ರಣಬೀರ್ ಕಪೂರ್​ಗಿಂತ ಆಲಿಯಾನೇ ಹೆಚ್ಚು ಶ್ರೀಮಂತೆ; ಒಟ್ಟೂ ಆಸ್ತಿ ಎಷ್ಟು ಕೋಟಿ?

Alia Bhatt Net Worth: ಆಲಿಯಾ ಭಟ್ ಅವರು ಬಾಂದ್ರಾದಲ್ಲಿ ಬಂಗಲೆ ಹೊಂದಿದ್ದಾರೆ. ಇದರ ಬೆಲೆ 32 ಕೋಟಿ ರೂಪಾಯಿ. ಅವರು ತಮ್ಮ ನಿರ್ಮಾಣ ಸಂಸ್ಥೆಗಾಗಿ ಒಂದು ಕಚೇರಿ ಜಾಗ ಖರೀದಿಸಿದ್ದು ಇದರ ಬೆಲೆ 2 ಕೋಟಿ ರೂಪಾಯಿ. ಅವರು ಲಂಡನ್​ನಲ್ಲಿ ಮನೆ ಹೊಂದಿದ್ದಾರೆ. ಅವರ ಬಳಿ ಹಲವು ದುಬಾರಿ ಕಾರುಗಳು ಇವೆ. 

ರಣಬೀರ್ ಕಪೂರ್​ಗಿಂತ ಆಲಿಯಾನೇ ಹೆಚ್ಚು ಶ್ರೀಮಂತೆ; ಒಟ್ಟೂ ಆಸ್ತಿ ಎಷ್ಟು ಕೋಟಿ?
ರಣಬೀರ್-ರಹಾ-ಆಲಿಯಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 15, 2024 | 7:54 AM

ಆಲಿಯಾ ಭಟ್ (Alia Bhatt) ಅವರಿಗೆ ಇಂದು (ಮಾರ್ಚ್ 15) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅತ್ಯಂತ ಯಶಸ್ವಿ ನಟಿಯರಲ್ಲಿ ಅವರ ಹೆಸರು ಕೂಡ ಇದೆ. ಸ್ಟಾರ್ ಕಿಡ್ ಆದರೂ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಅವರು ಯಶಸ್ವಿ ಆಗಿದ್ದಾರೆ. ಸಿನಿಮಾಗಳಿಗೆ ದೊಡ್ಡ ಮೊತ್ತ ಪಡೆಯುವ ಅವರು, ಹಲವು ಬ್ರ್ಯಾಂಡ್​ಗಳ ಪ್ರಚಾರದಿಂದ ಸಾಕಷ್ಟು ಹಣ ಪಡೆಯುತ್ತಾರೆ. ಅವರು ಪತಿ ರಣಬೀರ್ ಕಪೂರ್​ಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ಅಚ್ಚರಿ ವಿಚಾರ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾರೆ ಆಸ್ತಿ 885 ಕೋಟಿ ರೂಪಾಯಿ ಇದೆ. ಇತ್ತೀಚಿನ ವರ್ಷಗಳ ಮಾಹಿತಿ ಪ್ರಕಾರ ಆಲಿಯಾ ಭಟ್ ಆಸ್ತಿ 520 ಕೋಟಿ ರೂಪಾಯಿ. ರಣಬೀರ್ ಕಪೂರ್ ಅವ ವೈಯಕ್ತಿ ಆಸ್ತಿ 365 ಕೋಟಿ ರೂಪಾಯಿ ಇತ್ತು. ಮದುವೆ ಆದ ಬಳಿಕ ರಣಬೀರ್ ಕಪೂರ್ ಅವರು ಸಾಕಷ್ಟು ಗೆಲುವು ಕಾಣುತ್ತಿದ್ದು ಅವರ ಆಸ್ತಿಯಲ್ಲಿ ಭರ್ಜರಿ ಏರಿಕೆ ಕಾಣುತ್ತಿದೆ. ಇವರು ಒಟ್ಟಾಗಿ ಸಿನಿಮಾ ಹಾಗೂ ಜಾಹೀರಾತುಗಳನ್ನು ಮಾಡುತ್ತಿದ್ದಾರೆ.

ಆಲಿಯಾ ಭಟ್ ಅವರುಪ್ರತಿ ಚಿತ್ರಕ್ಕೆ 15-18 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇಷ್ಟು ದೊಡ್ಡ ಮೊತ್ತವನ್ನು ಹೀರೋಯಿನ್​ಗಳಿಗೆ ನೀಡೋದು ತುಂಬಾನೇ ಅಪರೂಪ. 2021ರಲ್ಲಿ ಭಾರತದ ಟಾಪ್​ 6 ಮೋಸ್ಟ್ ವ್ಯಾಲ್ಯುವೆಬಲ್ ಸೆಲೆಬ್ರಿಟಿಗಳ ಸಾಲಿನಲ್ಲಿ ಅವರಿಗೂ ಸ್ಥಾನ ಸಿಕ್ಕಿತ್ತು. ಆಲಿಯಾ ಭಟ್ ಅವರು ಲೇಸ್​, ಫ್ರೂಟಿ, ಡ್ಯೂರೋಫ್ಲೆಕ್ಸ್, ಮಾನ್ಯಾವರ್, ಮೇಕ್ ಮೈ ಟ್ರಿಪ್, ಫ್ಲಿಪ್ಕಾರ್ಟ್ ಸೇರಿ ಅನೇಕ ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಾರೆ. ಪ್ರತಿ ಬ್ರ್ಯಾಂಡ್ ಪ್ರಚಾರಕ್ಕೆ ಅವರು ಪಡೆಯೋದು 2 ಕೋಟಿ ರೂಪಾಯಿ.

ಆಲಿಯಾ ಭಟ್ ಅವರು ಬಾಂದ್ರಾದಲ್ಲಿ ಬಂಗಲೆ ಹೊಂದಿದ್ದಾರೆ. ಇದರ ಬೆಲೆ 32 ಕೋಟಿ ರೂಪಾಯಿ. ಅವರು ತಮ್ಮ ನಿರ್ಮಾಣ ಸಂಸ್ಥೆಗಾಗಿ ಒಂದು ಕಚೇರಿ ಜಾಗ ಖರೀದಿಸಿದ್ದು ಇದರ ಬೆಲೆ 2 ಕೋಟಿ ರೂಪಾಯಿ. ಅವರು ಲಂಡನ್​ನಲ್ಲಿ ಮನೆ ಹೊಂದಿದ್ದಾರೆ. ಅವರ ಬಳಿ ಲ್ಯಾಂಡ್ ರೋವರ್ ರೇಂಜ್​ ರೋವರ್ ವೋಗ್​ (2 ಕೋಟಿ ರೂಪಾಯಿ), ಬಿಎಂಡಬ್ಲ್ಯೂ 7 ಸೀರಿಸ್ (1.76) ಕೋಟಿ ರೂಪಾಯಿಯ ಕಾರುಗಳು ಇವೆ.

ರಣಬೀರ್ ಕಪೂರ್ ಅವರು ಪ್ರತಿ ಚಿತ್ರಕ್ಕೆ 50 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅಂದರೆ ಆಲಿಯಾ ಭಟ್​ಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಾರೆ ಅವರು. ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ ರಣಬೀರ್. ಅವರ ನಟನೆಯ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ‘ಬ್ರಹ್ಮಾಸ್ತ್ರ’, ‘ತು ಜೂಟಿ ಮೇ ಮಕ್ಕರ್’ ಬಳಿಕ ಅವರು ಮತ್ತೊಂದು ಗೆಲುವು ಕಂಡಿದ್ದಾರೆ. ರಣಬೀರ್ ಬಳಿಯೂ ಹಲವು ದಯಬಾರಿ ಕಾರುಗಳು ಇವೆ.  ರಣಬೀರ್ ಅವರಿಗೆ ತಂದೆ ಮಾಡಿಟ್ಟ ಆಸ್ತಿ ಜಾಸ್ತಿ ಇದೆ.

ಇದನ್ನೂ ಓದಿ: ಬನ್ಸಾಲಿ ಹೊಸ ಚಿತ್ರಕ್ಕೆ ರಣಬೀರ್ ಕಪೂರ್ ಹೀರೋ; ಶೂಟಿಂಗ್​ಗೂ ಮೊದಲೇ ಷರತ್ತುಗಳ ಪಟ್ಟಿ ಇಟ್ಟ ನಟ

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸಿದ್ದರು ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ