AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್​ಫ್ರೆಂಡ್ ಇದ್ದಾನೆ, ಸಮಯ ಬಂದಾಗ ಹೇಳುವೆ: ಕಂಗನಾ ರನೌತ್

Kangana Ranaut: ಕಂಗನಾ ರನೌತ್ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರೊಟ್ಟಿಗೆ ಭಾಗವಹಿಸಿದ್ದರು. ಇವರು ಕಂಗನಾರ ಭಾವಿ ಪತಿ ಎನ್ನಲಾಗಿತ್ತು, ಈ ಬಗ್ಗೆ ಕಂಗನಾ ಮಾತನಾಡಿದ್ದಾರೆ.

ಬಾಯ್​ಫ್ರೆಂಡ್ ಇದ್ದಾನೆ, ಸಮಯ ಬಂದಾಗ ಹೇಳುವೆ: ಕಂಗನಾ ರನೌತ್
ಮಂಜುನಾಥ ಸಿ.
|

Updated on:Jan 25, 2024 | 9:39 AM

Share

ಬಾಲಿವುಡ್ (Bollywood) ನಟಿ ಕಂಗನಾ ರನೌತ್ ಇತ್ತೀಚೆಗಷ್ಟೆ ನಡೆದ ಅಯೋಧ್ಯೆ, ಬಾಲರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಯೋಧ್ಯೆಯಲ್ಲಿ ಕಂಗನಾ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು, ರಾಮ ಮಂದಿರದ ಮುಂದೆ ನಿಂತು ಚಿತ್ರಗಳನ್ನು ಸಹ ಕಂಗನಾ ಹಂಚಿಕೊಂಡಿದ್ದರು. ಆದರೆ ಕಂಗನಾ, ವ್ಯಕ್ತಿಯೊಬ್ಬರೊಟ್ಟಿಗೆ ರಾಮ ಮಂದಿರದ ಮುಂದೆ ನಿಂತಿರುವ ಚಿತ್ರಗಳು ಸಹ ವೈರಲ್ ಆಗಿದ್ದವು. ಆ ವ್ಯಕ್ತಿಯ ಹೆಸರು ನಿಶಾಂತ್ ಪಿಟ್ಟಿ. ಕಂಗನಾ ಹಾಗೂ ಉದ್ಯಮಿ ನಿಶಾಂತ್ ಪರಸ್ಪರ ಪ್ರೀತಿಯಲ್ಲಿದ್ದು ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗಿತ್ತು. ಆ ಬಗ್ಗೆ ಇದೀಗ ಕಂಗನಾ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಹಾಗೂ ನಿಶಾಂತ್ ಪಿಟ್ಟಿ ಚಿತ್ರಗಳು ವೈರಲ್ ಆಗಿ, ಮದುವೆ ಸುದ್ದಿಗಳು ಹರಿದಾಡಲು ಆರಂಭವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಕಂಗನಾ ರನೌತ್, ‘ಪ್ರತಿ ಬಾರಿ ಒಬ್ಬೊಬ್ಬ ವ್ಯಕ್ತಿಯ ಜೊತೆಗೆ ನನ್ನ ಹೆಸರು ತಳುಕು ಹಾಕಿ ನನಗೆ ಮುಜುಗರ ಉಂಟು ಮಾಡಬೇಡಿ. ನನ್ನ ಜೊತೆಗೆ ಚಿತ್ರದಲ್ಲಿರುವ ನಿಶಾಂತ್ ವಿವಾಹಿತ ವ್ಯಕ್ತಿ, ಸುಖವಾಗಿ ದಾಂಪತ್ಯ ಜೀವನ ಕಳೆಯುತ್ತಿದ್ದಾರೆ’ ಎಂದಿದ್ದಾರೆ. ಮುಂದುವರೆದು, ‘ನಾನು ರಿಲೇಷನ್​ಶಿಪ್​ನಲ್ಲಿದ್ದೀನಿ, ಒಬ್ಬರನ್ನು ಡೇಟ್ ಮಾಡುತ್ತಿದ್ದೀನಿ, ಆ ಬಗ್ಗೆ ಸಮಯ ಬಂದಾಗ ನಾನೇ ಹೇಳುತ್ತೇನೆ, ಆದರೆ ಅದು ನಿಶಾಂತ್ ಅಲ್ಲ’ ಎಂದಿದ್ದಾರೆ.

ಮಾಧ್ಯಮಗಳಿಗೆ ಮನವಿ ಮಾಡಿರುವ ಕಂಗನಾ, ‘ಮಾಧ್ಯಮದವರಿಗೆ ನನ್ನ ವಿನಮ್ರ ವಿನಂತಿ, ದಯವಿಟ್ಟು ತಪ್ಪು ಮಾಹಿತಿ ಹಬ್ಬಿಸಬೇಡಿ, ನಿಶಾಂತ್ ಪಿಟ್ಟಿ ಮದುವೆಯಾಗಿ ಸುಖವಾಗಿದ್ದಾರೆ ಮತ್ತು ನಾನು ಬೇರೆಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಸರಿಯಾದ ಸಮಯಕ್ಕಾಗಿ ಕಾಯಿರಿ. ನಾನೇ ಅದನ್ನು ಬಹಿರಂಗ ಪಡಿಸುತ್ತೀನಿ. ದಯವಿಟ್ಟು ನಮ್ಮನ್ನು ಮುಜುಗರಕ್ಕೀಡು ಮಾಡಬೇಡಿ, ಒಟ್ಟಿಗೆ ಚಿತ್ರಗಳನ್ನು ಕ್ಲಿಕ್ಕಿಸಿದ ಮಾತ್ರಕ್ಕೆ ಯುವತಿಯನ್ನು ಪ್ರತಿದಿನ ಹೊಸ ಪುರುಷನಿಗೆ ಲಿಂಕ್ ಮಾಡುವುದು ಒಳ್ಳೆಯದಲ್ಲ. ದಯವಿಟ್ಟು ಇದನ್ನು ಮಾಡಬೇಡಿ’ ಎಂದಿದ್ದಾರೆ.

ಇದನ್ನೂ ಓದಿ:ದೇವಸ್ಥಾನದ ಕಸ ಗುಡಿಸಿದ ಕಂಗನಾ ರನೌತ್ ಮೇಲೆ ಟೀಕಾಪ್ರಹಾರ: ಯಾಕೆ?

ಕಂಗನಾ ರನೌತ್ ಕೆಲ ದಿನಗಳ ಹಿಂದೆ ಮುಂಬೈನ ಹೋಟೆಲ್ ಒಂದರ ಬಳಿ ವ್ಯಕ್ತಿಯೊಬ್ಬರೊಟ್ಟಿಗೆ ಕಾಣಿಸಿಕೊಂಡಿದ್ದರು. ಆಗಲೂ ಸಹ ಬಾಲಿವುಡ್​ನ ಮಾಧ್ಯಮಗಳು, ಕಂಗನಾ ತಮ್ಮ ಬಾಯ್​ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ ಎಂದಿದ್ದವು. ಆಗಲೂ ಸಹ ಸ್ಪಷ್ಟನೆ ನೀಡಿದ್ದ ಕಂಗನಾ, ನನ್ನ ಜೊತೆಗೆ ಇರುವ ಆ ನಿಗೂಢ ವ್ಯಕ್ತಿ, ನನ್ನ ಹೇರ್​ಸ್ಟೈಲಿಸ್ಟ್, ಸುಮ್ಮನೆ ಸುಳ್ಳು ಸುದ್ದಿಗಳ ಹಂಚಬೇಡಿ ಎಂದಿದ್ದರು.

ಕಂಗನಾ ರನೌತ್, ಈ ಹಿಂದೆ ಹೃತಿಕ್ ರೋಷನ್ ಜೊತೆ ರಿಲೇಶನ್​ಷಿಪ್​ನಲ್ಲಿದ್ದರು. ಬಳಿಕ ಅವರ ಸಂಬಂಧ ಮುರಿಯಿತು, ಇಬ್ಬರೂ ಸಹ ಪರಸ್ಪರರ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆ ಸಹ ಹೂಡಿದ್ದರು. ಅದಾದ ಬಳಿಕ ವಿದೇಶಿ ವ್ಯಕ್ತಿಯೊಬ್ಬರೊಟ್ಟಿಗೆ ಕಂಗನಾ ಡೇಟಿಂಗ್​ ನಡೆಸಿದರು. ಅದೂ ಸಹ ಬ್ರೇಕ್​ಅಪ್ ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:38 am, Thu, 25 January 24