‘ಸಿಂಗಂ ಅಗೇನ್’ ಚಿತ್ರದಲ್ಲಿ ಪೊಲೀಸ್ ಆದ್ರಾ ರಣಬೀರ್ ಕಪೂರ್? ಫೋಟೋ ವೈರಲ್
Ranbir Kapoor: ರಣಬೀರ್ ಕಪೂರ್ ಅವರು ಪೊಲೀಸ್ ಡ್ರೆಸ್ ಹಾಕಿ ಸೆಟ್ನಲ್ಲಿ ಕುಳಿತ ಫೋಟೋ ವೈರಲ್ ಆಗಿದೆ. ಇದರಿಂದ ಸಾಕಷ್ಟು ಕುತೂಹಲ ಮೂಡಿದೆ. ರಣಬೀರ್ ಪಾತ್ರ ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
Updated on:Jan 04, 2024 | 10:28 AM

ನಿರ್ದೇಶಕ ರೋಹಿತ್ ಶೆಟ್ಟಿ ಅವರು ‘ಸಿಂಗಂ ಅಗೇನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇದೆ. ಈಗ ರಣಬೀರ್ ಕಪೂರ್ ಕೂಡ ಇದಕ್ಕೆ ಸೇರ್ಪಡೆ ಆದರೇ ಎನ್ನುವ ಪ್ರಶ್ನೆ ಮೂಡಿದೆ.

ರಣಬೀರ್ ಕಪೂರ್ ಅವರು ಪೊಲೀಸ್ ಡ್ರೆಸ್ ಹಾಕಿ ಸೆಟ್ನಲ್ಲಿ ಕುಳಿತ ಫೋಟೋ ವೈರಲ್ ಆಗಿದೆ. ಇದರಿಂದ ಸಾಕಷ್ಟು ಕುತೂಹಲ ಮೂಡಿದೆ. ರಣಬೀರ್ ಪಾತ್ರ ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ರಣಬೀರ್ ಕಪೂರ್ ಅವರು ಚಾಕೊಲೇಟ್ ಬಾಯ್ ರೀತಿಯ ಪಾತ್ರ ಮಾಡಿದ್ದೇ ಹೆಚ್ಚು. ಇತ್ತೀಚೆಗೆ ಅವರು ಪಾತ್ರದ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಈಗ ಅವರು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚೋಕೆ ರೆಡಿ ಆಗಿದ್ದಾರೆ.

‘ಸಿಗಂ ಅಗೇನ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅಜಯ್ ದೇವಗನ್, ರಣವೀರ್ ಸಿಂಗ್ ಮೊದಲಾದವರು ನಟಿಸಿದ್ದಾರೆ. ಈಗ ಇದಕ್ಕೆ ರಣಬೀರ್ ಕಪೂರ್ ಕೂಡ ಸೇರ್ಪಡೆ ಆಗಿರೋದು ವಿಶೇಷ.

ಅಂದಹಾಗೆ, ರೋಹಿತ್ ಶೆಟ್ಟಿ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಅವರು ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವರ್ಷವೇ ಸಿನಿಮಾ ರಿಲೀಸ್ ಆಗಲಿದೆ.

ರಣಬೀರ್ ಕಪೂರ್ ಅವರು ‘ಅನಿಮಲ್’ ಚಿತ್ರದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾದಿಂದ ಅವರು ಗೆದ್ದು ಬೀಗಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
Published On - 10:28 am, Thu, 4 January 24




