AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಕೆಕೆಆರ್-ಎಸ್​ಆರ್​ಹೆಚ್ ಪಂದ್ಯದ ಮಧ್ಯೆ ಕ್ರೀಡಾಂಗಣದಲ್ಲೇ ಸಿಗರೇಟ್ ಸೇದಿದ ಶಾರುಖ್ ಖಾನ್: ವಿಡಿಯೋ

Shahrukh Khan Smoking: ಧೂಮಪಾನ ಚಟದಿಂದ ಸದಾ ಸುದ್ದಿಯಲ್ಲಿರುವ ಶಾರುಖ್ ಖಾನ್ ಕೆಕೆಆರ್-ಎಸ್​ಆರ್​ಹೆಚ್ ಪಂದ್ಯದ ಮಧ್ಯೆ ಕ್ರೀಡಾಂಗಣದಲ್ಲೇ ಸಿಗರೇಟ್ ಸೇದುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಹೀಗೆ ಮಾಡಿರುವುದು ಕೆಲ ನೆಟ್ಟಿಗರನ್ನು ಕೆರಳಿಸಿದೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

IPL 2024: ಕೆಕೆಆರ್-ಎಸ್​ಆರ್​ಹೆಚ್ ಪಂದ್ಯದ ಮಧ್ಯೆ ಕ್ರೀಡಾಂಗಣದಲ್ಲೇ ಸಿಗರೇಟ್ ಸೇದಿದ ಶಾರುಖ್ ಖಾನ್: ವಿಡಿಯೋ
Shah Rukh Khan smoking
Vinay Bhat
|

Updated on:Mar 24, 2024 | 8:47 AM

Share

ಐಪಿಎಲ್ 2024 ರ ತಮ್ಮ ಮೊದಲ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತವರು ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು. ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ (Andre Russell) ಅವರು ಮನಬಂದಂತೆ ಬ್ಯಾಟ್ ಬೀಸಿದರು. ಕೇವಲ 25 ಎಸೆತಗಳಲ್ಲಿ 3 ಫೋರ್, 7 ಸಿಕ್ಸರ್ ಸಿಡಿಸಿ ಅಜೇಯ 64 ರನ್ ಚಚ್ಚಿದರು. ರಸೆಲ್ ಸಿಕ್ಸರ್‌ಗಳ ಸುರಿಮಳೆ ಕೋಲ್ಕತ್ತಾ ಅಭಿಮಾನಿಗಳನ್ನು ಸಂತೋಷಪಡಿಸಿದ್ದಲ್ಲದೆ, ತಂಡದ ಮಾಲೀಕ ಮತ್ತು ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರ ಹೃದಯವನ್ನೂ ಗೆದ್ದಿತು. ಆದರೆ ಇದೆಲ್ಲದರ ನಡುವೆ, ಶಾರುಖ್ ವಿವಾದದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಪಿಎಲ್ 2024 ಋತುವಿನಲ್ಲಿ ಕೋಲ್ಕತ್ತಾದ ಮೊದಲ ಪಂದ್ಯದಲ್ಲಿ ತಂಡವನ್ನು ಬೆಂಬಲಿಸಲು ಶಾರುಖ್ ಖಾನ್ ಕೂಡ ಮೈದಾನದಲ್ಲಿ ಹಾಜರಿದ್ದರು. ಶಾರುಖ್ ಅವರನ್ನು ನೋಡಿ ಅಭಿಮಾನಿಗಳು ಅವರ ಹೆಸರಿನಲ್ಲಿ ಘೋಷಣೆಗಳನ್ನು ಕೂಗಲು ಆರಂಭಿಸಿದರೆ, ಶಾರುಖ್ ಕೂಡ ಫ್ಯಾನ್ಸ್ ಮೇಲೆ ಪ್ರೀತಿಯ ಸುರಿಮಳೆಗೈದು ಕೈಕುಲುಕುತ್ತಲೇ ಫ್ಲೈಯಿಂಗ್ ಕಿಸ್ ನೀಡಿದರು. ಆದರೆ ಈ ಮಧ್ಯೆ ಅವರು ಸಿಗರೇಟ್ ಸೇದುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಿಷಭ್ ಪಂತ್ ಮಿಂಚಿನ ಸ್ಟಂಪಿಂಗ್​ಗೆ ಬೆರಗಾದ ಕ್ರಿಕೆಟ್ ಜಗತ್ತು: ರೋಚಕ ವಿಡಿಯೋ ನೋಡಿ

ಪಂದ್ಯದ ಮಧ್ಯೆ ಶಾರುಖ್ ಖಾನ್ ಸಿಗರೇಟ್ ಸೇದುತ್ತಿರುವ ಫೋಟೋ-ವಿಡಿಯೋ:

ಧೂಮಪಾನ ಚಟದಿಂದ ಸದಾ ಸುದ್ದಿಯಲ್ಲಿರುವ ಶಾರುಖ್ ಖಾನ್ ಕ್ರಿಕೆಟ್ ಪಂದ್ಯದ ಮಧ್ಯೆ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲೂ ಹೀಗೆ ಮಾಡಿರುವುದು ಕೆಲ ನೆಟ್ಟಿಗರನ್ನು ಕೆರಳಿಸಿದೆ. ಕೋಲ್ಕತ್ತಾ ಇನ್ನಿಂಗ್ಸ್ ಸಮಯದಲ್ಲಿ, ಶಾರುಖ್ ಕ್ರೀಡಾಂಗಣದ ಕಾರ್ಪೊರೇಟ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿದ್ದರು. ಈ ಸಮಯದಲ್ಲಿ ಅವರು ಸಿಗರೇಟ್ ಸೇದುವಾಗ ಕ್ಯಾಮೆರಾದ ಕಣ್ಣಿಗೆ ಬಿದ್ದರು.

ಮೂರು ಪಂದ್ಯಗಳು ಮುಕ್ತಾಯ: ಇಲ್ಲಿದೆ ನೋಡಿ ಐಪಿಎಲ್ 2024 ಪಾಯಿಂಟ್ಸ್ ಟೇಬಲ್

ಟಿವಿ ಪರದೆಯಲ್ಲಿ ಶಾರುಖ್ ಧೂಮಪಾನದ ವಿಡಿಯೋ ಕಾಣಿಸಿಕೊಂಡ ತಕ್ಷಣ, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದಕ್ಕಾಗಿ ಅನೇಕ ಬಳಕೆದಾರರು ಶಾರುಖ್ ಅವರನ್ನು ದೂಷಿಸಿದ್ದು, ಇದು ಯುವಕರಿಗೆ ತಪ್ಪು ಸಂದೇಶ ಎಂದು ಹೇಳಿದ್ದಾರೆ.

ಶಾರುಖ್‌ಗೆ ಐಪಿಎಲ್‌ನಲ್ಲಿನ ವಿವಾದಗಳ ಜೊತೆಗೆ ಸುದೀರ್ಘ ಒಡನಾಟವಿದೆ. ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ 2012ರ ಸೀಸನ್‌ನಲ್ಲಿಯೂ ಅವರು ಸ್ಟೇಡಿಯಂನಲ್ಲಿ ಸಿಗರೇಟ್ ಸೇದುತ್ತಿದ್ದ ದೃಶ್ಯ ಕಂಡು ಬಂದಿತ್ತು. ಆಗ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶಾರುಖ್ ಸಿಗರೇಟ್ ಸೇದಿದ್ದರು. ಈ ಸಂಬಂಧ ಜೈಪುರದ ಸ್ಥಳೀಯ ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಇದಲ್ಲದೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೈದಾನದ ಸಿಬ್ಬಂದಿಯ ಜತೆಗಿನ ಗಲಾಟೆಯಿಂದ ಹಲವು ವರ್ಷಗಳ ಕಾಲ ಕ್ರೀಡಾಂಗಣಕ್ಕೆ ಬರದಂತೆ ನಿರ್ಬಂಧ ಹೇರಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 am, Sun, 24 March 24

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ