‘ಬದುಕುವ ಸಾಧ್ಯತೆ ಶೇ.30 ಮಾತ್ರ’: ಇದು ಅಕ್ಷಯ್​ ಕುಮಾರ್​ ಜೀವನದ ಅಪಾಯಕಾರಿ ಸ್ಟಂಟ್

‘ರನ್​ವೇನಲ್ಲಿ ವಿಮಾನ ಚಲಿಸುವಾಗಲೇ ನಾನು ಅದನ್ನು ಹಿಡಿಯಬೇಕಿತ್ತು. ಬಳಿಕ, ಹಾರುವ ವಿಮಾನದ ಮೇಲೆ ನಿಂತುಕೊಳ್ಳಬೇಕಿತ್ತು. ನಂತರ ಅಲ್ಲಿಂದ ಹಾಟ್​ ಏರ್​ ಬಲೂನ್​ ಮೇಲೆ ನಾನು ಜಿಗಿಯಬೇಕಿತ್ತು’ ಎಂದು ಆ ಸನ್ನಿವೇಶವನ್ನು ಅಕ್ಷಯ್​ ಕುಮಾರ್​ ಅವರು ನೆನಪಿಸಿಕೊಂಡಿದ್ದಾರೆ. ‘ಬಡೆ ಮಿಯಾ ಚೋಟೆ ಮಿಯಾ’ ಚಿತ್ರದ ಟ್ರೇಲರ್​ ರಿಲೀಸ್​ ವೇಳೆ ಅವರು ಮಾತನಾಡಿದ್ದಾರೆ.

‘ಬದುಕುವ ಸಾಧ್ಯತೆ ಶೇ.30 ಮಾತ್ರ’: ಇದು ಅಕ್ಷಯ್​ ಕುಮಾರ್​ ಜೀವನದ ಅಪಾಯಕಾರಿ ಸ್ಟಂಟ್
ಅಕ್ಷಯ್​ ಕುಮಾರ್​
Follow us
ಮದನ್​ ಕುಮಾರ್​
|

Updated on: Mar 26, 2024 | 10:36 PM

ಬಾಲಿವುಡ್​ನ ಸ್ಟಾರ್ ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಎಲ್ಲ ಬಗೆಯ ಸಿನಿಮಾಗಳನ್ನೂ ಮಾಡಿದ್ದಾರೆ. ಆ್ಯಕ್ಷನ್​, ಕಾಮಿಡಿ, ರೊಮ್ಯಾನ್ಸ್​, ಸಸ್ಪೆನ್ಸ್​ ಥ್ರಿಲ್ಲರ್​, ಹಾರರ್​, ಬಯೋಪಿಕ್​.. ಹೀಗೆ ಎಲ್ಲ ರೀತಿಯ ಸಿನಿಮಾಗಳೂ ಅವರ ಖಾತೆಯಲ್ಲಿವೆ. ಅವುಗಳ ಪೈಕಿ ಆ್ಯಕ್ಷನ್​ ಸಿನಿಮಾ ಎಂದರೆ ಅಭಿಮಾನಿಗಳಿಗೆ ಸಖತ್​ ಇಷ್ಟ. ಈಗ ಅವರು ನಟಿಸಿರುವ ‘ಬಡೆ ಮಿಯಾ ಚೋಟೆ ಮಿಯಾ’ (Bade Miyan Chote Miyan) ಚಿತ್ರದಲ್ಲೂ ಸಹ ಸಖತ್​ ಆ್ಯಕ್ಷನ್​ ಸೀನ್​ಗಳು ಇವೆ. ಈ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮ ಇಂದು (ಮಾರ್ಚ್​ 26) ನಡೆದಿದೆ. ಈ ವೇಳೆ ಅಕ್ಷಯ್​ ಕುಮಾರ್​ ಅವರು ತಮ್ಮ ಜೀವನದ ಅತ್ಯಂತ ಅಪಾಯಕಾರಿ ಸ್ಟಂಟ್​ ಬಗ್ಗೆ ಮಾತನಾಡಿದ್ದಾರೆ.

‘ನಿಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಅಪಾಯಕಾರಿಯಾದ ಸಾಹಸ ದೃಶ್ಯ ಯಾವುದು’ ಎಂದು ಕೇಳಿದ್ದಕ್ಕೆ ಅಕ್ಷಯ್​ ಕುಮಾರ್​ ಅವರು ಉತ್ತರಿಸಿದ್ದಾರೆ. ‘ಕಿಲಾಡಿ 420’ ಸಿನಿಮಾದ ಶೂಟಿಂಗ್​ ಸಂದರ್ಭವನ್ನು ಅವರು ನೆನಪಿಸಿಕೊಂಡಿದ್ದಾರೆ. ಅಕ್ಷಯ್​ ಕುಮಾರ್​ ಹೇಳಿದ ವಿವರಗಳನ್ನು ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಯಾಕೆಂದರೆ ಆ ಸೀನ್​ ಮಾಡುವಾಗ ಅವರು ತಮ್ಮ ಪ್ರಾಣವನ್ನೇ ಪಣಕ್ಕೆ ಇಟ್ಟಿದ್ದರು!

ಇದನ್ನೂ ಓದಿ: ‘ಜಗತ್ತು ಇದಕ್ಕಿಂತ ದೊಡ್ಡ ಯುದ್ಧ ಕಂಡಿಲ್ಲ’: ಟ್ರೇಲರ್​ ನೋಡಿ ಬೆರಗಾದ ಅಕ್ಷಯ್​ ಕುಮಾರ್​ ಫ್ಯಾನ್ಸ್​

‘ರನ್​ವೇನಲ್ಲಿ ವಿಮಾನ ಚಲಿಸುತ್ತಿರುವಾಗಲೇ ಅದನ್ನು ನಾನು ಹಿಡಿಯಬೇಕಿತ್ತು. ನಂತರ, ಹಾರುತ್ತಿರುವ ವಿಮಾನದ ಮೇಲೆ ನಾನು ನಿಂತುಕೊಳ್ಳಬೇಕಿತ್ತು. ಬಳಿಕ ಅಲ್ಲಿಂದ ಹಾಟ್​ ಏರ್​ ಬಲೂನ್​ ಮೇಲೆ ಜಿಗಿಯಬೇಕಿತ್ತು. ಆ ಸಮಯದಲ್ಲಿ ಅದು ನನ್ನ ಹುಚ್ಚಾಟವಾಗಿತ್ತು. ನಾನು ಕ್ರೇಜಿ ಆಗಿದ್ದೆ. ದೇವರನ್ನು ಪರೀಕ್ಷಿಸಲು ಜೀವನದಲ್ಲಿ ಒಮ್ಮೆ ಅದನ್ನು ಪ್ರಯತ್ನಿಸಿದೆ. ಧನ್ಯವಾದಗಳು ದೇವರೇ, ನಾನು ಸುರಕ್ಷಿತವಾಗಿದ್ದೆ. ನಾನು ಸಾಯುವ ಸಾಧ್ಯತೆ ಶೇ.70ರಷ್ಟು ಇತ್ತು. ಬದುಕುವ ಸಾಧ್ಯತೆ ಶೇಕಡ 30 ಮಾತ್ರ. ಅಷ್ಟು ಕಷ್ಟಕರವಾಗಿತ್ತು ಆ ಸನ್ನಿವೇಶ. ಜೀವನದಲ್ಲಿ ಮತ್ತೆ ಎಂದಿಗೂ ಅದನ್ನು ಮಾಡಲಾರೆ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ‘ನಾಟು ನಾಟು..’ ಡ್ಯಾನ್ಸ್​ ಕಾಪಿ ಮಾಡಿದ ಅಕ್ಷಯ್​ ಕುಮಾರ್​; ಶುರುವಾಯ್ತು ಟ್ರೋಲ್​

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಟೈಗರ್​ ಶ್ರಾಫ್​ ನಟಿಸಿದ್ದಾರೆ. ಅವರು ಕೂಡ ಆ್ಯಕ್ಷನ್​ ಸಿನಿಮಾಗಳ ಮೂಲಕ ಹೆಸರುವಾಸಿ ಆಗಿದ್ದಾರೆ. ಇಬ್ಬರ ಕಾಂಬಿನೇಷನ್​ನಿಂದ ಸಿನಿಮಾ ಮೇಲಿನ ಹೈಪ್​ ಹೆಚ್ಚಾಗಿದೆ. ಏಪ್ರಿಲ್​ 10ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಈಗಾಗಲೇ ಟ್ರೇಲರ್​ ಗಮನ ಸೆಳೆದಿದೆ. ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ ಅವರಗೆ ಈ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರ ಇದೆ. ಅಲಿ ಅಬ್ಬಾಸ್​ ಜಫರ್​ ಅವರು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಅಕ್ಷಯ್​ ಕುಮಾರ್​ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ