DC vs PBKS Highlights, IPL 2024: ಪಂಜಾಬ್​ಗೆ ಗೆಲುವಿನ ಆರಂಭ; ಸೋತ ಡೆಲ್ಲಿ

ಪೃಥ್ವಿಶಂಕರ
|

Updated on:Mar 23, 2024 | 7:31 PM

Punjab Kings vs Delhi Capitals Highlights in Kannada: ಐಪಿಎಲ್ 2024 ರ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಉತ್ತರವಾಗಿ ಪಂಜಾಬ್ 19.2 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

DC vs PBKS Highlights, IPL 2024: ಪಂಜಾಬ್​ಗೆ ಗೆಲುವಿನ ಆರಂಭ; ಸೋತ ಡೆಲ್ಲಿ

ಐಪಿಎಲ್ 2024 ರ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಉತ್ತರವಾಗಿ ಪಂಜಾಬ್ 19.2 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಂಜಾಬ್ ಪರ ಸ್ಯಾಮ್ ಕರನ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅರ್ಧಶತಕದ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಸ್ಯಾಮ್ ಕರನ್ ಈ ಟೂರ್ನಿಯಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 47 ಎಸೆತಗಳನ್ನು ಎದುರಿಸಿದ ಕರನ್ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 63 ರನ್​ಗಳ ಇನ್ನಿಂಗ್ಸ್​ ಆಡಿ ಪೆವಿಲಿಯನ್ ಸೇರಿಕೊಂಡರು. ಕರನ್​​ಗೆ ಸಾಥ್ ನೀಡಿದ ಲಿಯಾಮ್ ಲಿವಿಂಗ್ಸ್ಟೋನ್ 21 ಎಸೆತಗಳಲ್ಲಿ 38 ರನ್​ಗಳ ಇನ್ನಿಂಗ್ಸ್ ಆಡಿದರು.

LIVE NEWS & UPDATES

The liveblog has ended.
  • 23 Mar 2024 07:08 PM (IST)

    ಸ್ಯಾಮ್ ಕರನ್ ಅರ್ಧಶತಕ

    16 ಓವರ್‌ಗಳ ನಂತರ ಪಂಜಾಬ್ ನಾಲ್ಕು ವಿಕೆಟ್‌ಗೆ 136 ರನ್ ಕಲೆಹಾಕಿದೆ. ಗೆಲುವಿಗೆ 24 ಎಸೆತಗಳಲ್ಲಿ 39 ರನ್‌ಗಳ ಅಗತ್ಯವಿದೆ. ಸ್ಯಾಮ್ ಕರನ್ ತಮ್ಮ ಐಪಿಎಲ್ ವೃತ್ತಿಜೀವನದ ನಾಲ್ಕನೇ ಅರ್ಧಶತಕ ಬಾರಿಸಿದ್ದಾರೆ. ಪ್ರಸ್ತುತ ಕರನ್ 50 ರನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ 14 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ 36 ರನ್‌ಗಳ ಜೊತೆಯಾಟ ನಡೆದಿದೆ.

  • 23 Mar 2024 06:57 PM (IST)

    ಶತಕ ಪೂರ್ಣ

    12ನೇ ಓವರ್‌ ಆಗುವಷ್ಟರಲ್ಲಿ ಪಂಜಾಬ್ 100 ರನ್ ಪೂರೈಸಿದೆ. ಆದರೆ ಇದೇ ವೇಳೆ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ. ರಿವರ್ಸ್ ಸ್ವೀಪ್ ಮಾಡುವ ಪ್ರಯತ್ನದಲ್ಲಿ ಜಿತೇಶ್ ಸ್ಟಂಪ್ ಔಟ್ ಆದರು. ಜಿತೇಶ್ ಒಂಬತ್ತು ರನ್ ಗಳಿಸಿ ಔಟಾದರು. 12 ಓವರ್‌ಗಳ ನಂತರ ಪಂಜಾಬ್ ಸ್ಕೋರ್ ನಾಲ್ಕು ವಿಕೆಟ್‌ಗೆ 103 ರನ್ ಆಗಿದೆ. ಸದ್ಯ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಸ್ಯಾಮ್ ಕರನ್ ಕ್ರೀಸ್‌ನಲ್ಲಿದ್ದಾರೆ.

  • 23 Mar 2024 06:37 PM (IST)

    ಪಂಜಾಬ್‌ಗೆ ಮೂರನೇ ಹೊಡೆತ

    ಪಂಜಾಬ್ ಕಿಂಗ್ಸ್ ಮೂರನೇ ವಿಕೆಟ್ ಕಳೆದುಕೊಂಡಿದೆ. ಕುಲ್ದೀಪ್ ಯಾದವ್, 17 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 26 ರನ್ ಬಾರಿಸಿದ್ದ ಪ್ರಭಾಸಿಮ್ರಾನ್ ಸಿಂಗ್ ವಿಕೆಟ್ ಪಡೆದರು. ಸದ್ಯ ಸ್ಯಾಮ್ ಕರನ್ ಮತ್ತು ಜಿತೇಶ್ ಶರ್ಮಾ ಕ್ರೀಸ್‌ನಲ್ಲಿದ್ದಾರೆ. 10 ಓವರ್‌ಗಳ ನಂತರ ಪಂಜಾಬ್ ಸ್ಕೋರ್ ಮೂರು ವಿಕೆಟ್‌ಗೆ 87 ರನ್ ಆಗಿದೆ.

  • 23 Mar 2024 06:27 PM (IST)

    8 ಓವರ್‌ ಅಂತ್ಯ

    ಪಂಜಾಬ್ ಕಿಂಗ್ಸ್ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದೆ. ಪ್ರಭಾಸಿಮ್ರಾನ್ ಸಿಂಗ್ 20 ರನ್ ಹಾಗೂ ಸ್ಯಾಮ್ ಕರನ್ 20 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 23 Mar 2024 05:59 PM (IST)

    ಒಂದೇ ಓವರ್​ನಲ್ಲಿ 2 ವಿಕೆಟ್

    ಒಂದೇ ಓವರ್​ನಲ್ಲಿ ಪಂಜಾಬ್ 2 ವಿಕೆಟ್ ಕಳೆದುಕೊಂಡಿದೆ. ಇಶಾಂತ್ ಶರ್ಮಾ ಇನಿಂಗ್ಸ್​ನ ನಾಲ್ಕನೇ ಓವರ್ ನ ಮೊದಲ ಎಸೆತದಲ್ಲಿ ಶಿಖರ್ ಧವನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಧವನ್ 16 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 22 ರನ್ ಗಳಿಸಿದರು. ಇದಾದ ಬಳಿಕ ಐದನೇ ಎಸೆತದಲ್ಲಿ ಬೈರ್‌ಸ್ಟೋವ್ ಅವರನ್ನು ರನೌಟ್ ಮಾಡಿದರು. ನಾಲ್ಕು ಓವರ್‌ಗಳ ನಂತರ ಪಂಜಾಬ್ ಸ್ಕೋರ್ ಎರಡು ವಿಕೆಟ್‌ಗೆ 42 ರನ್ ಆಗಿದೆ. ಸದ್ಯ ಪ್ರಭಾಸಿಮ್ರಾನ್ ಸಿಂಗ್ ಮತ್ತು ಸ್ಯಾಮ್ ಕರನ್ ಕ್ರೀಸ್‌ನಲ್ಲಿದ್ದಾರೆ.

  • 23 Mar 2024 05:57 PM (IST)

    ಪಂಜಾಬ್ ಇನ್ನಿಂಗ್ಸ್ ಆರಂಭ

    ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 175 ರನ್‌ಗಳ ಗುರಿಯನ್ನು ಬೆನ್ನಟ್ಟಲು ಪಂಜಾಬ್ ಕಿಂಗ್ಸ್ ಸಿದ್ಧವಾಗಿದೆ. ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್‌ನಲ್ಲಿ ಪಂಜಾಬ್ 17 ರನ್ ಕಲೆಹಾಕಿತು.

  • 23 Mar 2024 05:18 PM (IST)

    174 ರನ್ ಟಾರ್ಗೆಟ್

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು.

  • 23 Mar 2024 05:04 PM (IST)

    ಪಟೇಲ್ ರನೌಟ್

    13 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 21 ರನ್ ಬಾರಿಸಿದ್ದ ಅಕ್ಷರ್ ಪಟೇಲ್ ರನೌಟ್​ಗೆ ಬಲಿಯಾಗಿದ್ದಾರೆ. ಸದ್ಯ ಸುಮಿತ್ ಕುಮಾರ್ ಮತ್ತು ಅಭಿಷೇಕ್ ಪೊರೆಲ್ ಕ್ರೀಸ್‌ನಲ್ಲಿದ್ದಾರೆ.

  • 23 Mar 2024 04:57 PM (IST)

    ಟ್ರಿಸ್ಟ್ ಸ್ಟಬ್ಸ್ ಔಟ್

    16ನೇ ಓವರ್‌ನಲ್ಲಿ ಡೆಲ್ಲಿ ತಂಡದ 6ನೇ ವಿಕೆಟ್ ಪತನವಾಯಿತು. ಟ್ರಿಸ್ಟ್ ಸ್ಟಬ್ಸ್ ಐದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ದೆಹಲಿಯ ಎಲ್ಲಾ ನಾಲ್ವರು ವಿದೇಶಿ ಆಟಗಾರರು ವಿಫಲರಾಗಿದ್ದಾರೆ. ವಾರ್ನರ್ 29 ರನ್, ಮಾರ್ಷ್ 20 ರನ್, ಹೋಪ್ 33 ರನ್ ಮತ್ತು ಸ್ಟಬ್ಸ್ ಐದು ರನ್ ಗಳಿಸಲಷ್ಟೇ ಶಕ್ತರಾದರು. ಸದ್ಯ ಅಕ್ಷರ್ ಪಟೇಲ್ ಮತ್ತು ಸುಮಿತ್ ಕುಮಾರ್ ಕ್ರೀಸ್‌ನಲ್ಲಿದ್ದಾರೆ.

  • 23 Mar 2024 04:46 PM (IST)

    ಐದನೇ ವಿಕೆಟ್ ಪತನ

    ಡೆಲ್ಲಿ ಕ್ಯಾಪಿಟಲ್ಸ್ 111 ರನ್​ಗಳಿಗೆ ಐದನೇ ವಿಕೆಟ್ ಕಳೆದುಕೊಂಡಿದೆ. ರಿಷಭ್ ಪಂತ್ ಕೊನೆಯ ಓವರ್‌ನಲ್ಲಿ ಅಂದರೆ 13ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ 14ನೇ ಓವರ್‌ನಲ್ಲಿ ರಿಕಿ ಭುಯಿ ರೂಪದಲ್ಲಿ ತಂಡಕ್ಕೆ ಐದನೇ ಹೊಡೆತ ಬಿದ್ದಿತು. ಭುಯಿ ಮೂರು ರನ್ ಗಳಿಸಿ ಔಟಾದರು. 14 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ ಐದು ವಿಕೆಟ್‌ಗೆ 117 ರನ್ ಆಗಿದೆ. ಸದ್ಯ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದಾರೆ. ಹರ್ಷಲ್ ಪಟೇಲ್ ಎರಡು ವಿಕೆಟ್ ಪಡೆದರು.

  • 23 Mar 2024 04:35 PM (IST)

    ರಿಷಭ್ ಪಂತ್ ಔಟ್

    ಡೆಲ್ಲಿ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ. ನಾಯಕ ರಿಷಭ್ ಪಂತ್ 13 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 18 ರನ್ ಗಳಿಸಿ ಔಟಾದರು. ಸದ್ಯ ಟ್ರಿಸ್ಟಾನ್ ಸ್ಟಬ್ಸ್ ಮತ್ತು ರಿಕಿ ಭುಯಿ ಕ್ರೀಸ್‌ನಲ್ಲಿದ್ದಾರೆ. 15 ತಿಂಗಳ ನಂತರ ಕ್ರಿಕೆಟ್ ಅಖಾಡಕ್ಕಿಳಿದಿದ್ದ ಪಂತ್‌ಗೆ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

  • 23 Mar 2024 04:34 PM (IST)

    ಕ್ರೀಸ್​ನಲ್ಲಿ ಪಂತ್

  • 23 Mar 2024 04:33 PM (IST)

    ಹೋಪ್ ಔಟ್

    11ನೇ ಓವರ್‌ನಲ್ಲಿ 94 ರನ್‌ಗಳಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೂರನೇ ಹೊಡೆತ ಬಿದ್ದಿತು. ಹೋಪ್ 25 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 33 ರನ್ ಗಳಿಸಿ ಔಟಾದರು. 11 ಓವರ್‌ಗಳ ನಂತರ ದೆಹಲಿಯ ಸ್ಕೋರ್ ಮೂರು ವಿಕೆಟ್‌ಗೆ 95 ರನ್ ಆಗಿದೆ.

  • 23 Mar 2024 04:13 PM (IST)

    ವಾರ್ನರ್ ಔಟ್

    ಡೇವಿಡ್ ವಾರ್ನರ್ ರೂಪದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಹೊಡೆತವನ್ನು ಅನುಭವಿಸಿದೆ. ಮಿಚೆಲ್ ಮಾರ್ಷ್ 20 ರನ್ ಗಳಿಸಿ ಔಟಾದ ಬಳಿಕ ವಾರ್ನರ್ ಕೂಡ 29 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ವಾರ್ನರ್ ಔಟಾದ ಬಳಿಕ ನಾಯಕ ರಿಷಬ್ ಪಂತ್ ಕ್ರೀಸ್​ಗೆ ಬಂದರು. 15 ತಿಂಗಳ ನಂತರ ಪಂತ್ ಮೈದಾನಕ್ಕೆ ಮರಳಿದ್ದಾರೆ.

  • 23 Mar 2024 04:00 PM (IST)

    ಡೆಲ್ಲಿ ಅರ್ಧಶತಕ

    ಪಂಜಾಬ್ ಕ್ಯಾಪಿಟಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್ ವೇಗದ ಆರಂಭ ನೀಡಿದರು. ವಾರ್ನರ್ ಅವರ ಅದ್ಭುತ ಇನ್ನಿಂಗ್ಸ್‌ನ ನೆರವಿನಿಂದ ಡೆಲ್ಲಿ ಪವರ್‌ಪ್ಲೇ ಅಂತ್ಯದವರೆಗೆ ಆರು ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 54 ರನ್ ಗಳಿಸಿದೆ. ಪಂಜಾಬ್‌ನ ವೇಗದ ಬೌಲರ್ ಅರ್ಷದೀಪ್ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡುವ ಮೂಲಕ ಪಂಜಾಬ್‌ಗೆ ಮೊದಲ ಯಶಸ್ಸು ನೀಡಿದರು.

  • 23 Mar 2024 03:52 PM (IST)

    ಮಿಚೆಲ್ ಮಾರ್ಷ್​ ಔಟ್

    ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲ ಹೊಡೆತ ನೀಡಿದರು. ಮಾರ್ಷ್ ಮತ್ತು ಡೇವಿಡ್ ವಾರ್ನರ್ ಡೆಲ್ಲಿಗೆ ವೇಗದ ಆರಂಭ ನೀಡಿದರು ಮತ್ತು ಮೂರು ಓವರ್‌ಗಳಲ್ಲಿ ಸ್ಕೋರ್ ಅನ್ನು 30 ದಾಟಿಸಿದರು. ಆದರೆ ನಾಲ್ಕನೇ ಓವರ್ ಬೌಲ್ ಮಾಡಲು ಬಂದ ಅರ್ಷದೀಪ್ ಆ ಓವರ್ ನ ಎರಡನೇ ಎಸೆತದಲ್ಲಿಯೇ 12 ಎಸೆತಗಳಲ್ಲಿ 20 ರನ್ ಗಳಿಸಿದ್ದ ಮಾರ್ಷ್ ವಿಕೆಟ್ ಉರುಳಿಸಿದರು.

  • 23 Mar 2024 03:36 PM (IST)

    ಇನ್ನಿಂಗ್ಸ್ ಆರಂಭ

    ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಆರಂಭವಾಗಿದೆ. ಡೆಲ್ಲಿ ಪರ ಇನ್ನಿಂಗ್ಸ್ ಆರಂಭಿಸಲು ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಬಂದಿದ್ದಾರೆ. ಮೊದಲ ಓವರ್​ನಲ್ಲಿ ಮಾರ್ಷ್​ 2 ಬೌಂಡರಿ ಕೂಡ ಬಾರಿಸಿದರು.

  • 23 Mar 2024 03:36 PM (IST)

    ಡೆಲ್ಲಿ ಕ್ಯಾಪಿಟಲ್ಸ್

    ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ರಿಕಿ ಭುಯಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ.

  • 23 Mar 2024 03:12 PM (IST)

    ಪಂಜಾಬ್ ಕಿಂಗ್ಸ್

    ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಶ್‌ದೀಪ್ ಸಿಂಗ್, ಶಶಾಂಕ್ ಸಿಂಗ್.

  • 23 Mar 2024 03:04 PM (IST)

    ಟಾಸ್ ಗೆದ್ದ ಪಂಜಾಬ್

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 23 Mar 2024 02:59 PM (IST)

    ಪಂದ್ಯ ಎಲ್ಲಿ ನಡೆಯುತ್ತಿದೆ?

    ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಮುಲ್ಲನ್‌ಪುರದ ಮಹಾರಾಜ ಯದ್ವೇಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

  • Published On - Mar 23,2024 2:54 PM

    Follow us