Madhubala: ಮಧುಬಾಲಾ ಜನ್ಮದಿನ: ಈ ನಟಿಯ ಮೂಲ ಹೆಸರು ಏನು?
ಮಧು ಅವರು ಹುಟ್ಟಿದ್ದು ತಮಿಳು ಕುಟುಂಬದಲ್ಲಿ. ಅವರು ಮುಂಬೈನ ಜುಹುದಲ್ಲಿರುವ ಸೇಂಟ್ ಜೋಸೆಪ್ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಬೇಬಿ ಮಧು ಮಾಲಿನಿ ಆಗಿ ಅವರು ಗುರುತಿಸಿಕೊಂಡರು.
ನಟಿ ಮಧುಬಾಲಾ (Madhubala) ಅವರಿಗೆ ಇಂದು (ಮಾರ್ಚ್ 26) ಜನ್ಮದಿನ. ಅವರಿಗೆ ಅನೇಕ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಅವರಿಗೆ ಈಗ 55 ವರ್ಷ. ಈ ವಯಸ್ಸಿನಲ್ಲೂ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಮಧು ಅವರ ಮೂಲ ಹೆಸರು ಮಧುಭಾಮಾ ರಘುನಾಥ್ ಮಾಲಿನಿ. ಅವರು ಹಾಗೂ ಹೇಮಾ ಮಾಲಿನಿ ಸೋದರ ಸಂಬಂಧಿಕರು. ಮಧುಬಾಲಾ ಅವರ ಯಶಸ್ಸಿನ ಹಾದಿಯ ಬಗ್ಗೆ ಇಲ್ಲಿದೆ ವಿವರ.
ಮಧು ಅವರು ಹುಟ್ಟಿದ್ದು ತಮಿಳು ಕುಟುಂಬದಲ್ಲಿ. ಅವರು ಮುಂಬೈನ ಜುಹುದಲ್ಲಿರುವ ಸೇಂಟ್ ಜೋಸೆಪ್ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಬೇಬಿ ಮಧು ಮಾಲಿನಿ ಆಗಿ ಅವರು ಗುರುತಿಸಿಕೊಂಡರು. ಅವರು ತಾಯಿ ರೇಣುಕಾ ಅವರಿಂದ ಭರತನಾಟ್ಯ ಕಲಿತರು. ಮಧುಬಾಲಾ ಅವರಿಗೆ ಆಗಿನ್ನೂ 13 ವರ್ಷ. ಆಗಲೇ ಅವರ ತಾಯಿ ಕ್ಯಾನ್ಸರ್ನಿಂದ ಮೃತಪಟ್ಟರು.
1991ರಲ್ಲಿ ರಿಲೀಸ್ ಆದ ‘ಫೂಲ್ ಔರ್ ಕಾಂತೆ’ ಚಿತ್ರದ ಮೂಲಕ ನಾಯಕಿಯಾಗಿ ಮಧು ಬಡ್ತಿ ಪಡೆದರು. ಈ ಸಿನಿಮಾ ಅಜಯ್ ದೇವಗನ್ ಅವರ ಮೊದಲ ಚಿತ್ರ ಆಗಿತ್ತು. 1992ರಲ್ಲಿ ರಿಲೀಸ್ ಆದ ಮಣಿ ರತ್ನಂ ನಿರ್ದೇಶನದ ‘ರೋಜಾ’ ಸಿನಿಮಾ ಮೂಲಕ ಮಧುಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಈ ಸಿನಿಮಾ ಮೂರು ರಾಷ್ಟ್ರ ಪ್ರಶಸ್ತಿ ಗೆದ್ದಿದೆ. ಈ ಸಿನಿಮಾ ಗೆದ್ದ ಬಳಿಕ ಅವರ ಖ್ಯಾತಿ ಸಾಕಷ್ಟು ಹೆಚ್ಚಿತು.
‘ಫೂಲ್ ಔರ್ ಆಂಕೆ’ ಚಿತ್ರದ ‘ತುಮ್ಸೆ ಮಿಲ್ನೆ ಕೋ ದಿಲ್ ಕರ್ತಾ ಹೈ’, ‘ಧೀರೆ ಧೀರೆ ಪ್ಯಾರ್ ಕೋ ಬಡಾನಾ ಹೈ’ ಮೊದಲಾದ ಹಾಡುಗಳು ಮೆಚ್ಚುಗೆ ಪಡೆದಿವೆ. ಡಿಡಿ ನ್ಯಾಷನಲ್ ವಾಹಿನಿಯಲ್ಲಿ ‘ಚಿತ್ರಹಾರ’ ಶೋನ ಅವರು ನಡೆಸಿಕೊಟ್ಟಿದ್ದರು. ಮಧು ಅವರು ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. 1993 ‘ಅಣ್ಣಯ್ಯ’ ಚಿತ್ರದ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು. 2015ರಲ್ಲಿ ‘ರನ್ನ’ ಸಿನಿಮಾದಲ್ಲಿ ಸುದೀಪ್ ಅತ್ತೆಯ ಪಾತ್ರ ಮಾಡಿದರು. ಆ ಬಳಿಕ ಅವರಿಗೆ ಹಲವು ಕನ್ನಡ ಸಿನಿಮಾ ಆಫರ್ಗಳು ಬಂದವು. ಇತ್ತೀಚೆಗೆ ರಿಲೀಸ್ ಆದ ತೆಲುಗಿನ ‘ಈಗಲ್’ ಸಿನಿಮಾದಲ್ಲಿ ಮಧುಬಾಲಾ ನಟಿಸಿದ್ದಾರೆ.
ಇದನ್ನೂ ಓದಿ: IPL 2024: ಕೆಕೆಆರ್-ಎಸ್ಆರ್ಹೆಚ್ ಪಂದ್ಯದ ಮಧ್ಯೆ ಕ್ರೀಡಾಂಗಣದಲ್ಲೇ ಸಿಗರೇಟ್ ಸೇದಿದ ಶಾರುಖ್ ಖಾನ್: ವಿಡಿಯೋ
ಮಧು ಅವರ ವೃತ್ತಿ ಜೀವನ 1991ರಿಂದ 2002ರವರೆಗೆ ಉತ್ತುಂಗದಲ್ಲಿತ್ತು. ಈ ಅವಧಿಯಲ್ಲಿ ಹಿಂದಿ, ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ಮಧು 2017ರಲ್ಲಿ ಕಿರುತೆರೆಗೂ ಕಾಲಿಟ್ಟರು.
ವೈಯಕ್ತಿಕ ಜೀವನ
ಮಧು ಅವರು 1999ರಲ್ಲಿ ಉದ್ಯಮಿ ಆನಂದ್ ಶಾ ಅವರನ್ನು ಮದುವೆ ಆದರು. ಮದುವೆ ನಂತರ ಅಮೆರಿಕ ಶಿಫ್ಟ್ ಆದರು. ಭಾರತಕ್ಕೆ ಬಂದು ಅವರು ಸಿನಿಮಾ ಕೆಲಸ ಮಾಡುತ್ತಿದ್ದಾರೆ. ಮಧು ಅವರು ಹೇಮಾ ಮಾಲಿನ ಅವರ ಸೋದರ ಸಂಬಂಧಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ