AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Filmfare Awards 2024 Winners List: 2024ನೇ ಸಾಲಿನ ಫಿಲ್ಮ್​ಫೇರ್ ಅವಾರ್ಡ್: ರಣಬೀರ್ ಅತ್ಯುತ್ತಮ ನಟ, ಆಲಿಯಾ ಅತ್ಯುತ್ತಮ ನಟಿ

ಗುಜರಾತ್​ನಲ್ಲಿ ಫಿಲ್ಮ್​ಫೇರ್ ಅವಾರ್ಡ್ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿ ನೆರವೇರಿದೆ. ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘ಜವಾನ್’, ‘ಪಠಾಣ್’ ಹಾಗೂ ‘ಡಂಕಿ’ ಸಿನಿಮಾಗಳು ಹಲವು ವಿಭಾಗಗಳಲ್ಲಿ ಆಯ್ಕೆ ಆಗಿದ್ದವು.

Filmfare Awards 2024 Winners List: 2024ನೇ ಸಾಲಿನ ಫಿಲ್ಮ್​ಫೇರ್ ಅವಾರ್ಡ್: ರಣಬೀರ್ ಅತ್ಯುತ್ತಮ ನಟ, ಆಲಿಯಾ ಅತ್ಯುತ್ತಮ ನಟಿ
ರಾಜೇಶ್ ದುಗ್ಗುಮನೆ
| Edited By: |

Updated on:Jan 29, 2024 | 9:56 AM

Share

2024ನೇ ಸಾಲಿನ ಫಿಲ್ಮ್​ಫೇರ್​ ಅವಾರ್ಡ್​ ಕಾರ್ಯಕ್ರಮ ಜನವರಿ 28ರಂದು ಗುಜರಾತ್​ನ ಗಾಂಧಿನಗರದಲ್ಲಿ ನಡೆದಿದೆ. ಇದು 69ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಿದ್ದು, ಕರಣ್ ಜೋಹರ್ (Karan Johar) ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಕರೀನಾ ಕಪೂರ್, ಕರಿಷ್ಮಾ ಕಪೂರ್, ವರುಣ್ ಧವನ್, ಕಾರ್ತಿಕ್ ಆರ್ಯನ್ ಸೇರಿ ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘12th ಫೇಲ್’ ಸಿನಿಮಾ ಹಲವು ಅವಾರ್ಡ್​ಗಳ ಬಾಚಿಕೊಂಡಿದೆ. ಆ ಬಗ್ಗೆ ಇಲ್ಲಿದೆ ವಿವರ.

ಫಿಲ್ಮ್​ಫೇರ್ ಅವಾರ್ಡ್ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿ ನೆರವೇರಿತು. ಹಲವು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘ಜವಾನ್’, ‘ಪಠಾಣ್’ ಹಾಗೂ ಡಂಕಿ ಸಿನಿಮಾಗಳು ಹಲವು ವಿಭಾಗಗಳಲ್ಲಿ ಆಯ್ಕೆ ಆಗಿತ್ತು. ಆದರೆ, ಗೆಲುವು ಸಿಕ್ಕಿದ್ದು ಕಡಿಮೆ. ‘ಅನಿಮಲ್’ ಸಿನಿಮಾ ಬರೋಬ್ಬರಿ 19 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಯಾವ ಸಿನಿಮಾ ಯಾವ ವಿಭಾಗದಲ್ಲಿ ಗೆದ್ದಿದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಇದನ್ನೂ ಓದಿ: ಗುಜರಾತ್​ನಲ್ಲಿ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ; ರಂಗೇರಿತು ಮೊದಲ ದಿನ

ಅತ್ಯುತ್ತಮ ಸಿನಿಮಾ (ಪಾಪ್ಯುಲರ್):‘12th ಫೇಲ್’

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್): ಜೋರಮ್

ಅತ್ಯುತ್ತಮ ನಿರ್ದೇಶಕ: ವಿಧು ವಿನೋದ್ ಚೋಪ್ರಾ (12th ಫೇಲ್)

ಅತ್ಯುತ್ತಮ ನಟ: ರಣಬೀರ್ ಕಪೂರ್ (ಅನಿಮಲ್)

ಅತ್ಯುತ್ತಮ ನಟ (ಕ್ರಿಟಿಕ್ಸ್): ವಿಕ್ರಾಂತ್ ಮಾಸ್ಸಿ (12th ಫೇಲ್)

ಅತ್ಯುತ್ತಮ ನಟಿ: ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ನಟಿ (ಕ್ರಿಟಿಕ್ಸ್): ರಾಣಿ ಮುಖರ್ಜಿ (ಮಿಸಸ್ ಚಟರ್ಜಿ Vs ನಾರ್​ವೇ)

ಅತ್ಯುತ್ತಮ ಪೋಷಕ ನಟ: ವಿಕ್ಕಿ ಕೌಶಲ್ (ಡಂಕಿ)

ಅತ್ಯುತ್ತಮ ಪೋಷಕ ನಟಿ: ಶಬಾನ್ ಆಜ್ಮಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಸಾಹಿತ್ಯ: ಅಮಿತಾಭ್ ಭಟ್ಟಾಚಾರ್ಯ (ತೆರೆ ವಾಸ್ತೆ-ಜರ ಹಟ್ಕೆ ಜರ ಬಚ್ಕೆ)

ಅತ್ಯತ್ತಮ ಕಥೆ: ಅಮಿತ್ ರೈ (ಒಎಂಜಿ 2)

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:13 am, Mon, 29 January 24