ಅವಾರ್ಡ್ ಫಂಕ್ಷನ್ನಲ್ಲಿ ಕರಣ್ ಜೋಹರ್ ವಿರುದ್ಧ ಕೂಗಾಡಿದ ರಣಬೀರ್ ಕಪೂರ್; ವಿಡಿಯೋ ವೈರಲ್
ರಣಬೀರ್ ವೇದಿಕೆಯ ಕೆಳಭಾಗದಲ್ಲಿ ಕುಳಿತಿದ್ದರು. ಮೇಲಿನಿಂದ ಕರಣ್ ಹಾಗೂ ಆಯುಷ್ಮಾನ್ ಇಳಿದು ಬಂದರು. ರಣಬೀರ್ ಕಪೂರ್ ಬಳಿ ಕರಣ್ ಸಹಾಯ ಕೇಳಿದರು. ಈ ಸಹಾಯವನ್ನು ರಣಬೀರ್ ಕಪೂರ್ ಮಾತ್ರ ಮಾಡಲು ಸಾಧ್ಯ ಎಂದರು ಕರಣ್. ಪದೇ ಪದೇ ಇದನ್ನು ಹೇಳಿದ್ದರಿಂದ ರಣಬೀರ್ ಕಪೂರ್ ಅವರು ಇರಿಟೇಷನ್ಗೆ ಒಳಗಾಗಿದ್ದಾರೆ.
ರಣಬೀರ್ ಕಪೂರ್ (Ranbir Kapoor) ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಕೆಲವೊಮ್ಮೆ ಅಸಮಾಧಾನಗೊಂಡು ಕೂಗಾಡಿದ್ದಿದೆ. ಈ ರೀತಿ ಅವರು ಮಾಡುತ್ತಿರುವುದು ಹಲವು ಬಾರಿ ರಿಪೀಟ್ ಆಗಿದೆ. ಈ ಬಾರಿ ಅವರು ಅವಾರ್ಡ್ ಫಂಕ್ಷನ್ನಲ್ಲೇ ಕೂಗಾಡಿದ್ದಾರೆ. ಇದನ್ನು ನೋಡಿ ನಿರೂಪಕರ ಸ್ಥಾನದಲ್ಲಿದ್ದ ಕರಣ್ ಜೋಹರ್ ಹಾಗೂ ಆಯುಷ್ಮಾನ್ ಖುರಾನಾ ಶಾಕ್ಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಅಲ್ಲಿ ನೆರೆದಿದ್ದ ಅನೇಕ ಸೆಲೆಬ್ರಿಟಿಗಳಿಗೂ ರಣಬೀರ್ ಕಪೂರ್ ಅವರ ನಡೆ ಅಚ್ಚರಿ ತರಿಸಿದೆ.
ರಣಬೀರ್ ಕಪೂರ್ ಅವರು ದೊಡ್ಡ ಸ್ಟಾರ್ ಹೀರೋ. ಅನೇಕ ಅವಾರ್ಡ್ ಫಂಕ್ಷನ್ಗಳಿಗೆ ಅವರು ಹಾಜರಿ ಹಾಕುತ್ತಾರೆ. ಅದೇ ರೀತಿ ಅವರು ಇತ್ತೀಚೆಗೆ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಈ ಅವಾರ್ಡ್ ಫಂಕ್ಷನ್ಗೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ದೊಡ್ಡ ವೇದಿಕೆಯನ್ನು ಸಿದ್ಧ ಮಾಡಲಾಗಿತ್ತು. ಎಲ್ಲಾ ಸೆಲೆಬ್ರಿಟಿಗಳು ಬಹಳ ಸುಂದರವಾಗಿ ರೆಡಿ ಆಗಿ ಬಂದಿದ್ದರು. ಈ ಮಧ್ಯೆ ರಣಬೀರ್ ಕಪೂರ್ ನಡೆದುಕೊಂಡ ರೀತಿ ಅನೇಕರಿಗೆ ಇಷ್ಟ ಆಗಿಲ್ಲ.
ರಣಬೀರ್ ಕಪೂರ್ ಅವರು ವೇದಿಕೆ ಕೆಳಭಾಗದಲ್ಲಿ ಕುಳಿತಿದ್ದರು. ಮೇಲಿನಿಂದ ಕರಣ್ ಜೋಹರ್ ಹಾಗೂ ಆಯುಷ್ಮಾನ್ ಖುರಾನಾ ಇಳಿದು ಬಂದರು. ರಣಬೀರ್ ಕಪೂರ್ ಬಳಿ ಕರಣ್ ಸಹಾಯ ಕೇಳಿದರು. ಈ ಸಹಾಯವನ್ನು ರಣಬೀರ್ ಕಪೂರ್ ಮಾತ್ರ ಮಾಡಲು ಸಾಧ್ಯ ಎಂದರು ಕರಣ್. ಪದೇ ಪದೇ ಇದನ್ನು ಹೇಳಿದ್ದರಿಂದ ರಣಬೀರ್ ಕಪೂರ್ ಅವರು ಇರಿಟೇಷನ್ ಆಗಿದ್ದಾರೆ. ‘ನನಗೆ ಕೇಳುತ್ತಿದೆ ನಾನು ಕಿವುಡನಲ್ಲ’ ಎಂದು ಕೂಗಿದ್ದಾರೆ.
ರಣಬೀರ್ ಕಪೂರ್ ಅವರು ಹೇಳಿದ್ದು ‘ಅನಿಮಲ್’ ಸಿನಿಮಾ ಡೈಲಾಗ್. ಹೀಗಾಗಿ ಫನ್ಗಾಗಿಯೇ ಈ ವಿಡಿಯೋ ಮಾಡಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಅವಾರ್ಡ್ ಫಂಕ್ಷನ್ನಲ್ಲಿ ಪ್ರತಿ ಬಾರಿ ಈ ರೀತಿಯ ಗಿಮಿಕ್ ಇದ್ದೇ ಇರುತ್ತದೆ. ರಣಬೀರ್ ಕಪೂರ್ ಹಾಗೂ ಕರಣ್ ಜೋಹರ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಆದರೆ, ಕಾಫಿ ವಿತ್ ಕರಣ್ ಜೋಹರ್ ಶೋ ವಿಚಾರದಲ್ಲಿ ರಣಬೀರ್ ಕಪೂರ್ಗೆ ಅಸಮಾಧಾನ ಇದೆ. ಈ ಮೊದಲು ಆ ಬಗ್ಗೆ ರಣಬೀರ್ ಕಪೂರ್ ಅವರು ಮಾತನಾಡಿದ್ದರು.
ಇದನ್ನೂ ಓದಿ: ಸಲ್ಮಾನ್ ಹುಟ್ಟುಹಬ್ಬ: 25 ವರ್ಷ ಹಿಂದಿನ ಘಟನೆ ನೆನಪಿಸಿಕೊಂಡ ಕರಣ್ ಜೋಹರ್
ಕರಣ್ ಜೋಹರ್ ನಡೆಸಿಕೊಡೋ ‘ಕಾಫಿ ವಿತ್ ಕರಣ್’ ಶೋನಲ್ಲಿ ಸಾಕಷ್ಟು ವಿವಾದಗಳು ಆಗುತ್ತವೆ. ಇದರಿಂದ ಅನೇಕ ಸೆಲೆಬ್ರಿಟಿಗಳ ಕರಿಯರ್ ಮೇಲೆ ಪ್ರಭಾವ ಉಂಟಾಗಿದೆ. ಈ ವಿಚಾರದಲ್ಲಿ ರಣಬೀರ್ ಕಪೂರ್ ಅವರಿಗೆ ಬೇಸರ ಇದೆ. ಈ ಬಗ್ಗೆ ಅವರು ಮಾತನಾಡಿದ್ದರು. ‘ಅವರ ಶೋನಲ್ಲಿ ಕೊಡೋ ಗಿಫ್ಟ್ ಹ್ಯಾಂಪರ್ನಲ್ಲಿ ಏನೂ ಇರಲ್ಲ. ನಮ್ಮಿಂದ ಅವರಿಗೆ ಟಿಆರ್ಪಿ ಸಿಗುತ್ತದೆ’ ಎಂದು ಕರಣ್ ವಿರುದ್ಧ ರಣಬೀರ್ ಕಪೂರ್ ಅವರು ಅಸಮಾಧಾನ ಹೊರ ಹಾಕಿದ್ದರು.
View this post on Instagram
ಸಿನಿಮಾ ಗೆಲುವು
ರಣಬೀರ್ ಕಪೂರ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಗುತ್ತಿದೆ. ‘ಬ್ರಹ್ಮಾಸ್ತ್ರ’ ಸಿನಿಮಾ ದೊಡ್ಡ ಗೆಲುವು ಕಂಡಿತು. ಆ ಬಳಿಕ ‘ತೂ ಜೂಟಿ ಮೇ ಮಕ್ಕರ್’ ಸಿನಿಮಾದಿಂದ ಅವರು ಮತ್ತೆ ಗೆದ್ದರು. ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ‘ಅನಿಮಲ್’ ಸಿನಿಮಾದಿಂದ ಡೊಡ್ಡ ಗೆಲುವು ಅವರದ್ದಾಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ