IPL 2024 Points Table: ಮೂರು ಪಂದ್ಯಗಳು ಮುಕ್ತಾಯ: ಇಲ್ಲಿದೆ ನೋಡಿ ಐಪಿಎಲ್ 2024 ಪಾಯಿಂಟ್ಸ್ ಟೇಬಲ್

Indian Premier League 2024: ಐಪಿಎಲ್ 2024 ರಲ್ಲಿ ಮೂರು ಪಂದ್ಯಗಳು ಮುಕ್ತಾಯಗೊಂಡಿವೆ. ಇಂದು ರಾಜಸ್ಥಾನ್-ಲಖನೌ ಮತ್ತು ಗುಜರಾತ್-ಮುಂಬೈ ನಡುವೆ ಪಂದ್ಯಗಳು ನಡೆಯಲಿವೆ. ಇದರ ನಡುವೆ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಾಯಿಂಟ್ಸ್ ಟೇಬಲ್​ನಲ್ಲಿ ಕೆಲ ಬದಲಾವಣೆ ಆಗಿವೆ.

IPL 2024 Points Table: ಮೂರು ಪಂದ್ಯಗಳು ಮುಕ್ತಾಯ: ಇಲ್ಲಿದೆ ನೋಡಿ ಐಪಿಎಲ್ 2024 ಪಾಯಿಂಟ್ಸ್ ಟೇಬಲ್
IPL 2024 Points Table
Follow us
Vinay Bhat
|

Updated on: Mar 24, 2024 | 7:07 AM

ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಟೂರ್ನಿ ಆರಂಭವಾಗಿ ಎರಡು ದಿನಗಳು ಕಳಿದಿದ್ದು, ಈವರೆಗೆ ಒಟ್ಟು ಮೂರು ಪಂದ್ಯಗಳು ನಡೆದಿವೆ. ಶನಿವಾರ ಮೊದಲ ಡಬಲ್ ಹೆಡ್ಡರ್ ಆಯೋಜಿಸಲಾಗಿತ್ತು. ಮಧ್ಯಾಹ್ನ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದರೆ, ನಂತರದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಜಯ ಕಂಡಿತು. ಇಂದು ಕೂಡ ಐಪಿಎಲ್​ನಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಇದೀಗ ಐಪಿಎಲ್ 2024 ಪಾಯಿಂಟ್ಸ್ ಟೇಬಲ್ ಹೇಗಿದೆ ನೋಡೋಣ.

ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಎರಡು ಅಂಕ ಪಡೆದು +0.779 ರನ್​ರೇಟ್ ಹೊಂದಿದೆ.

ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ 2 ಪಾಯಿಂಟ್ಸ್ ಪಡೆದು ಎರಡನೇ ಸ್ಥಾನದಲ್ಲಿದೆ. ಇವರ ನೆಟ್​ ರನ್​ರೇಟ್ +0.455 ಆಗಿದೆ.

ಸೆಲ್ ಸಿಡಿಲಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ 2 ಪಾಯಿಂಟ್ಸ್ ಪಡೆದು ಮೂರನೇ ಸ್ಥಾನದಲ್ಲಿದೆ. ಇವರ ನೆಟ್​ ರನ್​ರೇಟ್ +0.200 ಆಗಿದೆ.

ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್​ರೈಸರ್ಸ್ ಹೈದರಾಬಾದ್ ತಂಡ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಎಂಟನೇ ಸ್ಥಾನದಲ್ಲಿದೆ. ಇವರ ನೆಟ್​ ರನ್​ರೇಟ್ -0.200 ಆಗಿದೆ.

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಒಂಬತ್ತನೇ ಸ್ಥಾನದಲ್ಲಿದೆ. ಇವರ ನೆಟ್​ ರನ್​ರೇಟ್ -0.455 ಆಗಿದೆ.

ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಒಂದು ಪಂದ್ಯದಲ್ಲಿ ಸೋಲು ಕಂಡು ಯಾವುದೇ ಪಾಯಿಂಟ್ಸ್ ಪಡೆಯದೆ ಕೊನೆಯ ಸ್ಥಾನದಲ್ಲಿದೆ. ಇವರ ನೆಟ್​ ರನ್​ರೇಟ್ -0.779 ಆಗಿದೆ.

ಉಳಿದ ತಂಡಗಳಾದ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಲಖನೌ ಸೂಪರ್ ಜೇಂಟ್ಸ್ ಈವರೆಗೆ ಪಂದ್ಯವನ್ನು ಆಡಿಲ್ಲ.

25 ಎಸೆತ, 7 ಸಿಕ್ಸರ್, 64 ರನ್..! ರಸೆಲ್ ರೌದ್ರಾವತಾರ

ಪರ್ಪಲ್-ಕ್ಯಾಪ್ ಅಂಕಪಟ್ಟಿಯಲ್ಲಿ, ಸಿಎಸ್​ಕೆ ತಂಡದ ಮುಸ್ತಫಿಜುರ್ ರೆಹಮಾನ್ ಅವರು ಆರ್​ಸಿಬಿ ವಿರುದ್ಧ ನಾಲ್ಕು- ವಿಕೆಟ್ ಪಡೆದು ಅಗ್ರ ಸ್ಥಾನವನ್ನು ಹೊಂದಿದ್ದಾರೆ. ಅವರ ಹಿಂದೆ ಹೈದರಾಬಾದ್ ಡೆತ್-ಓವರ್‌ಗಳ ಸ್ಪೆಷಲಿಸ್ಟ್ ಟಿ. ನಟರಾಜನ್ ಕೆಕೆಆರ್ ವಿರುದ್ಧ ಮೂರು ವಿಕೆಟ್‌ಗಳನ್ನು ಪಡೆದು ಇದ್ದಾರೆ. ಹಾಗೆಯೆ ಕೆಕೆಆರ್‌ನ ಆಂಡ್ರೆ ರಸೆಲ್ ಕೇವಲ 25 ಎಸೆತಗಳಲ್ಲಿ 64 ರನ್ ಗಳಿಸಿ ಆರೆಂಜ್ ಕ್ಯಾಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ತಾನದಲ್ಲಿ SRH ನ ಹೆನ್ರಿಚ್ ಕ್ಲಾಸೆನ್ ಅವರಿದ್ದು, 63 ರನ್ ಸಿಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ