AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ರಂಗಿನ ಹಬ್ಬ ಆಚರಿಸಿದ ಐಶ್ವರ್ಯಾ-ಅಭಿಷೇಕ್; ವಿಚ್ಛೇದನ ವದಂತಿಗೆ ಸಂಪೂರ್ಣ ಬ್ರೇಕ್

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ವದಂತಿ ಕಳೆದ ವರ್ಷವೇ ಹುಟ್ಟಿಕೊಂಡಿತ್ತು. ಆದರೆ, ಇದರಲ್ಲಿ ನಿಜವಿಲ್ಲ ಎನ್ನುವ ವಿಚಾರ ಆಗಾಗ ಸಾಬೀತು ಆಗುತ್ತಲೇ ಇರುತ್ತದೆ. ಆದಾಗ್ಯೂ ಕೆಲವರಿಗೆ ಈ ಬಗ್ಗೆ ಇನ್ನೂ ಅನುಮಾನಗಳು ಇವೆ.

ಮನೆಯಲ್ಲಿ ರಂಗಿನ ಹಬ್ಬ ಆಚರಿಸಿದ ಐಶ್ವರ್ಯಾ-ಅಭಿಷೇಕ್; ವಿಚ್ಛೇದನ ವದಂತಿಗೆ ಸಂಪೂರ್ಣ ಬ್ರೇಕ್
ಐಶ್ವರ್ಯಾ-ಅಭಿಷೇಕ್
ರಾಜೇಶ್ ದುಗ್ಗುಮನೆ
|

Updated on: Mar 25, 2024 | 10:45 AM

Share

ಭಾರತದಾದ್ಯಂತ ಹೋಳಿ ಆಚರಣೆ ಜೋರಾಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ಇದರಲ್ಲಿ ಭಾಗಿ ಆಗುತ್ತಿದ್ದಾರೆ. ಬಣ್ಣ ಹಚ್ಚಿ ಸಂಭ್ರಮಿಸಲಾಗುತ್ತಿದೆ. ಈಗ ಐಶ್ವರ್ಯಾ ರೈ ಬಚ್ಚನ್ (Aishwarya Rai ) ಕುಟುಂಬದಲ್ಲಿ ಹೋಳಿ ಆಚರಣೆ ನಡೆದಿದೆ. ಐಶ್ವರ್ಯಾ ರೈ ಬಚ್ಚನ್  ಹಾಗೂ ಅಭಿಷೇಕ್ ಬಚ್ಚನ್ ಮನೆಯಲ್ಲೂ ಹೋಳಿ ಆಚರಣೆ ನಡೆದಿದೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅನೇಕರು ‘ಅಮಿತಾಭ್-ಐಶ್ವರ್ಯಾ ಹೀಗೆಯೇ ಖುಷಿಯಿಂದ ಇರಲಿ’ ಎಂದು ಹಾರೈಸಿದ್ದಾರೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ವದಂತಿ ಕಳೆದ ವರ್ಷವೇ ಹುಟ್ಟಿಕೊಂಡಿತ್ತು. ಆದರೆ, ಇದರಲ್ಲಿ ನಿಜವಿಲ್ಲ ಎನ್ನುವ ವಿಚಾರ ಆಗಾಗ ಸಾಬೀತು ಆಗುತ್ತಲೇ ಇರುತ್ತದೆ. ಆದಾಗ್ಯೂ ಕೆಲವರಿಗೆ ಈ ಬಗ್ಗೆ ಇನ್ನೂ ಅನುಮಾನಗಳು ಇವೆ. ಅಂಥವರಿಗೆ ಈ ಫೋಟೋಗಳು ಸ್ಪಷ್ಟನೆ ನೀಡುವಂತೆ ಇದೆ.

ಹೋಳಿ ಸಂದರ್ಭದಲ್ಲಿ ಅಗ್ನಿ ಉರಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಈ ಆಚರಣೆ ಇದೆ. ಇದಕ್ಕೆ ‘ಹೋಳಿಕಾ ದಹನ್’ ಎಂದು ಉತ್ತರ ಭಾರತದವರು ಕರೆಯುತ್ತಾರೆ. ಇದನ್ನು ಐಶ್ವರ್ಯಾ ರೈ ಮನೆಯಲ್ಲಿ ಆಚರಿಸಲಾಗಿದೆ. ಬಚ್ಚನ್ ಕುಟುಂಬದ ಎಲ್ಲರೂ ಇದಕ್ಕೆ ಆಗಮಿಸಿದ್ದರು. ಐಶ್ವರ್ಯಾ ರೈ ಎಂದಿನಂತೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಐಶ್ವರ್ಯಾ ರೈ

‘ನಿಮ್ಮ ಕುಟುಂಬವನ್ನು ಒಟ್ಟಿಗೆ ನೋಡುವುದೇ ಖುಷಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ನೋಡಿ ಐಶ್ವರ್ಯಾ-ಅಭಿಷೇಕ್ ಚೆನ್ನಾಗಿಯೇ ಇದ್ದಾರೆ. ಸುಳ್ಳು ಸುದ್ದಿ ಹೇಳಿದವರ ಬಾಯಿ ಮುಚ್ಚಿದೆ’ ಎಂದು ಕೆಲವರು ಹೇಳಿದ್ದಾರೆ. ಈ ಫೋಟೋದಲ್ಲಿ ಆರಾಧ್ಯಾ ಕೂಡ ಕಾಣಿಸಿಕೊಂಡಿದ್ದಾಳೆ.

ಇದನ್ನೂ ಓದಿ: ಹೇಗಿದ್ರು ಹೇಗಾದ್ರು ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್: ಇಲ್ಲಿವೆ ಚಿತ್ರಗಳು

ಇತ್ತೀಚೆಗೆ ಆರಾಧ್ಯಾಳ ಹೊಸ ಫೋಟೋ ವೈರಲ್ ಆಗಿತ್ತು. ಈ ಫೋಟೋದಲ್ಲಿ ಅವಳು ಸಖತ್ ಸುಂದರವಾಗಿ ಕಾಣಿಸಿಕೊಂಡಿದ್ದಳು. ಇದನ್ನು ನೋಡಿದ ಅನೇಕರು ಅವಳ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂದು ಹೇಳಿದ್ದರು. ಇದರಲ್ಲಿ ನಿಜವಿಲ್ಲ ಎಂದು ಹೇಳಲಾಗುತ್ತಿದೆ. ಐಶ್ವರ್ಯಾ ರೈ ಬಚ್ಚನ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ