ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸುವ ಅನುಮತಿ ಪಡೆದು ಹನುಮ ಧ್ವಜ ಹಾರಿಸಿದ್ದಕ್ಕೆ ಕ್ರಮ: ಸಿದ್ದರಾಮಯ್ಯ

ಸರಕಾರೀ ಸ್ಥಳಗಳಲ್ಲಿ ಹಾಗೆಲ್ಲ ಮಾಡಲಾಗದು, ಮುಂದೆ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧಾರ್ಮಿಕ ಬಾವುಟ ಹಾರಿಸಲು ಮುಂದಾಗಬಹುದು ಎಂದು ಸಿದ್ದರಾಮಯ್ಯ ಹೇಳಿದರು. ಯಾವ ಬಾವುಟ ಹಾರಿಸಲು ಪರ್ಮಿಷನ್ ತೆಗೆದುಕೊಂಡಿದ್ದರೋ ಅದನ್ನು ಹಾರಿಸದ ಕಾರಣ ಮಂಡ್ಯ ಜಿಲ್ಲಾಡಳಿತ ಕ್ರಮ ಜರುಗಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸುವ ಅನುಮತಿ ಪಡೆದು ಹನುಮ ಧ್ವಜ ಹಾರಿಸಿದ್ದಕ್ಕೆ ಕ್ರಮ: ಸಿದ್ದರಾಮಯ್ಯ
|

Updated on: Jan 29, 2024 | 2:36 PM

ಬೆಂಗಳೂರು: ಕೆರಗೋಡುನಲ್ಲಿ ಹನುಮ ಧ್ವಜ (Hanuma flag) ತೆರವುಗೊಳಿಸಿದ ಪ್ರಕರಣವನ್ನು ಬಿಜೆಪಿ ನಾಯಕರು ಅನಗತ್ಯವಾಗಿ ವಿವಾದಕ್ಕೀಡು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಇದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗೊಳೊಂದಿಗೆ ಮಾತಾಡಿದ ಮುಖ್ಯಮಂತ್ರಿಯವರು, ಅವರು ರಾಷ್ಟ್ರಧ್ವಜ (National Flag) ಇಲ್ಲವೇ ಕರ್ನಾಟಕದ ಧ್ವಜ (Kannada Flag) ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದಾರೆ ಆದರೆ ಹನುಮ ಧ್ವಜವನ್ನು ಹಾರಿಸಿ ತಮ್ಮ ಅಜೆಂಡಾವನ್ನು ಪ್ರಚುರಪಡಿಸಿದ್ದಾರೆ. ಅವರು ರಾಷ್ಟ್ರಧ್ವಜ ಹಾರಿಸಿದ್ದರೆ ಯಾವುದೇ ಅಭ್ಯಂತರ, ತಕರಾರು ಇರುತ್ತಿರಲಿಲ್ಲ ಎಂದು ಹೇಳಿದರು. ಸರಕಾರೀ ಸ್ಥಳಗಳಲ್ಲಿ ಹಾಗೆಲ್ಲ ಮಾಡಲಾಗದು, ಮುಂದೆ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧಾರ್ಮಿಕ ಬಾವುಟ ಹಾರಿಸಲು ಮುಂದಾಗಬಹುದು ಎಂದು ಸಿದ್ದರಾಮಯ್ಯ ಹೇಳಿದರು. ಯಾವ ಬಾವುಟ ಹಾರಿಸಲು ಪರ್ಮಿಷನ್ ತೆಗೆದುಕೊಂಡಿದ್ದರೋ ಅದನ್ನು ಹಾರಿಸದ ಕಾರಣ ಮಂಡ್ಯ ಜಿಲ್ಲಾಡಳಿತ ಕ್ರಮ ಜರುಗಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us