Samantha: ಶೀಘ್ರವೇ ರಿಲೀಸ್ ಆಗಲಿದೆ ‘ಸಿಟಾಡೆಲ್’; ಸೂಚನೆ ಕೊಟ್ಟ ನಟಿ ಸಮಂತಾ

‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಸಮಂತಾ ಜೊತೆ ರಾಜ್ ಮತ್ತು ಡಿಕೆ ಕೆಲಸ ಮಾಡಿದ್ದರು. ಸಮಂತಾ ನಟನೆ ನಿರ್ದೇಶಕರಿಗೆ ಇಷ್ಟ ಆಗಿತ್ತು. ಹೀಗಾಗಿ ಇಂಗ್ಲಿಷ್​ ‘ಸಿಟಾಡೆಲ್​’ನ ಭಾರತದ ವರ್ಷನ್​ಗೆ ಸಮಂತಾ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

Samantha: ಶೀಘ್ರವೇ ರಿಲೀಸ್ ಆಗಲಿದೆ ‘ಸಿಟಾಡೆಲ್’; ಸೂಚನೆ ಕೊಟ್ಟ ನಟಿ ಸಮಂತಾ
ಸಿಟಾಡೆಲ್ ತಂಡದ ಜೊತೆ ಸಮಂತಾ
Follow us
ರಾಜೇಶ್ ದುಗ್ಗುಮನೆ
|

Updated on: Jan 31, 2024 | 6:59 AM

ಸಮಂತಾ ರುತ್ ಪ್ರಭು ಹಾಗೂ ವರುಣ್ ಧವನ್ (Varun Dhawan) ನಟನೆಯ ‘ಸಿಟಾಡೆಲ್’ ಸೀರಿಸ್ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಈ ಸೀರಿಸ್​ಗೆ ರಾಜ್​ ಮತ್ತು ಡಿಕೆ ನಿರ್ದೇಶನ ಇದೆ. ಈ ಸರಣಿ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇದಕ್ಕೆ ತಂಡದ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಈಗ ಸೀರಿಸ್ ಬಗ್ಗೆ ಒಂದು ಮಾಹಿತಿ ನೀಡಿದ್ದಾರೆ ಸಮಂತಾ. ಈ ಸರಣಿಯ ಮೊದಲ ಕಾಪಿ ಸಿದ್ಧವಾಗಿದೆ. ಈ ಫೋಟೋನ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ನಿರ್ದೇಶಕರಾದ ರಾಜ್ ಮತ್ತು ಡಿಕೆ ಹಲವು ಸೂಪರ್​​ಹಿಟ್ ಸೀರಿಸ್​​ಗಳನ್ನು ನೀಡಿದ್ದಾರೆ. ಈ ಮೊದಲು ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಸಮಂತಾ ಜೊತೆ ಇವರು ಕೆಲಸ ಮಾಡಿದ್ದರು. ಸಮಂತಾ ನಟನೆ ನಿರ್ದೇಶಕರಿಗೆ ಇಷ್ಟ ಆಗಿತ್ತು. ಈ ಕಾರಣದಿಂದ ಇಂಗ್ಲಿಷ್​ ‘ಸಿಟಾಡೆಲ್​’ನ ಭಾರತದ ವರ್ಷನ್​ಗೆ ಸಮಂತಾ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ‘ಅಂತಿಮವಾಗಿ ನಮಗೆ ಏನನ್ನೋ ನೋಡಲು ಸಿಕ್ಕಿತು ಮತ್ತು ಅದು ಇಷ್ಟ ಆಯಿತು’ ಎಂದು ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಇತ್ತೀಚೆಗೆ ಸಮಂತಾ ಅವರು ‘ಸಿಟಾಡೆಲ್’ ಸೀರಿಸ್​ನ ಡಬ್ಬಿಂಗ್ ಪೂರ್ಣಗೊಳಿಸಿದ್ದರು. ಈಗ ಮೊದಲ ಕಾಪಿ ರೆಡಿ ಆಗಿದೆ. ಇದರ ರಿಲೀಸ್ ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇಂಗ್ಲಿಷ್​ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ‘ಸಿಟಾಡೆಲ್​’ ಸೀರಿಸ್​​ನಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಇದನ್ನು ಭಾರತಕ್ಕೆ ತರುವಲ್ಲಿ ರಾಜ್ ಮತ್ತು ಡಿಕೆ ಮುಂದಾಗಿದ್ದಾರೆ. ಇದನ್ನು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಮಾಡಲಾಗುತ್ತಿದೆ. ಸದ್ಯ ಪ್ರಿಯಾಂಕಾ ಚೋಪ್ರಾ ಅವರು ಇದರ ಎರಡನೇ ಭಾಗದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಭಾರತದ ವರ್ಷನ್​ಗೂ ಎರಡನೇ ಭಾಗ ಬರುತ್ತದೆಯೇ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ಸಮಂತಾಗೂ ಇಷ್ಟವಾಯ್ತು ‘ಹನುಮಾನ್​’ ಸಿನಿಮಾ; ಮನಸಾರೆ ಹೊಗಳಿದ ನಟಿ

ಸಮಂತಾ ಅವರು ಅನಾರೋಗ್ಯ ಕಾರಣದಿಂದ ಸಿನಿಮಾ ಕೆಲಸಗಳಿಂದ ದೂರವೇ ಇದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ‘ಖುಷಿ’ ಸಿನಿಮಾ ಬಳಿಕ ಅವರು ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ ಅನ್ನೋದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ