ಲೋಕಸಭಾ ಚುನಾವಣಾ ಕಣಕ್ಕೆ ರಾಮ್ ಚರಣ್ ಸಿನಿಮಾ ನಾಯಕಿ

Neha Sharma: ರಾಮ್ ಚರಣ್ ನಟಿಸಿದ್ದ ‘ಚಿರುತ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಟಿ ನೇಹಾ ಶರ್ಮಾ ಈಗ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ.

ಲೋಕಸಭಾ ಚುನಾವಣಾ ಕಣಕ್ಕೆ ರಾಮ್ ಚರಣ್ ಸಿನಿಮಾ ನಾಯಕಿ
Follow us
|

Updated on:Mar 26, 2024 | 7:00 PM

ದೇಶದಾದ್ಯಂತ ಲೋಕಸಭಾ ಚುನಾವಣಾ (Lok Sabha Eelection) ಕಾವು ಏರಿದೆ. ಸಿನಿಮಾ ಸೆಲೆಬ್ರಿಟಿಗಳಿಗೂ ರಾಜಕೀಯಕ್ಕೂ ನಂಟು ಬಹಳ ಹತ್ತಿರದ್ದು. ಹಲವು ಸಿನಿಮಾ ನಟ-ನಟಿಯರು ಚುನಾವಣೆಗೆ ನಿಂತು ಒಳ್ಳೆಯ ರಾಜಕಾರಣಿಗಳೂ ಆಗಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಸಹ ಸಿನಿಮಾ ನಟ-ನಟಿಯರಿಗೆ ಟಿಕೆಟ್ ನೀಡಲು ಉತ್ಸುಕರಾಗಿರುತ್ತಾರೆ. ಸಾಮಾನ್ಯವಾಗಿ ನಟ-ನಟಿಯರು ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಬಳಿಕ ರಾಜಕೀಯದತ್ತ ತಲೆ ಹಾಕುತ್ತಾರೆ. ಅಲ್ಲೊಬ್ಬರು ಇಲ್ಲೊಬ್ಬರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಾಗಲೇ ಚುನಾವಣೆಗೆ ಸ್ಪರ್ಧಿಸುತ್ತಾರೆ. ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದ ನಟಿಯೊಬ್ಬರು ಇದೀಗ ಚುನಾವಣಾ ಕಣಕ್ಕೆ ಧುಮುಕಲು ಅಣಿಯಾಗಿದ್ದಾರೆ. ಅವರೇ ನೇಹಾ ಶರ್ಮಾ.

ರಾಮ್ ಚರಣ್ ನಾಯಕ ನಟನಾಗಿ ಎಂಟ್ರಿ ಕೊಟ್ಟ ‘ಚಿರುತ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನೇಹಾ ಶರ್ಮಾ, ಇದೀಗ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ‘ಚಿರುತ’ ಸಿನಿಮಾ ಮೂಲಕವೇ ನಟಿಯಾಗಿ ಎಂಟ್ರಿ ಕೊಟ್ಟಿದ್ದ ನೇಹಾ ಶರ್ಮಾ ಆ ನಂತರ ಕೆಲವು ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:Neha Sharma: ಹಾಟ್​ ಫೋಟೋ ಮೂಲಕ ಟೆಂಪ್ರೇಚರ್ ಹೆಚ್ಚಿಸಿದ ನಟಿ ನೇಹಾ ಶರ್ಮಾ

ಬಿಹಾರ ಕಾಂಗ್ರೆಸ್ ಮುಖಂಡ, ಹಾಲಿ ಶಾಸಕ ಅಜಯ್ ಶರ್ಮಾರ ಪುತ್ರಿಯಾಗಿರುವ ನೇಹಾ ಶರ್ಮಾ, ಬಿಹಾರದ ಪ್ರಮುಖ ಲೋಕಸಭಾ ಕ್ಷೇತ್ರ ಭಗಲ್​ಪುರ್​ನಿಂದ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ಈ ಬಗ್ಗೆ ಅವರ ತಂದೆ ಅಜಯ್ ಶರ್ಮಾ ಸಹ ಮಾತನಾಡಿದ್ದು, ‘ಭಗಲ್​ಪುರ ಕ್ಷೇತ್ರವನ್ನು ಗೆದ್ದೇ ಗೆಲ್ಲಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ನಿಶ್ಚಯವಾಗಿದೆ. ನನ್ನ ಪುತ್ರಿಯೇ ಆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿ ಎಂಬುದು ನನ್ನ ಬಯಕೆಯಾಗಿದೆ’ ಎಂದಿದ್ದಾರೆ. ಬಿಹಾರದ ಪ್ರಮುಖ ಕಾಂಗ್ರೆಸ್ ಮುಖಂಡರಾಗಿರುವ ಅಜಯ್ ಶರ್ಮಾ, ತಮ್ಮ ಪುತ್ರಿಗೆ ಟಿಕೆಟ್ ಕೊಡಿಸುವುದು ಖಾತ್ರಿ ಎನ್ನಲಾಗುತ್ತಿದೆ.

ನೇಹಾ ಶರ್ಮಾ, 2007 ರಲ್ಲಿ ‘ಚಿರುತ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ನೀಡಿದರು. ಅದಾದ ಬಳಿಕ ತೆಲುಗಿನ ‘ಕುರ್ರಾಡು’ ಸಿನಿಮಾದಲ್ಲಿ ನಟಿಸಿದರು. ಬಳಿಕ 2010ರಲ್ಲಿ ‘ಕ್ರಾಕ್’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ವರೆಗೆ 17 ಸಿನಿಮಾಗಳಲ್ಲಿ ನಟಿಸಿರುವ ನೇಹಾ ಶರ್ಮಾ, ಒಂದು ಮಲಯಾಳಂ ಸಿನಿಮಾ ಹಾಗೂ ಒಂದು ಮ್ಯಾಂಡರೀನ್ ಭಾಷೆಯ ಸಿನಿಮಾದಲ್ಲಿಯೂ ನಟಿಸಿದ್ದಾರೆ. 2023 ರಲ್ಲಿ ಬಿಡುಗಡೆ ಆದ ‘ಜೋಗಿರಾ ಸಾ ರಾ ರಾ’ ನೇಹಾ ಶರ್ಮಾ ನಟನೆಯ ಕೊನೆಯ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Tue, 26 March 24

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ