90ರ ದಶಕದಲ್ಲಿ ಅಮಿತಾಭ್ ದಿವಾಳಿಯಾಗಿದ್ದಾಗ ಮೌನವಾಗಿದ್ದ ಜಯಾ ಬಚ್ಚನ್
1990ರ ಸಮಯದಲ್ಲಿ ಅಮಿತಾಭ್ ಬಚ್ಚನ್ ಸಂಪೂರ್ಣ ದಿವಾಳಿಯಾಗಿದ್ದರು. ಅವರ ಉದ್ಯಮ ನಷ್ಟದಲ್ಲಿತ್ತು. ಸಿನಿಮಾ ಆಫರ್ಗಳು ಕೂಡ ಅವರಿಗೆ ಇರಲಿಲ್ಲ. ಈ ಕೆಟ್ಟ ಅವಧಿಯನ್ನು ಜಯಾ ಬಚ್ಚನ್ ಅವರು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ನಟಿ ಮೌನವಾಗಿ ಪತಿಯೊಂದಿಗೆ ನಿಂತು ಅವರಿಗೆ ಬೆಂಬಲ ನೀಡಿದರು. ಪತಿ ವೃತ್ತಿಜೀವನದಲ್ಲಿ ವಿಫಲವಾದಾಗಲೂ ಹೇಗೆ ಬೆಂಬಲಿಸಿದೆ ಎಂಬುದನ್ನು ಸಹ ಜಯಾ ಹೇಳಿದರು.
ಅಮಿತಾಭ್ ಬಚ್ಚನ್ (Amitabh Bachchan) ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಪಾಡ್‌ಕಾಸ್ಟ್ ಶೋ ಮಾಡುತ್ತಿದ್ದಾರೆ. ಅವರು ಈ ಶೋಗೆ ತಮ್ಮ ಅಜ್ಜಿ ಜಯಾ ಮತ್ತು ತಾಯಿ ಶ್ವೇತಾ ನಂದಾ ಅವರೊಂದಿಗೆ ಮಹಿಳಾ ಹಕ್ಕುಗಳು ಮತ್ತು ಹೊಸ ತಲೆಮಾರಿನ ಮತ್ತು ಹಳೆಯ ತಲೆಮಾರಿನ ಆಲೋಚನೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ಪಾಡ್ಕಾಸ್ಟ್ಗೆ ‘ವಾಟ್ ದಿ ಹೆಲ್ ನವ್ಯಾ’ ಎನ್ನುವ ಟೈಟಲ್ ಇಡಲಾಗಿದೆ. ಇದರ ಇತ್ತೀಚಿನ ಸಂಚಿಕೆಯಲ್ಲಿ, ಜಯಾ ಅವರು ಅಮಿತಾಭ್ ಅವರ ಕೆಟ್ಟ ದಿನಗಳ ಬಗ್ಗೆ ಮಾತನಾಡಿದ್ದಾರೆ.
1990ರ ಸಮಯದಲ್ಲಿ ಅಮಿತಾಭ್ ಬಚ್ಚನ್ ಸಂಪೂರ್ಣ ದಿವಾಳಿಯಾಗಿದ್ದರು. ಅವರ ಉದ್ಯಮ ನಷ್ಟದಲ್ಲಿತ್ತು. ಸಿನಿಮಾ ಆಫರ್ಗಳು ಕೂಡ ಅವರಿಗೆ ಇರಲಿಲ್ಲ. ಈ ಕೆಟ್ಟ ಅವಧಿಯನ್ನು ಜಯಾ ಬಚ್ಚನ್ ಅವರು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ನಟಿ ಮೌನವಾಗಿ ಪತಿಯೊಂದಿಗೆ ನಿಂತು ಅವರಿಗೆ ಬೆಂಬಲ ನೀಡಿದರು. ಪತಿ ವೃತ್ತಿಜೀವನದಲ್ಲಿ ವಿಫಲವಾದಾಗಲೂ ಹೇಗೆ ಬೆಂಬಲಿಸಿದೆ ಎಂಬುದನ್ನು ಸಹ ಜಯಾ ಹೇಳಿದರು.
‘ನಮ್ಮ ಜೀವನದ ನಾವು ವಿವಿಧ ಹಂತಗಳಲ್ಲಿ, ವಿವಿಧ ರೀತಿಯ ವೈಫಲ್ಯಗಳನ್ನು ಎದುರಿಸಿದ್ದೇವೆ. ಆಗ ನಾವು ಒಟ್ಟಿಗೆ ಇದ್ದೆವು. ನಾನು ಮಾಡಿದ್ದು ಸರಿಯೋ ತಪ್ಪೋ ಎಂದು ನನಗೆ ತಿಳಿದಿಲ್ಲ. ಓರ್ವ ವ್ಯಕ್ತಿಯು ಕಷ್ಟದ ಹಂತದಲ್ಲಿದ್ದಾಗ ಅವರ ಜೊತೆ ಶಾಂತವಾಗಿ ಇರುವುದು ಒಳ್ಳೆಯದು. ಅವರ ಪಕ್ಕದಲ್ಲಿ ಮೌನವಾಗಿ ನಿಂತು ನಿನಗಾಗಿ ನಾನಿದ್ದೇನೆ ಎಂದು ಹೇಳಬೇಕು’ ಎಂದಿದ್ದಾರೆ ಜಯಾ ಬಚ್ಚನ್. ಶ್ವೇತಾ ಬಚ್ಚನ್ ಈ ವಿಷಯದಲ್ಲಿ ಸ್ವಲ್ಪ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ತಾಯಿ ಜಯಾ ಅವರ ಮಾತಿಗೆ ಅವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ‘ಕೆಲವೊಮ್ಮೆ ಮನುಷ್ಯನಿಗೆ ಮೌನವಾಗಿ ನಿಲ್ಲುವ ಬದಲು ಬೆಂಬಲದ ಮಾತುಗಳನ್ನು ಹೇಳಬೇಕಾಗುತ್ತದೆ’ ಎಂದರು ಅವರು.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ರಿಲೀಸ್ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಅಮಿತಾಭ್ ಬಚ್ಚನ್
ಜಯಾ, ಶ್ವೇತಾ ಮತ್ತು ನವ್ಯಾ ತಮ್ಮ ಹೊಸ ಸಂಚಿಕೆಯಲ್ಲಿ ಇಂತಹ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ. ಹಿಂದಿನ ಕಾಲದ ಆಲೋಚನೆಗೂ ಇಂದಿನ ಆಲೋಚನೆಗೂ ಇರುವ ವ್ಯತ್ಯಾಸ ಏನು ಎಂಬುದು ಈ ಚರ್ಚೆಯಿಂದ ಗೊತ್ತಾಗಿದೆ.
ಅಮಿತಾಭ್ ಬಚ್ಚನ್ಗೆ ಏನಾಗಿತ್ತು?
ಅಮಿತಾಭ್ ಬಚ್ಚನ್ ಅವರು 90ರ ದಶಕದ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಬೋಫೋರ್ಸ್ ಹಗರಣದಲ್ಲಿ ಅಮಿತಾಭ್ ಹೆಸರು ತಳುಕು ಹಾಕಿಕೊಂಡಿತ್ತು. ಅವರು ಚಿತ್ರರಂಗದಲ್ಲಿ ನಿರಂತರ ಫ್ಲಾಪ್ಗಳನ್ನು ನೀಡುತ್ತಿದ್ದರು. ನಿರ್ಮಾಣ ಸಂಸ್ಥೆ ಎಬಿ ಕಾರ್ಪ್ ಮೂಲಕ ಮತ್ತಷ್ಟು ನಷ್ಟ ಅನುಭವಿಸಿದರು. ಅವರು ದಿವಾಳಿ ಎಂದು ಘೋಷಣೆ ಮಾಡಲಾಯಿತು. ನಂತರ ಅವರು ಮತ್ತೆ ಪುಟಿದೆದ್ದರು. 2000ರಲ್ಲಿ ‘ಕೌನ್ ಬನೇಗಾ ಕರೋಡ್ಪತಿ’ ಹೋಸ್ಟ್ ಮಾಡಿ ಗಮನ ಸೆಳೆದರು. ನಂತರ ಹಲವು ಸಿನಿಮಾಗಳನ್ನು ಮಾಡಿ ಗಮನ ಸೆಳೆದರು. ಈಗ ಅವರಿಗೆ 81 ವರ್ಷ. ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಪ್ರಭಾಸ್ ನಟನೆಯ ‘ಕಲ್ಕಿ ಎಡಿ 2898’ ಚಿತ್ರದಲ್ಲಿ ಅಮಿತಾಭ್ ಪ್ರಮುಖ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ