AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ಸಾಲಿ ಹೊಸ ಚಿತ್ರಕ್ಕೆ ರಣಬೀರ್ ಕಪೂರ್ ಹೀರೋ; ಶೂಟಿಂಗ್​ಗೂ ಮೊದಲೇ ಷರತ್ತುಗಳ ಪಟ್ಟಿ ಇಟ್ಟ ನಟ

ಬನ್ಸಾಲಿ ಅವರು ರಣಬೀರ್ ಕಪೂರ್​ಗೆ ಈ ಮೊದಲು ‘ಬೈಜು ಬವ್ರಾ’ ಸಿನಿಮಾ ಆಫರ್​ನ ನೀಡಿದ್ದರು. ಆದರೆ, ಈ ಕಥೆ ಅವರಿಗೆ ಎಗ್ಸೈಟಿಂಗ್ ಅನಿಸಲಿಲ್ಲ. ಆ ಬಳಿಕ ‘ಲವ್ ಆ್ಯಂಡ್ ವಾರ್’ ಚಿತ್ರದ ಆಫರ್ ನೀಡಲಾಯಿತು. ಈ ಸಿನಿಮಾನ ರಣಬೀರ್ ಒಪ್ಪಿದ್ದಾರೆ.

ಬನ್ಸಾಲಿ ಹೊಸ ಚಿತ್ರಕ್ಕೆ ರಣಬೀರ್ ಕಪೂರ್ ಹೀರೋ; ಶೂಟಿಂಗ್​ಗೂ ಮೊದಲೇ ಷರತ್ತುಗಳ ಪಟ್ಟಿ ಇಟ್ಟ ನಟ
ರಣಬೀರ್-ಬನ್ಸಾಲಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 31, 2024 | 7:58 AM

Share

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಕೆಲಸ ಮಾಡೋ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಈ ರೀತಿ ಅವಕಾಶ ಸಿಕ್ಕಾಗ ಹೀರೋಗಳು ಮುಂದೆ ಬಂದು ಖುಷಿಖುಷಿಯಿಂದ ಸಿನಿಮಾ ಮಾಡುತ್ತಾರೆ. ಈಗ ಸಂಜಯ್ ಲೀಲಾ ಬನ್ಸಾಲಿ ಹಾಗೂ ರಣಬೀರ್ ಕಪೂರ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಲವ್ ಆ್ಯಂಡ್ ವಾರ್’ (Love & War) ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಶೂಟಿಂಗ್ ಆರಂಭಕ್ಕೂ ಮೊದಲೇ ರಣಬೀರ್ ಕಪೂರ್ ಅವರು ಒಂದಷ್ಟು ಷರತ್ತುಗಳನ್ನು ಹಾಕಿದ್ದಾರೆ. ಈ ಷರತ್ತನ್ನು ಪೂರೈಸಲು ಬನ್ಸಾಲಿ ಸಮ್ಮತಿ ಕೊಟ್ಟಿದ್ದಾರೆ.

ಬನ್ಸಾಲಿ ಹಾಗೂ ರಣಬೀರ್ ಕಪೂರ್ ಈ ಮೊದಲು ‘ಸಾವರಿಯಾ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 2007ರಲ್ಲಿ. ಇದಾದ ಹಲವು ವರ್ಷಗಳ ಬಳಿಕ ಇಬ್ಬರೂ ಮತ್ತೆ ಒಂದಾಗಿದ್ದಾರೆ. ‘ಸಾವರಿಯಾ’ ಮಾಡುವಾಗ ರಣಬೀರ್ ಕಪೂರ್ ಇನ್ನೂ ಯಂಗ್ ಆಗಿದ್ದರು. ಈಗ ಅವರು ಸೂಪರ್​ಸ್ಟಾರ್. ಇತ್ತೀಚೆಗೆ ರಿಲೀಸ್ ಆದ ‘ಅನಿಮಲ್’ ಸಿನಿಮಾದಿಂದ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಹೀಗಾಗಿ ಬನ್ಸಾಲಿಗೆ ಕಂಡೀಷನ್ ಹಾಕಿದ್ದಾರೆ. ‘ಸಾವರಿಯಾ’ ಸಂದರ್ಭದಲ್ಲಿ ಆದ ಕೆಲವು ತಪ್ಪುಗಳು ಈಗ ಆಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.

ರಣಬೀರ್ ಕಪೂರ್ ಅವರಿಗೆ ಈ ಮೊದಲು ‘ಬೈಜು ಬವ್ರಾ’ ಸಿನಿಮಾ ಆಫರ್​ನ ನೀಡಿದ್ದರು ಬನ್ಸಾಲಿ. ಆದರೆ, ಈ ಕಥೆ ಅವರಿಗೆ ಎಗ್ಸೈಟಿಂಗ್ ಅನಿಸಲಿಲ್ಲ. ಆ ಬಳಿಕ ‘ಲವ್ ಆ್ಯಂಡ್ ವಾರ್’ ಚಿತ್ರದ ಆಫರ್ ನೀಡಲಾಯಿತು. ಈ ಚಿತ್ರವನ್ನು ರಣಬೀರ್ ಒಪ್ಪಿದ್ದಾರೆ. ಈ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ಕೂಡ ನಟಿಸಲಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಶೂಟಿಂಗ್ ಆರಂಭಿಸಿದರೆ ಅದು ಪೂರ್ಣಗೊಳ್ಳೋಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಅವರು ಅಂದುಕೊಂಡ ದಿನಾಂಕದಂದು ಶೂಟಿಂಗ್ ಪೂರ್ಣಗೊಳಿಸಲ್ಲ. ಆದರೆ, ಈ ಬಾರಿ ಹಾಗಾಗಬಾರದು ಅನ್ನೋದು ರಣಬೀರ್ ಕಪೂರ್ ಷರತ್ತು. ಅವರು 270 ದಿನಗಳ ಕಾಲ್​ಶೀಟ್ ನೀಡಿದ್ದಾರೆ. ಈ ವರ್ಷ ನವೆಂಬರ್​ನಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಿ, 2025ರ ಜುಲೈ​ನಲ್ಲಿ ಸಿನಿಮಾ ಪೂರ್ಣಗೊಳಿಸುವ ಸೂಚನೆ ನೀಡಿದ್ದಾರೆ. 2025ರ ಆಗಸ್ಟ್ ತಿಂಗಳಲ್ಲಿ ಬೇರೆ ಕಮಿಟ್​ಮೆಂಟ್ ಆರಂಭಿಸಲಿದ್ದಾರೆ.

ಇನ್ನು, ಶೂಟಿಂಗ್ ಸಮಯವನ್ನು ಸರಿಯಾಗಿ ಫಿಕ್ಸ್ ಮಾಡಲು ರಣಬೀರ್ ಕಪೂರ್ ಸೂಚಿಸಿದ್ದಾರೆ. ‘ಸಾವರಿಯಾ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅವರು ಹೆಚ್ಚುವರಿಯಾಗಿ ಕೆಲಸ ಮಾಡಬೇಕಿತ್ತು. ಆದರೆ, ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಲು ಅವರು ಮುಂದಾಗಿದ್ದಾರೆ. ಇನ್ನು, ಸೆಟ್​ನಲ್ಲಿ ಶಿಸ್ತು ಇರುವಂತೆ ಅವರು ಸೂಚಿಸಿದ್ದಾರೆ. ಇದೆಲ್ಲಾ ಷರತ್ತಿಗೆ ಸಂಜಯ್ ಲೀಲಾ ಬನ್ಸಾಲಿ ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: 2024ನೇ ಸಾಲಿನ ಫಿಲ್ಮ್​ಫೇರ್ ಅವಾರ್ಡ್: ರಣಬೀರ್ ಅತ್ಯುತ್ತಮ ನಟ, ಆಲಿಯಾ ಅತ್ಯುತ್ತಮ ನಟಿ

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಈ ಜೋಡಿ ಮತ್ತೆ ಹೊಸ ಚಿತ್ರಕ್ಕಾಗಿ ಒಂದಾಗಿದೆ. ಇವರಿಬ್ಬರನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಲವ್ ಆ್ಯಂಡ್ ವಾರ್’ ಸಿನಿಮಾ ನವೆಂಬರ್​ನಲ್ಲಿ ಆರಂಭ ಆಗಲಿದೆ. 2025ರ ಕೊನೆಯಲ್ಲಿ ಈ ಚಿತ್ರ ರಿಲೀಸ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?