ರಣಬೀರ್ ಕಪೂರ್ ಒಡೆತನದ 8 ಕೋಟಿ ರೂ. ಕಾರಿನ ಹಿಂದೆ ಬಿದ್ದ ಫ್ಯಾನ್ಸ್; ಅಪ್ಸೆಟ್ ಆದ ನಟ ಮಾಡಿದ್ದೇನು?

ಇತ್ತೀಚೆಗೆ ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾ ಶೂಟ್ ಮುಗಿಸಿ ಸೆಟ್​ನಿಂದ ಹೊರಡುವವರಿದ್ದರು. ಈ ವೇಳೆ ಅವರು ಬೆಂಟ್ಲಿ ಕಾರಿನಲ್ಲಿದ್ದರು. ಈ ಕಾರಿಗೆ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ. ಇದು ರಣಬೀರ್​ಗೆ ಖುಷಿ ನೀಡಿಲ್ಲ.

ರಣಬೀರ್ ಕಪೂರ್ ಒಡೆತನದ 8 ಕೋಟಿ ರೂ. ಕಾರಿನ ಹಿಂದೆ ಬಿದ್ದ ಫ್ಯಾನ್ಸ್; ಅಪ್ಸೆಟ್ ಆದ ನಟ ಮಾಡಿದ್ದೇನು?
ರಣಬೀರ್
Follow us
ರಾಜೇಶ್ ದುಗ್ಗುಮನೆ
|

Updated on: Apr 08, 2024 | 12:23 PM

ನಟ ರಣಬೀರ್ ಕಪೂರ್ (Ranbir Kapoor) ಅವರು ಎಲ್ಲಾ ಸಮಯದಲ್ಲೂ ಕೂಲ್ ಆಗಿರೋದಿಲ್ಲ. ಅವರು ಫ್ಯಾನ್ಸ್ ವರ್ತನೆಗೆ ಆಗಾಗ ಕೋಪಗೊಂಡಂತೆ ಕಾಣಿಸಿಕೊಂಡಿದ್ದೂ ಇದೆ. ಫ್ಯಾನ್ಸ್ ಹಾಗೂ ಪಾಪರಾಜಿಗಳು ಅವರನ್ನು ಮುತ್ತಿಕೊಂಡರೆ ಕೆಲವೊಮ್ಮೆ ಇಷ್ಟ ಆಗುವುದಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಣಬೀರ್ ಕಪೂರ್ ಸಖತ್ ಅಪ್ಸೆಟ್ ಆಗಿರೋದು ಕಂಡು ಬಂದಿದೆ.

ರಣಬೀರ್ ಕಪೂರ್ ಅವರು ಸದ್ಯ ‘ರಾಮಾಯಣ’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅವರು ಗಡ್ಡ ಮೀಸೆ ಬೋಳಿಸಿಕೊಂಡಿದ್ದಾರೆ. ಈ ಲುಕ್​ನಲ್ಲಿ ಅವರು ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾ ಶೂಟ್ ಮುಗಿಸಿ ಸೆಟ್​ನಿಂದ ಹೊರಡುವವರಿದ್ದರು. ಈ ವೇಳೆ ಅವರು ಬೆಂಟ್ಲಿ ಕಾರಿನಲ್ಲಿದ್ದರು. ಈ ಕಾರಿಗೆ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ. ಇದು ರಣಬೀರ್​ಗೆ ಖುಷಿ ನೀಡಿಲ್ಲ.

ರಣಬೀರ್ ಕಪೂರ್ ಅವರು ಪ್ರಯಾಣ ಮಾಡುತ್ತಿದ್ದುದ್ದು 8 ಕೋಟಿ ರೂಪಾಯಿ ಬೆಲೆಯ ಕಾರು. ಈ ಕಾರಿಗೆ ಫ್ಯಾನ್ಸ್ ಮುತ್ತಿಕೊಂಡಿದ್ದನ್ನು ನೋಡಿ ಅವರು ಅಪ್ಸೆಟ್ ಆದರು. ಒಂದು ಕ್ಲಿಪ್​ನಲ್ಲಿ ಅವರು ಮುಖ ಮುಚ್ಚಿಕೊಂಡಿದ್ದರೆ, ಮತ್ತೊಂದು ವಿಡಿಯೋದಲ್ಲಿ ಅವರು ‘ಏನಿದು ವರ್ತನೆ’ ಎಂದು ಜನರತ್ತ ಕೈ ತೋರಿಸುತ್ತಿರುವ ವಿಡಿಯೋ ಇದೆ.

ಇದನ್ನೂ ಓದಿ: ಬಿಲ್ಲು ಬಾಣ ಹಿಡಿದು ‘ರಾಮಾಯಣ’ ಚಿತ್ರಕ್ಕೆ ರೆಡಿ ಆದ ರಣಬೀರ್ ಕಪೂರ್; ನಡೆದಿದೆ ಭರ್ಜರಿ ಸಿದ್ಧತೆ

ರಣಬೀರ್ ಕಪೂರ್ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ಬ್ಯಾಕ್ ಟು ಬ್ಯಾಕ್ ಯಶಸ್ಸು ಕಂಡಿದ್ದಾರೆ. ‘ಬ್ರಹ್ಮಾಸ್ತ್ರ’, ‘ತೂ ಜೂಟಿ ಮೇ ಮಕ್ಕರ್’, ‘ಅನಿಮಲ್’ ಸಿನಿಮಾಗಳು ಗೆಲುವು ಕಂಡಿವೆ. ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆದ ‘ಅನಿಮಲ್’ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ