AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರ್ಮಿಳಾಗೆ ಟಿಕೆಟ್ ದೊರೆತಾಗ ಏನು ಹೇಳಿದ್ದರು ಕಂಗನಾ: ವೈರಲ್ ಆಗುತ್ತಿದೆ ಹಳೆ ವಿಡಿಯೋ

Kangana Ranaut: ನಟಿ ಕಂಗನಾ ರನೌತ್ ವಿರುದ್ಧ ಕಾಂಗ್ರೆಸ್ ಸದಸ್ಯೆ ಮಾಡಿರುವ ಕೀಳು ಅಭಿರುಚಿ ಹೇಳಿಕೆ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ 2019ರಲ್ಲಿ ಕಾಂಗ್ರೆಸ್​ ಟಿಕೆಟ್ ಪಡೆದಿದ್ದ ಊರ್ಮಿಳಾ ಬಗ್ಗೆ ಇದೇ ಕಂಗನಾ ನೀಡಿದ್ದ ಅತ್ಯಂತ ಕೀಳು ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಊರ್ಮಿಳಾಗೆ ಟಿಕೆಟ್ ದೊರೆತಾಗ ಏನು ಹೇಳಿದ್ದರು ಕಂಗನಾ: ವೈರಲ್ ಆಗುತ್ತಿದೆ ಹಳೆ ವಿಡಿಯೋ
Follow us
ಮಂಜುನಾಥ ಸಿ.
|

Updated on:Mar 27, 2024 | 10:59 AM

ಬಾಲಿವುಡ್ (Bollywood) ನಟಿ ಕಂಗನಾ ರನೌತ್ (Kangana Ranaut)​ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕಂಗನಾ ರನೌತ್​ಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್​ನ ಸುಪ್ರಿಯಾ ಶ್ರೀನಾಥೆ ಎಂಬುವರು ಕಂಗನಾರ ಗ್ಲಾಮರಸ್ ಫೋಟೊ ಒಂದನ್ನು ಹಂಚಿಕೊಂಡು, ‘ಮಂಡಿಯಲ್ಲಿ (ಮಾರುಕಟ್ಟೆ) ಇಂದಿನ ರೇಟೆಷ್ಟು?’ ಎಂದು ಬರೆದುಕೊಂಡಿದ್ದರು. ಸುಪ್ರಿಯಾರ ಈ ಪೋಸ್ಟ್​ಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್​ನ ಮುಖಂಡರು ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರಿಯಾ ಸಹ ಆ ಪೋಸ್ಟ್​ ಅನ್ನು ಡಿಲೀಟ್ ಮಾಡಿದ್ದಾರೆ. ಕಂಗನಾ ವಿರುದ್ಧ ಸುಪ್ರಿಯಾ ಕೀಳು ಅಭಿರುಚಿಯ ಪದ ಬಳಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಕೆಲ ವರ್ಷದ ಹಿಂದೆ ಇದೇ ಕಂಗನಾ, ಊರ್ಮಿಳಾ ಮತೋಡ್ಕರ್​ಗೆ ಟಿಕೆಟ್ ದೊರೆತಾಗ ಮಾಡಿದ್ದ ಕಮೆಂಟ್ ಸಖತ್ ವೈರಲ್ ಆಗುತ್ತಿದೆ.

ನಟಿ, ಊರ್ಮಿಳಾ ಮತೋಡ್ಕರ್​ಗೆ 2019ರಲ್ಲಿ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಿತ್ತು. ಆ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರನೌತ್, ‘ಆಕೆಯೊಬ್ಬ ಸಾಫ್ಟ್ ಪಾರ್ನ್ ಸ್ಟಾರ್’ ಎಂದಿದ್ದರು. ಆಕೆ ತನ್ನ ನಟನೆಯಿಂದ ಜನಪ್ರಿಯವಾಗಿಲ್ಲ, ಬೇರೆ ಕಾರಣಗಳಿಂದ ಮಾತ್ರವೇ ಜನಪ್ರಿಯರಾಗಿದ್ದಾರೆ. ಆಕೆ ಸಾಫ್ಟ್ ಪಾರ್ನ್ ನಿಂದಲೇ ಜನಪ್ರಿಯತೆ ಗಳಿಸಿದ್ದಾಳೆ. ಆಕೆಗೆ ಟಿಕೆಟ್ ದೊರಕಿದೆ ಎಂದ ಮೇಲೆ ನನಗೇಕೆ ಟಿಕೆಟ್ ಸಿಗಬಾರದು’ ಎಂದು ಕಂಗನಾ ರನೌತ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ದೇವಸ್ಥಾನದ ಕಸ ಗುಡಿಸಿದ ಕಂಗನಾ ರನೌತ್ ಮೇಲೆ ಟೀಕಾಪ್ರಹಾರ: ಯಾಕೆ?

ಆಗ ಕಂಗನಾ ರನೌತ್, ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಊರ್ಮಿಳಾ ವಿರುದ್ಧ ಅತ್ಯಂತ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದರು. ಈಗ ಇದೇ ಕಂಗನಾ ವಿರುದ್ಧ ಮತ್ತೊಬ್ಬರು ಕೀಳು ಹೇಳಿಕೆ ನೀಡಿದ್ದಾರೆ. ಆದರೆ ಈಗ ಕಂಗನಾ, ತಮ್ಮ ವಿರುದ್ಧದ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಂಗನಾ, ಊರ್ಮಿಳಾ ವಿರುದ್ಧ ಅವಾಚ್ಯ ಹೇಳಿಕೆ ನೀಡಿದಾಗ ಸುಮ್ಮನಿದ್ದಾಗ ಬಿಜೆಪಿ ಮುಖಂಡರು ಈಗ ಕಂಗನಾ ವಿರುದ್ಧ ಹೇಳಿಕೆ ಬಂದಾಗ ಸಿಡಿದೆದ್ದಿದ್ದಾರೆ. ಊರ್ಮಿಳಾ ವಿರುದ್ಧ ಕಂಗನಾ ಆಡಿದ ಮಾತನ್ನು ಖಂಡಿಸದಿದ್ದ ಕಾಂಗ್ರೆಸ್ ಮುಖಂಡರು, ಈಗ ಕಂಗನಾ ವಿರುದ್ಧ ತಮ್ಮದೇ ಸದಸ್ಯೆ ಮಾಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.

ದ್ವೇಷಭರಿತ ಹೇಳಿಕೆಗಳು, ಮಾತ್ಸರ್ಯದ ಹೇಳಿಕೆಗಳು, ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಗಳು, ಸಹ ನಟ-ನಟಿಯರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳು ಕಂಗನಾ ರನೌತ್​ಗೆ ಹೊಸದೇನೂ ಅಲ್ಲ. ಆಗಾಗ್ಗೆ ಕಂಗನಾ ರನೌತ್ ತಮ್ಮ ನಾಲಗೆ ಹರಿಬಿಡುತ್ತಲೇ ಇರುತ್ತಾರೆ. ಇದೇ ಕಾರಣಕ್ಕೆ ವಿವಾದಗಳ್ನು ಸಹ ಮೈಮೇಲೆ ಎಳೆದುಕೊಂಡಿದ್ದಾರೆ. ರೈತ ಹೋರಾಟದ ಬಗ್ಗೆ ನೀಡಿದ್ದ ಹೇಳಿಕೆಯಿಂದ ದೇಶದ ಹಲವೆಡೆ ಕಂಗನಾ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:38 am, Wed, 27 March 24

ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್
Weekly Horoscope: ಮೇ 26 ರಿಂದ ಜೂನ್​ 1 ರವರೆಗಿನ ವಾರ ಭವಿಷ್ಯ
Weekly Horoscope: ಮೇ 26 ರಿಂದ ಜೂನ್​ 1 ರವರೆಗಿನ ವಾರ ಭವಿಷ್ಯ