Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆರಗೋಡು ಹನುಮ ಧ್ವಜ ವಿವಾದ: ಎಲ್ಲ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ಗ್ರಾಮಸ್ಥರು ಹೇಳೋದೇನು?

ಕೆರಗೋಡು ಹನುಮ ಧ್ವಜ ವಿವಾದ: ಎಲ್ಲ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ಗ್ರಾಮಸ್ಥರು ಹೇಳೋದೇನು?

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 30, 2024 | 11:36 AM

ಜನವರಿ 26 ರಾಷ್ಟ್ರಧ್ವಜ ಹಾರಿಸಿ ಮರುದಿನ ಹನುಮ ಧ್ವಜವನ್ನು ಹಾರಿಸಲಾಗಿದೆ. ಬೇರೆ ಬೇರೆ ಸಂಘಸಂಸ್ಥೆಗಳು ತಮಗೂ ದ್ವಜ ಹಾರಿಸುವ ಅನುಮತಿ ಕೋರಿದರೆ ಸಮಸ್ಯೆ ಎದುರಾಗುತ್ತದೆ ಎಂದು ಜಿಲ್ಲಾಡಳಿತ ಹೇಳುತ್ತದೆ, 40 ವರ್ಷಗಳಿಂದ ಕೇಳದವರು ಈಗ್ಯಾಕೆ ಕೇಳಿಯಾರು ಅಂತ ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ಮಂಡ್ಯ: ಜಿಲ್ಲೆಯ ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ತೆರವುಗೊಳಿಸಿದ ಪ್ರಕರಣ (Keragodu Hanuma Flag Row) ತಣ್ಣಗಾಗುವ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ. ಸರ್ಕಾರ (Siddaramaiah government) ಒಂದು ಹೇಳಿದರೆ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳ ನಾಯಕರು ಮತ್ತು ಹಿಂದೂ ಕಾರ್ಯಕರ್ತರು (Hindu activists) ಮತ್ತೊಂದನ್ನು ಹೇಳುತ್ತಾರೆ. ಆದರೆ, ಎಲ್ಲ ಬೆಳವಣಿಗೆಗಳನ್ನು ಕಣ್ಣಾರೆ ವೀಕ್ಷಿಸಿರುವ ಕೆರಗೋಡು ಗ್ರಾಮಸ್ಥರು ಹೇಳೋದೇನು? ಮಂಡ್ಯದ ಟಿವಿ9 ವರದಿಗಾರ ಅಲ್ಲಿನ ನಿವಾಸಿಗಳೊಂದಿಗೆ ಮಾತಾಡಿದ್ದಾರೆ. ಅವರು ಹೇಳುವ ಪ್ರಕಾರ, ಕಳೆದ 4 ದಶಕಗಳಿಂದ ಈಗ ವಿವಾದಕ್ಕೀಡಾಗಿರುವ ಸ್ಥಳದಲ್ಲಿ ರಾಷ್ಟ್ರಧ್ವಜ, ಕನ್ನಡ ರಾಜ್ಯೋತ್ಸವದಂದು ರಾಜ್ಯದ ಬಾವುಟ ಮತ್ತು ಹಬ್ಬ-ಹರಿದಿನ ಮತ್ತು ಉತ್ಸವಗಳಲ್ಲಿ ಅಯಾ ಸಂದರ್ಭಗಳಿಗೆ ಸೂಕ್ತವಾದ ಧ್ವಜಗಳನ್ನು ಹಾರಿಸಿಕೊಂಡು ಬರಲಾಗಿದೆ ಮತ್ತು ಇದುವರೆಗೆ ಯಾರಿಂದಲೂ ತಕರಾರು ಎದುರಾಗಿರಲಿಲ್ಲ. ಜನವರಿ 26 ರಾಷ್ಟ್ರಧ್ವಜ ಹಾರಿಸಿ ಮರುದಿನ ಹನುಮ ಧ್ವಜವನ್ನು ಹಾರಿಸಲಾಗಿದೆ. ಬೇರೆ ಬೇರೆ ಸಂಘಸಂಸ್ಥೆಗಳು ತಮಗೂ ದ್ವಜ ಹಾರಿಸುವ ಅನುಮತಿ ಕೋರಿದರೆ ಸಮಸ್ಯೆ ಎದುರಾಗುತ್ತದೆ ಎಂದು ಜಿಲ್ಲಾಡಳಿತ ಹೇಳುತ್ತದೆ, 40 ವರ್ಷಗಳಿಂದ ಕೇಳದವರು ಈಗ್ಯಾಕೆ ಕೇಳಿಯಾರು ಅಂತ ಗ್ರಾಮಸ್ಥರು ಪ್ರಶ್ನಿಸುತ್ತಾರೆ. ಜನ ಹೇಳುವುದನ್ನು ಕೇಳಿಸಿಕೊಳ್ಳಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ