‘ಶೈತಾನ್’ ಗೆದ್ದ ಬಳಿಕ ಅಜಯ್ ದೇವಗನ್ಗೆ ಬಂತಾ ಓವರ್ ಕಾನ್ಫಿಡೆನ್ಸ್?
ರಿಯಲ್ ಲೈಫ್ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘ಮೈದಾನ್’ ಸಿನಿಮಾ ನಿರ್ಮಾಣ ಆಗಿದೆ. ಬಾಲಿವುಡ್ನ ಈ ಸಿನಿಮಾದಲ್ಲಿ ಫುಟ್ಬಾಲ್ ಕೋಚ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. ಈ ಸಿನಿಮಾಗೆ ‘ಬದಾಯಿ ಹೋ’ ಖ್ಯಾತಿಯ ಅಮಿತ್ ಶರ್ಮಾ ನಿರ್ದೇಶನ ಮಾಡಿದ್ದಾರೆ. ಅಜಯ್ ದೇವಗನ್ ಜತೆ ಪ್ರಿಯಾಮಣಿ, ಗಜರಾಜ್ ರಾವ್, ರುದ್ರನೀಲ್ ಘೋಶ್ ಮುಂತಾದವರು ಅಭಿನಯಿಸಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ಅವರು 2024ರ ಆರಂಭದಲ್ಲೇ ಗೆಲುವು ಕಂಡಿದ್ದಾರೆ. ಅವರು ನಟಿಸಿದ ‘ಶೈತಾನ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ಜ್ಯೋತಿಕಾ, ಮಾಧವನ್, ಜಾನಕಿ ಬೋಡಿವಾಲಾ ಮುಂತಾದವರು ಅಭಿನಯಿಸಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಶೈತಾನ್’ (Shaitaan) ಸಿನಿಮಾಗೆ 142 ಕೋಟಿ ರೂಪಾಯಿ ಕಮಾಯಿ ಆಗಿದೆ. ಈ ಚಿತ್ರದ ಗೆಲುವಿನ ಬಳಿಕ ಅಜಯ್ ದೇವಗನ್ ಅವರಿಗೆ ಓವರ್ ಕಾನ್ಫಿಡೆನ್ಸ್ ಬಂದಿದೆಯಾ ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆ ಹುಟ್ಟಲು ಕಾರಣ ಆಗಿರುವುದು ‘ಮೈದಾನ್’ (Maidaan) ಸಿನಿಮಾದ ಅವಧಿ.
ಅಜಯ್ ದೇವಗನ್ ನಟನೆಯ ‘ಮೈದಾನ್’ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆ ಆಗಲಿದೆ. ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಆ ಬಳಿಕ ಗೊತ್ತಾದ ವಿಷಯ ಏನೆಂದರೆ, ‘ಮೈದಾನ್’ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 1 ನಿಮಿಷ ಇದೆ. ಇಷ್ಟು ದೀರ್ಘ ಅವಧಿಯ ಸಿನಿಮಾವನ್ನು ಪ್ರೇಕ್ಷಕರು ತಾಳ್ಮೆಯಿಂದ ನೋಡುತ್ತಾರಾ ಎಂಬ ಪ್ರಶ್ನೆ ಮೂಡುವುದು ಸಹಜ. ಅಜಯ್ ದೇವಗನ್ ಅವರಿಗೆ ‘ಶೈತಾನ್’ ಗೆಲುವಿನ ನಂತರ ಅತಿಯಾದ ಕಾನ್ಫಿಡೆನ್ಸ್ ಬಂದಿದ್ದರಿಂದಲೇ ಅವರು 3 ಗಂಟೆ 1 ನಿಮಿಷ ಅವಧಿಯ ಸಿನಿಮಾವನ್ನು ಜನರ ಎದುರು ತರುತ್ತಿದ್ದಾರೆ ಎಂದು ಸಿನಿಪ್ರಿಯರು ಮಾತಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ‘ಶೈತಾನ್’ ಚಿತ್ರಕ್ಕೆ ಸೀಕ್ವೆಲ್ ಮಾಡಲು ಮುಂದಾದ ಅಜಯ್ ದೇವಗನ್
ರಿಯಲ್ ಲೈಫ್ ಘಟನೆಗಳನ್ನು ಆಧರಿಸಿ ‘ಮೈದಾನ್’ ಸಿನಿಮಾ ಮೂಡಿಬಂದಿದೆ. ಈ ಸಿನಿಮಾದಲ್ಲಿ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಪಾತ್ರಕ್ಕೆ ಅಜಯ್ ದೇವಗನ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ‘ಬದಾಯಿ ಹೋ’ ಖ್ಯಾತಿಯ ಅಮಿತ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಅಜಯ್ ದೇವಗನ್ ಜೊತೆ ಪ್ರಿಯಾಮಣಿ, ಗಜರಾಜ್ ರಾವ್, ರುದ್ರನೀಲ್ ಘೋಶ್ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
#Xclusiv… ‘MAIDAAN’ RUN TIME… #Maidaan certified ‘UA’ by #CBFC on 3 April 2024. Duration: 181.30 min:sec [3 hours, 01 min, 30 sec]. #India
⭐ Theatrical release date: [Wed] 10 April 2024.#AjayDevgn #PriyaMani #GajrajRao pic.twitter.com/YA8PNHQBqd
— taran adarsh (@taran_adarsh) April 4, 2024
ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ‘ಮೈದಾನ್’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಯಾಕೆಂದರೆ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಎದುರು ‘ಮೈದಾನ್’ ಸಿನಿಮಾ ಕ್ಲಾಶ್ ಆಗುತ್ತಿದೆ. ಈ ಎರಡೂ ಚಿತ್ರಗಳು ಏಪ್ರಿಲ್ 10ರಂದು ಬಿಡುಗಡೆ ಆಗಲಿವೆ. ಎರಡೂ ಸಿನಿಮಾಗಳು ಡಿಫರೆಂಟ್ ಕಥಾಹಂದರ ಹೊಂದಿವೆ. ಈದ್ ಪ್ರಯುಕ್ತ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಏರ್ಪಡಲಿದೆ. ಯಾವ ಚಿತ್ರಕ್ಕೆ ಪ್ರೇಕ್ಷಕರು ಹೆಚ್ಚು ಮಾರ್ಕ್ಸ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.