IPL 2024: 4, 6, 4, 4, 6; ಇಂಪ್ಯಾಕ್ಟ್ ಪ್ಲೇಯರ್ ಆಟಕ್ಕೆ ಹರ್ಷಲ್ ಪಟೇಲ್ ಸುಸ್ತು! ವಿಡಿಯೋ

IPL 2024: ಇನ್ನಿಂಗ್ಸ್​ನ ಕೊನೆಯ ಓವರ್‌ ಬೌಲ್ ಮಾಡಿದ ಹರ್ಷಲ್ ಪಟೇಲ್ ಬರೋಬ್ಬರಿ 25 ರನ್ ಬಿಟ್ಟುಕೊಟ್ಟು ಡೆಲ್ಲಿ ತಂಡವನ್ನು 170 ರನ್ ದಾಟುವಂತೆ ಮಾಡಿದರು. ಈ ಓವರ್​ನಲ್ಲಿ ಡೆಲ್ಲಿ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ 21 ವರ್ಷದ ಯುವ ಆಟಗಾರ ಅಭಿಷೇಕ್ ಪೊರೆಲ್ ಪಂಜಾಬ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದರು.

IPL 2024: 4, 6, 4, 4, 6; ಇಂಪ್ಯಾಕ್ಟ್ ಪ್ಲೇಯರ್ ಆಟಕ್ಕೆ ಹರ್ಷಲ್ ಪಟೇಲ್ ಸುಸ್ತು! ವಿಡಿಯೋ
ಹರ್ಷಲ್ ಪಟೇಲ್, ಅಭಿಷೇಕ್ ಪೊರೆಲ್
Follow us
|

Updated on:Mar 23, 2024 | 6:32 PM

ಐಪಿಎಲ್ 2024ರ (IPL 2024) ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (Punjab Kings vs Delhi Capitals) ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ಪವರ್‌ಪ್ಲೇ ಅಂತ್ಯಕ್ಕೆ 54 ರನ್ ಕಲೆಹಾಕಿ ಉತ್ತಮ ಆರಂಭ ಪಡೆದುಕೊಂಡಿದ್ದ ತಂಡದ ಇನ್ನಿಂಗ್ಸ್ ಆ ನಂತರ ಹಳಿತಪ್ಪಿತು. ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ವಿಫಲವಾಯಿತು. ಹೀಗಾಗಿ ಡೆಲ್ಲಿ ತಂಡ 19 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತ್ತು. ಹೀಗಾಗಿ ಪಂಜಾಬ್​ಗೆ 160 ರನ್​ಗಳ ಒಳಗೆ ಟಾರ್ಗೆಟ್ ಸಿಗಬಹುದು ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಇನ್ನಿಂಗ್ಸ್​ನ ಕೊನೆಯ ಓವರ್‌ ಬೌಲ್ ಮಾಡಿದ ಹರ್ಷಲ್ ಪಟೇಲ್ (Harshal Patel) ಬರೋಬ್ಬರಿ 25 ರನ್ ಬಿಟ್ಟುಕೊಟ್ಟು ಡೆಲ್ಲಿ ತಂಡವನ್ನು 170 ರನ್ ದಾಟುವಂತೆ ಮಾಡಿದರು. ಈ ಓವರ್​ನಲ್ಲಿ ಡೆಲ್ಲಿ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ 21 ವರ್ಷದ ಯುವ ಆಟಗಾರ ಅಭಿಷೇಕ್ ಪೊರೆಲ್ (Abishek Porel) ಪಂಜಾಬ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದರು.

ಓವರ್‌ನಲ್ಲಿ 5 ಬೌಂಡರಿ ಬಾರಿಸಿದ ಪೊರೆಲ್

ಹರ್ಷಲ್ ಪಟೇಲ್ ಬೌಲ್ ಮಾಡಿದ ಇನ್ನಿಂಗ್ಸ್​ನ ಕೊನೆಯ ಓವರ್‌ನ ಮೊದಲ 5 ಎಸೆತಗಳಲ್ಲಿ ಅಭಿಷೇಕ್ ಪೊರೆಲ್ 5 ಬೌಂಡರಿಗಳನ್ನು ಬಾರಿಸಿದರು. ಮೊದಲ ಎಸೆತವನ್ನು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಬೌಂಡರಿ ಬಾರಿಸಿದ ಪೊರೆಲ್, ಎರಡನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್​ಗೆ ಕಳುಹಿಸಿದರು. ಮೂರನೇ ಎಸೆತ ಸ್ಕ್ವೇರ್ ಲೆಗ್‌ ಮೇಲೆ ಫೋರ್‌ಗೆ ಹೋಯಿತು. ನಾಲ್ಕನೇ ಎಸೆತವನ್ನು ಪೊರೆಲ್, ಥರ್ಡ್ ಮ್ಯಾನ್ ಓವರ್‌ನಲ್ಲಿ ಫೋರ್ ಹೊಡೆದರು. ಐದನೇ ಎಸೆತವನ್ನು ಅಭಿಷೇಕ್ ಸಿಕ್ಸರ್​ಗಟ್ಟುವಲ್ಲಿ ಯಶಸ್ವಿಯಾದರು. ಒಟ್ಟಿನಲ್ಲಿ ಈ ಓವರ್​ನಲ್ಲಿ 25 ರನ್​ಗಳು ಬಂದವು.

ಕೇವಲ 10 ಎಸೆತಗಳಲ್ಲಿ 32 ರನ್

ಅಭಿಷೇಕ್ ಪೊರೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ರಿಕಿ ಭುಯಿ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿತು. ತಂಡದ ನಂಬಿಕೆಯನ್ನು ಉಳಿಸಿಕೊಂಡ ಪೊರೆಲ್ ಕೇವಲ 10 ಎಸೆತಗಳಲ್ಲಿ 32 ರನ್‌ಗಳ ಇನಿಂಗ್ಸ್‌ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸಿಡಿದವು.

IPL 2024: 14 ತಿಂಗಳ ನಂತರ ಕಣಕ್ಕಿಳಿದ ರಿಷಬ್ ಪಂತ್​ಗೆ ಭವ್ಯ ಸ್ವಾಗತ; ವಿಡಿಯೋ ನೋಡಿ

ಪಂಜಾಬ್​ಗೆ 175 ರನ್ ಗುರಿ

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಒಂಬತ್ತು ವಿಕೆಟ್‌ಗೆ 174 ರನ್ ಗಳಿಸಿತು. ತಂಡದ ಪರ 33 ರನ್‌ಗಳ ಇನಿಂಗ್ಸ್‌ ಆಡಿದ ಶಾಯ್‌ ಹೋಪ್‌ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು. ಇನ್ನು 14 ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಹಿಂದಿರುಗಿದ ರಿಷಬ್ ಪಂತ್, 13 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ 18 ರನ್ ಗಳಿಸಿದರು. ಪಂಜಾಬ್ ಪರ ಅರ್ಷದೀಪ್ ಸಿಂಗ್ ಮತ್ತು ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್ ಪಡೆದರೆ, ಕಗಿಸೊ ರಬಾಡ, ಹರ್ ಪ್ರೀತ್ ಬ್ರಾರ್ ಮತ್ತು ರಾಹುಲ್ ಚಹಾರ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Sat, 23 March 24

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ