ಐಪಿಎಲ್ ಭದ್ರತಾ ಸಿಬ್ಬಂದಿ ವಿರುದ್ಧ ನಟ ವರುಣ್ ಧವನ್ ಆಕ್ರೋಶ

Varun Dhawan: ಐಪಿಎಲ್ ಶುರುವಾಗಿ ಕೆಲವೇ ದಿನಗಳು ಕಳೆದಿದೆ, ಕೆಲವು ಬಾಲಿವುಡ್ ನಟ-ನಟಿಯರು ಐಪಿಎಲ್ ಪಂದ್ಯಗಳನ್ನು ನೋಡಲು ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಆದರೆ ಬಾಲಿವುಡ್ ನಟ ವರುಣ್ ಧವನ್ ಐಪಿಎಲ್ ಭದ್ರತಾ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊಹಾಕಿದ್ದಾರೆ.

ಐಪಿಎಲ್ ಭದ್ರತಾ ಸಿಬ್ಬಂದಿ ವಿರುದ್ಧ ನಟ ವರುಣ್ ಧವನ್ ಆಕ್ರೋಶ
ವರುಣ್ ಧವನ್
Follow us
ಮಂಜುನಾಥ ಸಿ.
|

Updated on:Mar 26, 2024 | 7:18 PM

ಐಪಿಎಲ್ (IPL) ಶುರುವಾಗಿ ಕೆಲವೇ ದಿನಗಳಾಗಿವೆ. ಐಪಿಎಲ್ ಉದ್ಘಾಟನೆ ಈ ಬಾರಿ ಅದ್ಧೂರಿಯಾಗಿ ನೆರವೇರಿದೆ. ಹಲವು ತಾರಾ ನಟರು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಪಂದ್ಯಗಳನ್ನು ನೋಡಲು ಸಹ ಹಲವು ನಟ-ನಟಿಯರು ಆಗಮಿಸಿ ಮೆಚ್ಚಿನ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ಆದರೆ ಬಾಲಿವುಡ್ ನಟ ವರುಣ್ ಧವನ್ ಮಾತ್ರ ಐಪಿಎಲ್​ನ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾಗಿದ್ದಾರೆ. ವರುಣ್ ಧವನ್ ಸಿಟ್ಟಿಗೆ ಕಾರಣವೂ ಇದೆ.

ನಿನ್ನೆ (ಮಾರ್ಚ್ 25) ನಡೆದ ಮುಂಬೈ ಹಾಗೂ ಗುಜರಾತ್ ನಡುವೆ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ನಾಯಿಯೊಂದು ನುಗ್ಗಿತ್ತು. ಆದರೆ ನಾಯಿ ಮೈದಾನದ ಒಳಗೆ ಬರುವುದಕ್ಕೆ ಮೊದಲೇ ಭದ್ರತಾ ಸಿಬ್ಬಂದಿ ಅದನ್ನು ತಡೆಯಲು ಯತ್ನಿಸಿದರು. ಈ ವೇಳೆ ಹಲವರು ನಾಯಿಯನ್ನು ಕಾಲಿನಿಂದಲೂ ಒದ್ದರು. ಆದರೆ ಆ ನಾಯಿ ಎಲ್ಲರಿಂದಲೂ ತಪ್ಪಿಸಿಕೊಂಡು ಮೈದಾನದ ಒಳಕ್ಕೆ ಓಡಿ ಬಂತು. ಕೊನೆಗೆ ಹಾಗೋ ಹೀಗೋ ಮಾಡಿ ನಾಯಿಯನ್ನು ಮೈದಾನದಿಂದ ಹೊರಗೆ ಓಡಿಸಲಾಯ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಾಯಿಯನ್ನು ಒದ್ದ ಭದ್ರತಾ ಸಿಬ್ಬಂದಿ ವಿರುದ್ಧ ಹಲವರು ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲಿ ನಟ ವರುಣ್ ಧವನ್ ಸಹ ಒಬ್ಬರು. ಪ್ರಾಣಿ ಪ್ರೇಮಿಯಾಗಿರುವ ವರುಣ್ ಧವನ್, ಭದ್ರತಾ ಸಿಬ್ಬಂದಿ ನಾಯಿಯನ್ನು ತಡೆಯುವ ಭರದಲ್ಲಿ ಒದೆಯುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ‘ಅದು ನಾಯಿ, ಫುಟ್​ಬಾಲ್​ ಅಲ್ಲ. ಅಲ್ಲದೆ ಆ ನಾಯಿ ಯಾರಿಗೂ ಕಚ್ಚಲು ಬಂದಿಲ್ಲ, ಯಾರಿಗೂ ಅಪಾಯ ತಂದೊಡ್ಡುತ್ತಿರಲಿಲ್ಲ. ನಾಯಿಯನ್ನು ತಡೆಯಲು ಹಿಂಸೆ ಮಾಡುವುದರ ಬದಲು ಬೇರೆ ದಾರಿ ಕಂಡುಕೊಳ್ಳಬಹುದಿತ್ತು’ ಎಂದಿದ್ದಾರೆ.

ಇದನ್ನೂ ಓದಿ:ಲೈಂಗಿಕ ಕ್ರಿಯೆ ನಡೆಸುವಾಗ ಭಗವದ್ಗೀತೆ ಹಿಡಿದ ಯುವತಿ; ವಿವಾದಾತ್ಮಕ ದೃಶ್ಯವನ್ನು ಪ್ರಶ್ನಿಸಿದ ವರುಣ್ ಧವನ್

ವರುಣ್ ಧವನ್ ಮಾತ್ರವೇ ಅಲ್ಲದೆ, ನಟಿ ವೇದಿಕಾ ಸಹ ಈ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ‘ನಮ್ಮದೇ ಆಸ್ತಿ ಎಂಬಂತೆ ನಾಯಿಯನ್ನು ಒದೆಯಲಾಗುತ್ತಿದೆ. ಪ್ರಾಣಿ ಹಿಂಸೆ ಎಂಬುದು ನಮ್ಮ ದೇಶದ ಕ್ರೀಡೆ ಆಗಿಬಿಟ್ಟಿದೆಯೇ. ಪ್ರಾಣಿ ಹಿಂಸೆಯ ವಿರುದ್ಧ ಸೂಕ್ತವಾದ ಕಾನೂನು ಇಲ್ಲದೇ ಇರುವುದೇ ಇದಕ್ಕೆ ಕಾರಣ ಅನಿಸುತ್ತಿದೆ. ಪ್ರಾಣಿಗಳಿಗೆ ಈ ರೀತಿ ಹಿಂಸೆ ಕೊಟ್ಟು ತಮ್ಮನ್ನು ತಾವು ಮನುಷ್ಯರು ಎಂದು ಕರೆದುಕೊಳ್ಳುವ ಈ ಮನುಷ್ಯರಿಗೆ ಧಿಕ್ಕಾರವಿರಲಿ. ಪ್ರಾಣಿಗಳಿಗೆ ಹೊಡೆಯುವುದು, ಒದೆಯುವುದು, ಹಿಂಸೆ ಮಾಡುವುದು ನಮ್ಮ ಸಂಸ್ಕೃತಿ ಎಂಬಂತಾಗಿಬಿಟ್ಟಿದೆ. ವಿಡಿಯೋನಲ್ಲಿ ಒಬ್ಬ ವ್ಯಕ್ತಿಯಂತೂ ನಾಯಿಗೆ ಬಲವಾಗಿ ಹೊಡೆದಿದ್ದಾನೆ. ಯಾವಾಗ ನಾವು ಪ್ರಾಣಿಗಳಿಗೆ ಗೌರವ ಕೊಡುವುದನ್ನು ಕಲಿಯುತ್ತೇವೆ? ಸೌಮ್ಯವಾಗಿ ವ್ಯವಹರಿಸುವುದು ಕಲಿಯುತ್ತೇವೆ?’ ಎಂದು ಪ್ರಶ್ನೆ ಮಾಡಿದ್ದಾರೆ.

View this post on Instagram

A post shared by Vedhika (@vedhika4u)

ನಾಯಿಗೆ ಹೊಡೆದಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದು, ಹಲವರು ಭದ್ರತಾ ಸಿಬ್ಬಂದಿಯ ಈ ನಡೆಯನ್ನು ಖಂಡಿಸಿದ್ದಾರೆ. ಇನ್ನು ಕೆಲವರು ತಮಾಷೆಗೆ ವಿಡಿಯೋ ಹಂಚಿಕೊಂಡಿದ್ದಾರೆ. ನಾಯಿ ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ ಕೆಲವರು ‘ಹಾರ್ದಿಕ್, ಹಾರ್ದಿಕ್’ ಎಂದು ಕೂಗಿರುವ ವಿಡಿಯೋ ಸಹ ಹರಿದಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:12 pm, Tue, 26 March 24

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ