತರವೇನೂ ಇಲ್ಲ, ಆದರೆ ವಿರೋಧ ಪಕ್ಷದ ನಾಯಕರನ್ನು ರಾಷ್ಟ್ರಭಕ್ತಿಯ ಆಧಾರದಲ್ಲಿ ಟೀಕಿಸಬೇಕಾದರೆ ಯೋಗ್ಯ ಪದಗಳ ಆಯ್ಕೆ ಮಾಡಿಕೊಳ್ಳಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ