IPL 2024: ರಿಷಬ್​ ಪಂತ್​ಗೆ ಸೋಲಿನ ಸ್ವಾಗತ

IPL 2024: ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಉತ್ತರವಾಗಿ ಪಂಜಾಬ್ 19.2 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಂಜಾಬ್ ಪರ ಸ್ಯಾಮ್ ಕರನ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅರ್ಧಶತಕದ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

IPL 2024: ರಿಷಬ್​ ಪಂತ್​ಗೆ ಸೋಲಿನ ಸ್ವಾಗತ
ಡೆಲ್ಲಿ- ಪಂಜಾಬ್
Follow us
ಪೃಥ್ವಿಶಂಕರ
|

Updated on:Mar 23, 2024 | 8:13 PM

ಐಪಿಎಲ್ 2024 (IPL 2024) ರ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ (Punjab Kings vs Delhi Capitals) ತಂಡವನ್ನು 4 ವಿಕೆಟ್​ಗಳಿಂದ ಸೋಲಿಸುವ ಮೂಲಕ ಗೆಲುವಿನ ಆರಂಭವನ್ನು ಮಾಡಿದೆ. ಇತ್ತ ಬಹಳ ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟ ರಿಷಬ್ ಪಂತ್​ಗೆ (Rishabh Pant) ಸೋಲಿನ ಸ್ವಾಗತ ಸಿಕ್ಕಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಉತ್ತರವಾಗಿ ಪಂಜಾಬ್ 19.2 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಂಜಾಬ್ ಪರ ಸ್ಯಾಮ್ ಕರನ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅರ್ಧಶತಕದ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಸ್ಯಾಮ್ ಕರನ್ ಈ ಟೂರ್ನಿಯಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 47 ಎಸೆತಗಳನ್ನು ಎದುರಿಸಿದ ಕರನ್ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 63 ರನ್​ಗಳ ಇನ್ನಿಂಗ್ಸ್​ ಆಡಿ ಪೆವಿಲಿಯನ್ ಸೇರಿಕೊಂಡರು. ಕರನ್​​ಗೆ ಸಾಥ್ ನೀಡಿದ ಲಿಯಾಮ್ ಲಿವಿಂಗ್ಸ್ಟೋನ್ 21 ಎಸೆತಗಳಲ್ಲಿ 38 ರನ್​ಗಳ ಇನ್ನಿಂಗ್ಸ್ ಆಡಿದರು.

ಡೆಲ್ಲಿ ಇನ್ನಿಂಗ್ಸ್ ಹೀಗಿತ್ತು

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 174 ರನ್ ಗಳಿಸಿ ಗೆಲುವಿಗೆ 175 ರನ್‌ಗಳ ಸವಾಲನ್ನು ನೀಡಿತು. ಡೆಲ್ಲಿಗೆ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಜೋಡಿ ಭರವಸೆಯ ಆರಂಭ ನೀಡಿತು. ಮೂರು ಓವರ್‌ಗಳಲ್ಲಿ ಇವರಿಬ್ಬರು 39 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ನಾಲ್ಕನೇ ಓವರ್​ನಲ್ಲಿ ಮಿಚೆಲ್ ಮಾರ್ಷ್ ವಿಕೆಟ್ ಪತನವಾಯಿತು. ನಂತರ ಡೇವಿಡ್ ವಾರ್ನರ್ ಮತ್ತು ಶಾಯ್ ಹೋಪ್ ಜೊತೆಯಾದರು. ಈ ಜೋಡಿ 33 ರನ್‌ಗಳ ಜೊತೆಯಾಟವಾಡಿತು. ಆದರೆ ಈ ಜೋಡಿಯನ್ನು ಮುರಿಯುವಲ್ಲಿ ಹರ್ಷಲ್ ಪಟೇಲ್ ಯಶಸ್ವಿಯಾದರು. ಆ ಬಳಿಕ ಎಲ್ಲರಿಗಾಗಿ ಕಾದು ಕುಳಿತಿದ್ದ ರಿಷಬ್ ಪಂತ್ ಅಖಾಡಕ್ಕೆ ಇಳಿದರು. ಆದರೆ ತಮ್ಮ ಇನ್ನಿಂಗ್ಸ್​ನಲ್ಲಿ 12 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿಗಳ ನೆರವಿನಿಂದ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಡೆಲ್ಲಿ ಪರ ಅದ್ಭುತ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಪೊರೆಲ್ 10 ಎಸೆತಗಳಲ್ಲಿ 32 ರನ್ ಗಳಿಸಿದಲ್ಲದೆ ಕೊನೆಯ ಓವರ್‌ನಲ್ಲಿ 25 ರನ್ ಕೂಡ ಚಚ್ಚಿ ತಂಡವನ್ನು ಸ್ಪಧಾತ್ಮಕ ಮೊತ್ತಕೆ ಕೊಂಡೊಯ್ದರು.

ಗೆಲುವಿನ ಹೀರೋ ಕರನ್

ಡೆಲ್ಲಿ ನೀಡಿದ 174 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ನಾಯಕ ಶಿಖರ್ ಧವನ್ (22 ರನ್) ಹಾಗೂ ಜಾನಿ ಬೈರ್‌ಸ್ಟೋ (9 ರನ್) ವೇಗದ ಆರಂಭ ನೀಡಿದರು. ಆದರೆ ಈ ಇಬ್ಬರು ಒಂದೇ ಓವರ್​ನಲ್ಲಿ ಇಶಾಂತ್ ಶರ್ಮಾಗೆ ಬಲಿಯಾದರು. ಆ ನಂತರ ಜೊತೆಯಾದ ಪ್ರಭಾಸಿಮ್ರಾನ್ ಸಿಂಗ್ (26 ರನ್) ಹಾಗೂ ಸ್ಯಾಮ್ ಕರನ್ (63 ರನ್) ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ಇಬ್ಬರು ತಂಡವನ್ನು ಶತಕದ ಸನಿಹಕ್ಕೆ ತಂದರು. ಆದರೆ ಪ್ರಭಾಸಿಮ್ರಾನ್ ವಿಕೆಟ್ ಬಳಿಕ ಬಂದ ಜಿತೇಶ್ ಶರ್ಮಾ (9 ರನ್) ಹಾಗೂ ಶಶಾಂಕ್ ಸಿಂಗ್ ಬೇಗನೇ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಮತ್ತೆ ಹಿನ್ನಡೆಗೆ ತಳ್ಳಿದರು. ನಂತರ ಕರನ್ ಜೊತೆಯಾದ ಲಿಯಾಮ್ ಲಿವಿಂಗ್‌ಸ್ಟೋನ್ ಔಟಾಗದೆ 38 ಮತ್ತು ಹರ್‌ಪ್ರೀತ್ ಬ್ರಾರ್ 2 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಡೆಲ್ಲಿ ಮಾಡಿದ ತಪ್ಪುಗಳು ಸೋಲಿಗೆ ಕಾರಣ

ಒಂದರ್ಥದಲ್ಲಿ ಡೆಲ್ಲಿ ಸೋಲಿಗೆ ನಾಯಕ ರಿಷಬ್ ಪಂತ್ ತೆಗೆದುಕೊಂಡ ನಿರ್ಧಾರಗಳೇ ಕಾರಣ ಎನ್ನಬಹುದು. ಅದರಲ್ಲಿ ಮೊದಲ ತಪ್ಪೆಂದರೆ,  ಪೃಥ್ವಿ ಶಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳದಿರುವುದು. ಇದರೊಂದಿಗೆ ಪ್ರಮುಖ ವೇಗಿ ಮುಖೇಶ್ ಕುಮಾರ್ ಅವರನ್ನೂ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಇದೆಲ್ಲದರ ನಡುವೆ ಪಂದ್ಯದ ಮಧ್ಯದಲ್ಲಿ ಇಶಾಂತ್ ಶರ್ಮಾ ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿತು. ಇದು ದೆಹಲಿ ಸೋಲಿಗೆ ಬಹುದೊಡ್ಡ ಕಾರಣವಾಗಿತ್ತು.

ಕೆಟ್ಟ ಫೀಲ್ಡಿಂಗ್ ಕೂಡ ಕಾರಣ

ಪಂತ್ ಅವರ ತಂತ್ರಗಾರಿಕೆ ಕೊರತೆಯೊಂದಿಗೆ ದೆಹಲಿಯ ಫೀಲ್ಡಿಂಗ್ ಕೂಡ ತೀರಾ ಕಳಪೆಯಾಗಿತ್ತು. ಟ್ರಿಸ್ಟಾನ್ ಸ್ಟ್ರಬ್ಸ್, ಸ್ಯಾಮ್ ಕರನ್ ಅವರ ಸುಲಭ ಕ್ಯಾಚ್ ಚೈಲಿದರು. ಇದರ ಲಾಭ ಪಡೆದ ಕರನ್ 63 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ 19ನೇ ಓವರ್​ನಲ್ಲಿ ಡೇವಿಡ್ ವಾರ್ನರ್ ಹರ್ ಪ್ರೀತ್ ಬ್ರಾರ್ ಅವರ ಸುಲಭ ಕ್ಯಾಚ್ ಕೈಬಿಟ್ಟರು. ಇದಲ್ಲದೇ ಹಲವು ಮಿಸ್‌ಫೀಲ್ಡ್‌ಗಳು ಸಹ ಕಂಡುಬಂದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Sat, 23 March 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್