‘ಜಗತ್ತು ಇದಕ್ಕಿಂತ ದೊಡ್ಡ ಯುದ್ಧ ಕಂಡಿಲ್ಲ’: ಟ್ರೇಲರ್ ನೋಡಿ ಬೆರಗಾದ ಅಕ್ಷಯ್ ಕುಮಾರ್ ಫ್ಯಾನ್ಸ್
‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಅಭಿನಯಿಸಿದ್ದಾರೆ. ಅಲಿ ಅಬ್ಬಾಸ್ ಜಫರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಆಗಿದ್ದು, ಸಾಹಸ ದೃಶ್ಯಗಳು ಗಮನ ಸೆಳೆಯುತ್ತಿವೆ. ಏ.10ರಂದು ‘ಬಡೆ ಮಿಯಾ ಚೋಟೆ ಮಿಯಾ’ ಚಿತ್ರ ತೆರೆಕಾಣಲಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಬಡೆ ಮಿಯಾ ಚೋಟೆ ಮಿಯಾ’ (Bade Miyan Chote Miyan) ಚಿತ್ರ ಕೂಡ ಇದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar), ಟೈಗರ್ ಶ್ರಾಫ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ಟ್ರೇಲರ್ ಮೂಲಕ ನಿರೀಕ್ಷೆ ಡಬಲ್ ಮಾಡಲಾಗಿದೆ. ಇಂದು (ಮಾರ್ಚ್ 26) ‘ಬಡೆ ಮಿಯಾ ಚೋಟೆ ಮಿಯಾ’ ಟ್ರೇಲರ್ (Bade Miyan Chote Miyan Trailer) ರಿಲೀಸ್ ಆಗಿದೆ. ಇದರಲ್ಲಿನ ದೃಶ್ಯಗಳನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮೈನವಿರೇಳಿಸುವಂತಹ ಆ್ಯಕ್ಷನ್ ದೃಶ್ಯಗಳು ಈ ಟ್ರೇಲರ್ನಲ್ಲಿ ಹೈಲೈಟ್ ಆಗಿವೆ.
‘ಜಗತ್ತು ಇದಕ್ಕಿಂತ ದೊಡ್ಡ ಯುದ್ಧವನ್ನು ಕಂಡಿಲ್ಲ’ ಎಂದು ವಿಲನ್ ಹೇಳುವ ಡೈಲಾಗ್ ಕೇಳಿ ಸಿನಿಪ್ರಿಯರ ನಿರೀಕ್ಷೆ ಜಾಸ್ತಿ ಆಗಿದೆ. ಭಯಂಕರವಾದ ಯುದ್ಧವನ್ನು ಸಾರಿರುವ ಖಳನನ್ನು ಮಣಿಸಲು ಬರುವ ಸೈನಿಕರಾಗಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಖತ್ ಅದ್ದೂರಿಯಾಗಿ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ.
ಇದನ್ನೂ ಓದಿ: ಅಬು ಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ಅಕ್ಷಯ್ ಕುಮಾರ್
ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ಅವರು ಆ್ಯಕ್ಷನ್ ಸಿನಿಮಾಗಳ ಮೂಲಕ ಹೆಸರುವಾಸಿ ಆಗಿದ್ದಾರೆ. ಅವರಿಬ್ಬರು ಒಟ್ಟಿಗೆ ನಟಿಸಿರುವುದರಿಂದ ಕ್ರೇಜ್ ಹೆಚ್ಚಾಗಿದೆ. ಈದ್ ಪ್ರಯುಕ್ತ ಏಪ್ರಿಲ್ 10ರಂದು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ಸಿದ್ಧವಾಗಿದೆ.
‘ಬಡೆ ಮಿಯಾ ಚೋಟೆ ಮಿಯಾ’ ಟ್ರೇಲರ್:
‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಅಲಿ ಅಬ್ಬಾಸ್ ಜಫರ್ ಅವರು ನಿರ್ದೇಶನ ಮಾಡಿದ್ದಾರೆ. ‘ಸುಲ್ತಾನ್’, ‘ಟೈಗರ್ ಜಿಂದಾ ಹೈ’ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಅವರು ಈಗ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಆ ಕಾರಣದಿಂದಲೂ ‘ಬಡೆ ಮಿಯಾ ಚೋಟೆ ಮಿಯಾ’ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿದೆ. ಈ ಸಿನಿಮಾದಲ್ಲಿ ಮಾನುಚಿ ಚಿಲ್ಲರ್, ಪೃಥ್ವಿರಾಜ್ ಸುಕುಮಾರನ್, ಸೋನಾಕ್ಷಿ ಸಿನ್ಹಾ ಮುಂತಾದವರು ಕೂಡ ನಟಿಸಿದ್ದಾರೆ. ‘ಪೂಜಾ ಎಂಟರ್ಟೇನ್ಮೆಂಟ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.