Rishabh Pant: ರಿಷಭ್ ಪಂತ್ ಮಿಂಚಿನ ಸ್ಟಂಪಿಂಗ್ಗೆ ಬೆರಗಾದ ಕ್ರಿಕೆಟ್ ಜಗತ್ತು: ರೋಚಕ ವಿಡಿಯೋ ನೋಡಿ
PBKS vs DC, IPL 2024: ಐಪಿಎಲ್ 2024ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಬ್ಯಾಟ್ನಿಂದ ದೊಡ್ಡ ಸದ್ದು ಮಾಡಲಿಲ್ಲ. ಆದರೆ, ವಿಕೆಟ್ ಹಿಂಭಾಗ ತೋರಿದ ಚಾಣಾಕ್ಷತೆಗೆ ಎಲ್ಲರೂ ಮನಸೋತರು. ವಿಕೆಟ್ ಕೀಪಿಂಗ್ನಲ್ಲಿ ಪಂತ್ ಮೊದಲಿಗಿಂತ ಚುರುಕಾಗಿ ಕಾಣುತ್ತಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಆಡುವ ಮೂಲಕ ಕ್ರಿಕೆಟ್ ಲೋಕಕ್ಕೆ ರಿಷಭ್ ಪಂತ್ (Rishabh Pant) ಪುನರಾಗಮನ ಮಾಡಿದ್ದಾರೆ. ಸುಮಾರು 453 ದಿನಗಳ ನಂತರ ಪಂತ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದರು. ಆದರೆ, ಪಂತ್ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿಸಲು ಸಾಧ್ಯವಾಗಲಿಲ್ಲ, ಕೇವಲ 18 ರನ್ ಗಳಿಸಿ ಔಟಾದರು. ಆದರೆ, ವಿಕೆಟ್ ಹಿಂಭಾಗ ರಿಷಭ್ ಅವರ ಚಾಣಾಕ್ಷತೆಗೆ ಎಲ್ಲರೂ ಮನಸೋತರು. ವಿಕೆಟ್ ಕೀಪಿಂಗ್ನಲ್ಲಿ ಪಂತ್ ಮೊದಲಿಗಿಂತ ಚುರುಕಾಗಿ ಕಾಣುತ್ತಿದ್ದರು. ಅವರನ್ನು ನೋಡಿದರೆ 16 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದಂತೆ ಕಾಣುತ್ತಲೇ ಇರಲಿಲ್ಲ.
12ನೇ ಓವರ್‌ನ ಕುಲ್ದೀಪ್ ಯಾದವ್ ಅವರ ಮೂರನೇ ಎಸೆತದಲ್ಲಿ ಪಂಜಾಬ್ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ, ಕುಲ್ದೀಪ್ ಸ್ಪಿನ್ ಮ್ಯಾಜಿಕ್ ಗ್ರಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮುಂಧೆ ಬಂದಿದ್ದ ಜಿತೇಶ್ ಕ್ರೀಸ್‌ಗೆ ಮರಳುವ ಹೊತ್ತಿಗೆ ರಿಷಭ್ ಪಂತ್ ಅದ್ಭುತವಾಗಿ ಸ್ಟಂಪ್ ಔಟ್ ಮಾಡಿ ತಮ್ಮ ಕೆಲಸ ಮುಗಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಮೂರು ಪಂದ್ಯಗಳು ಮುಕ್ತಾಯ: ಇಲ್ಲಿದೆ ನೋಡಿ ಐಪಿಎಲ್ 2024 ಪಾಯಿಂಟ್ಸ್ ಟೇಬಲ್
ಪಂಜಾಬ್ ಕಿಂಗ್ಸ್ ವಿರುದ್ಧ ರಿಷಭ್ ಪಂತ್ ಸ್ಟಂಪಿಂಗ್ ಮಾಡಿದ್ದು ಹೀಗೆ:
𝙌𝙐𝙄𝘾𝙆 𝙃𝘼𝙉𝘿𝙎 ⚡
Skipper @RishabhPant17 with an amazing piece of glove work to dismiss Jitesh Sharma 👐#PBKS require 63 from 36 deliveries
Watch the match LIVE on @JioCinema and @StarSportsIndia 💻📱
Follow the match ▶️ https://t.co/ZhjY0W03bC #TATAIPL | #PBKSvDC pic.twitter.com/x8SkXZwXBX
— IndianPremierLeague (@IPL) March 23, 2024
ರಿಷಭ್ ಪಂತ್ ಮರಳಿದ ಖುಷಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ವಿಶೇಷವಾಗಿರಲಿಲ್ಲ. ಯಾಕೆಂದರೆ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಬ್ಯಾಟಿಂಗ್ ವೇಳೆ ಡೆಲ್ಲಿ ತಂಡವು ಸ್ಥಿರ ಆರಂಭವನ್ನು ನೀಡಿತ್ತು, ಆದರೆ ಪವರ್ ಪ್ಲೇ ನಂತರ ಪಂಜಾಬ್ ಬೌಲರ್‌ಗಳ ಮುಂದೆ ತತ್ತರಿಸಿತು.
25 ಎಸೆತ, 7 ಸಿಕ್ಸರ್, 64 ರನ್..! ರಸೆಲ್ ರೌದ್ರಾವತಾರ
ಆದರೆ ಕೊನೆಯ ಓವರ್‌ನಲ್ಲಿ ಅಭಿಷೇಕ್ ಪೊರೆಲ್ ಅವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಡೆಲ್ಲಿ ಹೇಗೋ 174 ರನ್ ಗಳಿಸಲು ಶಕ್ತವಾಯಿತು. ಇದಾದ ಬಳಿಕ ತಂಡದ ಸ್ಕೋರ್ ಕಾಪಾಡುವುದು ಬೌಲರ್ ಗಳಿಗೆ ಸವಾಲಾಗಿತ್ತಾದರೂ ಅದು ಸಾಧ್ಯವಾಗಲಿಲ್ಲ. ಸ್ಯಾಮ್ ಕರ್ರಾನ್ ಅವರ ಪ್ರಬಲ ಅರ್ಧಶತಕದೊಂದಿಗೆ ಪಂಜಾಬ್ ಪಂದ್ಯವನ್ನು 4 ಎಸೆತಗಳು ಬಾಕಿ ಇರುವಂತೆಯೇ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ