- Kannada News Photo gallery Cricket photos Ishant Sharma Injury Update Big shock for Rishabh Pant's Delhi Capitals team
IPL 2024: ಐಪಿಎಲ್ ಆರಂಭವಾದ ಎರಡೇ ದಿನಕ್ಕೆ ತಲೆ ಎತ್ತಿದೆ ಇಂಜುರಿ ಸಮಸ್ಯೆ: ಡೆಲ್ಲಿ ತಂಡಕ್ಕೆ ಬಿಗ್ ಶಾಕ್
Ishant Sharma Injury, DC vs PBKS: ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಸೋಲನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್'ಗೆ ಮತ್ತೊಂದು ಗಾಯದ ಆತಂಕ ಎದುರಾಗಿದೆ. ಸ್ಟಾರ್ ವೇಗದ ಬೌಲರ್ ಇಶಾಂತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ಗಾಯದ ಪ್ರಮಾಣ ಜೋರಾಗಿದ್ದ ಕಾರಣ ಇಶಾಂತ್ ಮೈದಾನದಿಂದ ಹೊರನಡೆಯಬೇಕಾಯಿತು.
Updated on: Mar 24, 2024 | 9:52 AM

ಐಪಿಎಲ್ 2024 ರಲ್ಲಿ ಮಾರ್ಚ್ 23 ರಂದು ನಡೆದ ಡಬಲ್ ಹೆಡರ್ ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಿತ್ತು. ಗಾಯದ ಕಾರಣದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ರಿಷಭ್ ಪಂತ್ ಪುನರಾಗಮನ ಮಾಡಿದರು. ಪಂತ್ ಕಮ್ಬ್ಯಾಕ್ ಖುಷಿಯ ನಡುವೆ ಡೆಲ್ಲಿ ಸೋಲು ಕಂಡಿತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತ ಉಂಟಾಗಿದೆ.

ನಾಲ್ಕು ವಿಕೆಟ್‌ಗಳಿಂದ ಸೋಲನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್'ಗೆ ಮತ್ತೊಂದು ಗಾಯದ ಆತಂಕ ಎದುರಾಗಿದೆ. ಸ್ಟಾರ್ ವೇಗದ ಬೌಲರ್ ಇಶಾಂತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ಪಂಜಾನ್ ಕಿಂಗ್ಸ್ ಬ್ಯಾಟಿಂಗ್ ಇನ್ನಿಂಗ್ಸ್‌ನ ಪವರ್‌ಪ್ಲೇಯ ಅಂತಿಮ ಓವರ್‌ನಲ್ಲಿ, ಫೀಲ್ಡಿಂಗ್ ಮಾಡುವಾಗ ಇಶಾಂತ್ ಕೆಳಗೆ ಬಿದ್ದು ಪಾದಕ್ಕೆ ಗಾಯ ಮಾಡಿಕೊಂಡಿದ್ದಾರೆ. ಗಾಯದ ಪ್ರಮಾಣ ಜೋರಾಗಿದ್ದ ಕಾರಣ ಇಶಾಂತ್ ಮೈದಾನದಿಂದ ಹೊರನಡೆಯಬೇಕಾಯಿತು.

ಇಶಾಂತ್ ಶರ್ಮಾ ಅವರ ಗಾಯದ ಪ್ರಮಾಣವು ಇನ್ನೂ ತಿಳಿದಿಲ್ಲ. ಗಾಯದ ಕಾರಣದಿಂದಾಗಿ ಡೆಲ್ಲಿ ತಂಡಕ್ಕೆ ಗೈರುಹಾಜರಾದ ವೇಗದ ಬೌಲರ್‌ಗಳ ಪಟ್ಟಿಗೆ ಇಶಾಂತ್ ಕೂಡ ಸೇರುವ ಸಾಧ್ಯತೆ ಇದೆ. ಶರ್ಮಾ ಒಳ್ಳೆಯ ಲಯದಲ್ಲಿದ್ದರು. ಅವರು ಶಿಖರ್ ಧವನ್ ವಿಕೆಟ್ ಕಿತ್ತರೆ ಮತ್ತು ಅಪಾಯಕಾರಿ ಜಾನಿ ಬೈರ್‌ಸ್ಟೋವ್ ಅವರನ್ನು ರನ್ ಔಟ್ ಮಾಡಿದ್ದರು.

ಇಶಾಂತ್ ಶರ್ಮಾ ಮೈದಾನ ತೊರೆದ ಬಳಿಕ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅವರು ಎಸೆದ ಎರಡು ಓವರ್‌ಗಳಲ್ಲಿ 16 ರನ್‌ಗಳನ್ನು ನೀಡಿದ್ದರು. ಕ್ಯಾಪಿಟಲ್ಸ್ ಗೈರುಹಾಜರಾದ ವೇಗದ ಬೌಲರ್‌ಗಳ ದೊಡ್ಡ ಪಟ್ಟಿಯನ್ನು ಹೊಂದಿದೆ. ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಈಗಾಗಲೇ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.

ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಅರ್ಷದೀಪ್ ಸಿಂಗ್ ಮತ್ತು ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಅತ್ತ ಪಂಜಾಬ್ ಸ್ಯಾಮ್ ಕರ್ರಾನ್ ಅವರ ಪ್ರಬಲ ಅರ್ಧಶತಕದೊಂದಿಗೆ 4 ಎಸೆತಗಳು ಬಾಕಿ ಇರುವಂತೆಯೇ ಗೆದ್ದುಕೊಂಡಿತು.
