AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಟು ನಾಟು..’ ಡ್ಯಾನ್ಸ್​ ಕಾಪಿ ಮಾಡಿದ ಅಕ್ಷಯ್​ ಕುಮಾರ್​; ಶುರುವಾಯ್ತು ಟ್ರೋಲ್​

‘ಬಡೆ ಮಿಯಾ ಚೋಟೆ ಮಿಯಾ’ ಚಿತ್ರದ ‘ಮಸ್ತ್​ ಮಲಂಗ ಜೂಮ್​..’ ಹಾಡಿನಲ್ಲಿ ಅಕ್ಷಯ್​ ಕುಮಾರ್​ ಹಾಗೂ ಟೈಗರ್​ ಶ್ರಾಫ್​ ಒಟ್ಟಾಗಿ ಡ್ಯಾನ್ಸ್​ ಮಾಡಿದ್ದಾರೆ. ಇದನ್ನು ನೋಡಿದ ಬಳಿಕ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡಿನಿಂದ ಡ್ಯಾನ್ಸ್ ಸ್ಟೆಪ್​ ಕಾಪಿ ಮಾಡಲಾಗಿದೆ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

‘ನಾಟು ನಾಟು..’ ಡ್ಯಾನ್ಸ್​ ಕಾಪಿ ಮಾಡಿದ ಅಕ್ಷಯ್​ ಕುಮಾರ್​; ಶುರುವಾಯ್ತು ಟ್ರೋಲ್​
ಟೈಗರ್​ ಶ್ರಾಫ್​, ಅಕ್ಷಯ್​ ಕುಮಾರ್​, ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್​
ಮದನ್​ ಕುಮಾರ್​
|

Updated on: Feb 28, 2024 | 4:28 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಬಡೆ ಮಿಯಾ ಚೋಟೆ ಮಿಯಾ’ ಚಿತ್ರ ಕೂಡ ಇದೆ. ಈ ಸಿನಿಮಾದಲ್ಲಿ ಟೈಗರ್​ ಶ್ರಾಫ್​ ಮತ್ತು ಅಕ್ಷಯ್​ ಕುಮಾರ್​ (Akshay Kumar) ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಚಿತ್ರದ ಪ್ರಚಾರಕ್ಕೆ ತಂಡದವರು ಬಹಳ ಮಹತ್ವ ನೀಡುತ್ತಿದ್ದಾರೆ. ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ (Tiger Shroff) ಅವರು ಒಟ್ಟಿಗೆ ನಟಿಸಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಜೋರಾಗಿದೆ. ಈದ್​ ಪ್ರಯುಕ್ತ ಏಪ್ರಿಲ್​ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಎರಡನೇ ಸಾಂಗ್ ಬಿಡುಗಡೆ ಮಾಡಲಾಗಿದೆ. ‘ಮಸ್ತ್​ ಮಲಂಗ ಜೂಮ್​..’ ಎಂಬ ಈ ಹಾಡನ್ನು ನೋಡಿದವರಿಗೆ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ (Naatu Naatu) ಹಾಡು ನೆನಪಾಗುತ್ತಿದೆ.

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡಿನಲ್ಲಿ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ಮಸ್ತ್​ ಆಗಿ ಡ್ಯಾನ್ಸ್​ ಮಾಡಿದ್ದರು. ಆ ಹಾಡಿಗೆ ಆಸ್ಕರ್​ ಪ್ರಶಸ್ತಿ ಕೂಡ ಸಿಕ್ಕಿತ್ತು. ಈಗ ಅದೇ ರೀತಿ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಹಾಡಿನಲ್ಲಿ ಅಕ್ಷಯ್​ ಕುಮಾರ್ ಮತ್ತು ಟೈಗರ್​ ಶ್ರಾಫ್​ ಅವರು ಡ್ಯಾನ್ಸ್​ ಮಾಡಿದ್ದಾರೆ. ಸ್ಟೆಪ್ಸ್​ ಕಾಪಿ ಮಾಡಲಾಗಿದೆ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಅಕ್ಷಯ್​ ಕುಮಾರ್ ಎಕ್ಸ್​ (ಟ್ವಿಟರ್​ ಪೋಸ್ಟ್​):

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ಟೈಗರ್​ ಶ್ರಾಫ್​ ಮಾತ್ರವಲ್ಲದೇ ಸೋನಾಕ್ಷಿ ಸಿನ್ಹಾ ಪೃಥ್ವಿರಾಜ್​ ಸುಕುಮಾರನ್​, ಮಾನುಷಿ ಚಿಲ್ಲರ್​ ಮುಂತಾದವರು ನಟಿಸಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಆದರೆ ಡ್ಯಾನ್ಸ್​ ಸ್ಟೆಪ್​ ಕಾಪಿ ಮಾಡಿದ ಆರೋಪದಲ್ಲಿ ಈ ಚಿತ್ರತಂಡವನ್ನು ಟ್ರೋಲ್​ ಮಾಡಲಾಗುತ್ತಿದೆ. ಅದರ ನಡುವೆಯೂ ‘ಮಸ್ತ್​ ಮಲಂಗ ಜೂಮ್​..’ ಹಾಡು ಫೇಮಸ್​ ಆಗುತ್ತಿದೆ.

‘ಮಸ್ತ್​ ಮಲಂಗ ಜೂಮ್​..’ ಹಾಡು:

‘ಮಸ್ತ್​ ಮಲಂಗ ಜೂಮ್​..’ ಹಾಡಿಗೆ ಬಾಸ್ಕೋ ಸೀಸರ್​ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಕಾಪಿ ಎಂಬ ಆರೋಪಕ್ಕೆ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಅಬು ಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ಅಕ್ಷಯ್​ ಕುಮಾರ್​

ಅಕ್ಷಯ್​ ಕುಮಾರ್​ ನಟನೆಯ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಚೆನ್ನಾಗಿ ಕಲೆಕ್ಷನ್​ ಮಾಡುತ್ತಿಲ್ಲ. ಈಗ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಅವರಿಗೆ ಇದೆ. ಈ ಸಿನಿಮಾಗೆ ಅಲಿ ಅಬ್ಬಾಸ್​ ಜಫರ್​ ಅವರು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಾತಿಗಿಂತ ಕ್ರಿಯೆ ಮುಖ್ಯ, ಸೇವೆಯೇ ನಮ್ಮ ಪರಮ ಧರ್ಮ: ನರೇಂದ್ರ ಮೋದಿ
ಮಾತಿಗಿಂತ ಕ್ರಿಯೆ ಮುಖ್ಯ, ಸೇವೆಯೇ ನಮ್ಮ ಪರಮ ಧರ್ಮ: ನರೇಂದ್ರ ಮೋದಿ