Aaron Finch: ಕ್ರಿಕೆಟ್​ ಬದುಕಿಗೆ ಆರೋನ್ ಫಿಂಚ್ ಗುಡ್ ಬೈ..!

Aaron Finch: ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ಹೊಂದಿದ್ದಾರೆ. ಹಾಗೆಯೇ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ದಾಖಲೆ ಕೂಡ ಆರೋನ್ ಫಿಂಚ್ ಹೆಸರಿನಲ್ಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jan 04, 2024 | 2:24 PM

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್ (Aaron Finch)  ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳುವುದಾಗಿ ಫಿಂಚ್ ತಿಳಿಸಿದ್ದಾರೆ.

1 / 6
ಆರೋನ್ ಫಿಂಚ್ 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದಾಗ್ಯೂ ಅವರು ವಿಶ್ವದ ಪ್ರಮುಖ ಲೀಗ್​ಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ 37 ವರ್ಷದ ಫಿಂಚ್ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

2 / 6
ಪ್ರಸ್ತುತ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಾಯಕರಾಗಿರುವ ಆರೋನ್ ಫಿಂಚ್, ಬಿಬಿಎಲ್​ ಮೂಲಕವೇ ವೃತ್ತಿ ಬದುಕಿಗೆ ವಿದಾಯ ಹೇಳಲು ಮುಂದಾಗಿದ್ದಾರೆ.

3 / 6
ವಿಶೇಷ ಎಂದರೆ ಆರೋನ್ ಫಿಂಚ್ ಬಿಬಿಎಲ್​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ ಮಾತ್ರ ಆಡಿದ್ದಾರೆ. ಒಟ್ಟು ರೆನೆಗೇಡ್ಸ್ ಪರ  106 ಪಂದ್ಯಗಳನ್ನಾಡಿರುವ ಫಿಂಚ್ 2 ಭರ್ಜರಿ ಶತಕ ಹಾಗೂ 26 ಅರ್ಧಶತಕಗಳೊಂದಿಗೆ ಒಟ್ಟು 3311 ರನ್ ಕಲೆಹಾಕಿದ್ದಾರೆ.

4 / 6
ಅಲ್ಲದೆ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ಹೊಂದಿದ್ದಾರೆ. ಹಾಗೆಯೇ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ದಾಖಲೆ ಕೂಡ ಆರೋನ್ ಫಿಂಚ್ ಹೆಸರಿನಲ್ಲಿದೆ.

5 / 6
ಇನ್ನು  2018/19 ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಆರೋನ್ ಫಿಂಚ್ ನಾಯಕತ್ವದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ತಮ್ಮ ನೆಚ್ಚಿನ ತಂಡದ ಪರ ಕೊನೆಯ ಪಂದ್ಯವಾಡುವ ಮೂಲಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲು ಆರೋನ್ ಫಿಂಚ್ ನಿರ್ಧರಿಸಿದ್ದಾರೆ.

6 / 6
Follow us