AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರಂಭದಲ್ಲೇ ಎಡವಿದ ‘ರಾಮಾಯಣ’ ಚಿತ್ರತಂಡ; ಚಿತ್ರೀಕರಣದ ಫೋಟೋಗಳು ಲೀಕ್​

ಈ ರೀತಿಯ ಹೈ ಬಜೆಟ್​ ಸಿನಿಮಾಗಳನ್ನು ಮಾಡುವಾಗ ಚಿತ್ರತಂಡದವರು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ರಾಮಾಯಣ ಸಿನಿಮಾ ತಂಡದವರು ಪ್ರಾರಂಭದಲ್ಲೇ ಎಡವಿದಂತಿದೆ. ಕೈಕೇಯಿ ಪಾತ್ರ ಮಾಡುತ್ತಿರು ಲಾರಾ ದತ್ತ ಅವರ ಫೋಟೋಗಳು ಚಿತ್ರೀಕರಣದ ಸೆಟ್​ನಿಂದ ಲೀಕ್ ಆಗಿವೆ. ‘ಶೂಟಿಂಗ್​ ಜಾಗದಲ್ಲಿ ಮೊಬೈಲ್​ ಫೋನ್​ ನಿಷೇಧಿಸಿ’ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

ಆರಂಭದಲ್ಲೇ ಎಡವಿದ ‘ರಾಮಾಯಣ’ ಚಿತ್ರತಂಡ; ಚಿತ್ರೀಕರಣದ ಫೋಟೋಗಳು ಲೀಕ್​
‘ರಾಮಾಯಣ’ ಚಿತ್ರೀಕರಣದ ಫೋಟೋಗಳು ಲೀಕ್​
ಮದನ್​ ಕುಮಾರ್​
|

Updated on: Apr 05, 2024 | 4:28 PM

Share

ಬಾಲಿವುಡ್​ ನಟ ರಣಬೀರ್​ ಕಪೂರ್​ (Ranbir Kapoor) ಅವರು ರಾಮನಾಗಿ ನಟಿಸಲಿರುವ ರಾಮಾಯಣ’ ಸಿನಿಮಾ (Ramayana Movie) ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಅಷ್ಟರಲ್ಲಾಗಲೇ ಶೂಟಿಂಗ್​ ಆರಂಭ ಆಗಿದೆ. ಈ ಸಿನಿಮಾಗೆ ನಿತೇಶ್​ ತಿವಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರ ಶೂಟಿಂಗ್​ ಶುರುವಾಗಿದೆ. ಅದರಲ್ಲಿ ಕೆಲವು ಕಲಾವಿದರು ಭಾಗಿ ಆಗಿದ್ದಾರೆ. ಬೇಸರದ ವಿಷಯ ಏನೆಂದರೆ, ಚಿತ್ರೀಕರಣದ ಸೆಟ್​ನಿಂದ ಕೆಲವು ಫೋಟೋಗಳು ವೈರಲ್​ ಆಗಿವೆ. ನಟಿ ಲಾರಾ ದತ್ತ (Lara Dutta), ನಟ ಅರುಣ್​ ಗೋವಿಲ್​ ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಇಂಥ ಹೈ ಬಜೆಟ್​ ಸಿನಿಮಾಗಳನ್ನು ಮಾಡುವಾಗ ಚಿತ್ರತಂಡದವರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ರಾಮಾಯಣ ಸಿನಿಮಾ ತಂಡದವರು ಆರಂಭದಲ್ಲೇ ಎಡವಿದಂತಿದೆ. ಕೈಕೇಯಿ ಪಾತ್ರ ಮಾಡುತ್ತಿರು ಲಾರಾ ದತ್ತ ಅವರ ಫೋಟೋಗಳು ಶೂಟಿಂಗ್​ ಸೆಟ್​ನಿಂದ ಲೀಕ್ ಆಗಿವೆ. ಈ ಫೋಟೋಗಳನ್ನು ‘ಜೂಮ್​’ ವಾಹಿನಿ ಪ್ರಕಟಿಸಿದೆ.

ನಟ ಅರುಣ್​ ಗೋವಿಲ್​ ಅವರು ರಾಮಾಯಣ ಆಧಾರಿತ ಸಿನಿಮಾದಲ್ಲಿ ದಶರಥನ ಪಾತ್ರ ಮಾಡಲಿದ್ದಾರೆ. ರಮಾನಂದ್ ಸಾಗರ್​ ನಿರ್ದೇಶನ ಮಾಡಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್​ ಗೋವಿಲ್​ ಅವರು ರಾಮನ ಪಾತ್ರ ಮಾಡಿ ಫೇಮಸ್​ ಆಗಿದ್ದರು. ಈಗ ಅವರಿಗೆ ಸಿನಿಮಾದಲ್ಲಿ ದಶರಥನ ಪಾತ್ರ ನೀಡಲಾಗಿದೆ. ಶೂಟಿಂಗ್​ ಸೆಟ್​ನಲ್ಲಿ ಅವರು ಬಾಲ ಕಲಾವಿದರ ಜೊತೆ ನಟಿಸುತ್ತಿರುವ ಫೋಟೋಗಳು ಸೋರಿಕೆ ಆಗಿವೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಸೆಟ್ ಫೋಟೋ ಲೀಕ್; ಸಖತ್ ಅದ್ದೂರಿ

ಇನ್ಮುಂದೆ ಚಿತ್ರತಂಡದವರು ಎಚ್ಚರಿಕೆಯಿಂದ ಇರಬೇಕಾಗಿರುವುದು ಅನಿವಾರ್ಯ. ‘ಚಿತ್ರೀಕರಣದ ಸ್ಥಳದಲ್ಲಿ ಮೊಬೈಲ್​ ಫೋನ್​ ನಿಷೇಧ ಮಾಡಿ’ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನಲಾಗಿದೆ. ಯಶ್​ ಅವರು ರಾವಣನ ಪಾತ್ರ ಮಾಡುತ್ತಾರೆ ಎಂದು ಕೂಡ ಸುದ್ದಿ ಹಬ್ಬಿದೆ. ಆದರೆ ಯಾವುದರ ಬಗ್ಗೆಯೂ ಚಿತ್ರತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. 2ನೇ ಪಾರ್ಟ್​ನಲ್ಲಿ ರಾವಣನ ಪಾತ್ರ ಬರಲಿದ್ದು, ಆಗ ಯಶ್​ ಕಾಣಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಇದೆ. ಸದ್ಯಕ್ಕೆ ಬಾಲ ಕಲಾವಿದರ ದೃಶ್ಯಗಳನ್ನು ಚಿತ್ರಿಸಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ