ಈ ವಿಡಿಯೋದಲ್ಲಿ ಕಣ್ಣೀರು ಹಾಕ್ತಿರೋ ಯುವಕ ಈಗ ದೇಶದ ಖ್ಯಾತ ಗಾಯಕ; ಗುರುತು ಹಿಡಿತೀರಾ?

ಹಿಂದಿ ಮಾತ್ರವಲ್ಲದೆ ನಾನಾ ಭಾಷೆಗಳಲ್ಲಿ ಅವರು ಹಾಡು ಹಾಡಿದ್ದಾರೆ. ಅವರಿಗೆ ಈಗ 37 ವರ್ಷ ತುಂಬಿದೆ. ಅವರ ಗಾಯನಕ್ಕೆ ಮರುಳಾಗದವರೇ ಇಲ್ಲ. ಅವರು ದೊಡ್ಡ ಗಾಯಕನಾದರೂ ಯಾವುದೇ ಗರ್ವ ಇಲ್ಲ. ಅಷ್ಟಕ್ಕೂ ವಿಡಿಯೋದಲ್ಲಿ ಇರೋ ವ್ಯಕ್ತಿ ಯಾರು ಎಂದು ಗುರುತಿಸಿ.

ಈ ವಿಡಿಯೋದಲ್ಲಿ ಕಣ್ಣೀರು ಹಾಕ್ತಿರೋ ಯುವಕ ಈಗ ದೇಶದ ಖ್ಯಾತ ಗಾಯಕ; ಗುರುತು ಹಿಡಿತೀರಾ?
ಅರಿಜಿತ್ ಸಿಂಗ್
Follow us
ರಾಜೇಶ್ ದುಗ್ಗುಮನೆ
|

Updated on: Apr 25, 2024 | 8:49 AM

ಈ ವಿಡಿಯೋದಲ್ಲಿರೋ ಯುವಕ ಈಗ ದೇಶದ ಖ್ಯಾತ ಗಾಯಕ. ಹಿಂದಿ ಮಾತ್ರವಲ್ಲದೆ ನಾನಾ ಭಾಷೆಗಳಲ್ಲಿ ಅವರು ಹಾಡು ಹಾಡಿದ್ದಾರೆ. ಅವರಿಗೆ ಈಗ 37 ವರ್ಷ ತುಂಬಿದೆ. ಅವರ ಗಾಯನಕ್ಕೆ ಮರುಳಾಗದವರೇ ಇಲ್ಲ. ಅವರು ದೊಡ್ಡ ಗಾಯಕನಾದರೂ ಯಾವುದೇ ಗರ್ವ ಇಲ್ಲ. ಅಷ್ಟಕ್ಕೂ ವಿಡಿಯೋದಲ್ಲಿ ಇರೋ ವ್ಯಕ್ತಿ ಯಾರು? ಅರಿಜಿತ್ ಸಿಂಗ್ (Arijith Singh). ಇಂದು (ಏಪ್ರಿಲ್ 25) ಅವರ ಜನ್ಮದಿನ. ಅನೇಕರು ಅವರಿಗೆ ವಿಶ್ ತಿಳಿಸುತ್ತಿದ್ದಾರೆ. ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.

ಅರಿಜಿತ್ ಸಿಂಗ್ 2005ರಲ್ಲಿ ಅವರು ಹಿಂದಿಯ ‘ಫೇಮ್​ ಗುರುಕುಲ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅವರಿಗೆ ಆಗ 18 ವರ್ಷ. ಸೋನಿ ಟಿವಿಯಲ್ಲಿ ಈ ರೀತಿಯಾಲಿಟಿ ಶೋ ಪ್ರಸಾರ ಕಂಡಿತ್ತು.  ಅವರು ಗಾಯಕಿ, ನಟಿ ಇಲಾ ಅರುಣ್ ಬಳಿ ಬಂದು ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದರು. ಆದರೆ, ಮಾಡಿದ ತಪ್ಪೇನು ಎಂಬುದನ್ನು ಅವರು ಹೇಳಿಕೊಂಡಿರಲಿಲ್ಲ.  ‘ನೀವು ನಿಮ್ಮ ಕಾಲನ್ನು ಮುಟ್ಟಲು ಕೊಡುತ್ತಿಲ್ಲ, ನನ್ನ ಜೊತೆ ಮಾತನಾಡುತ್ತಿಲ್ಲ. ನೀವು ಹೀಗೆಯೇ ಮಾಡುತ್ತಿದ್ದರೆ ನಾನು ಹಚ್ಚನಾಗುತ್ತೇನೆ. ನಾನು ನಿಮ್ಮನ್ನು ಗೌರವಿಸುತ್ತೇನೆ’ ಎಂದು ಅರಿಜಿತ್ ಸಿಂಗ್ ಅವರು ಹೇಳಿಕೊಂಡಿದ್ದರು.

ಇಲಾ ಅರುಣ್ ಹಾಗೂ ಅರಿಜಿತ್ ಸಿಂಗ್ ಮಧ್ಯೆ ತಾಯಿ-ಮಗನ ಸಂಬಂಧ ಇತ್ತು. ಅರಿಜಿತ್ ಅವರು ಇಲಾನ ತಾಯಿಯಂತೆ ನೋಡುತ್ತಿದ್ದರು. ಅರಿಜಿತ್ ಸ್ಟಾರ್ ಗಾಯಕನಾಗುತ್ತಾನೆ ಎಂದು ಅವರು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ನಿಜವಾಗಿದೆ. ಈ ವಿಡಿಯೋನ ಅವರ ಬರ್ತ್​ಡೇ ಸಂದರ್ಭದಲ್ಲಿ ಮತ್ತೆ ವೈರಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಗುಂಪಿನಲ್ಲಿ ಅರಿಜಿತ್​ ಸಿಂಗ್​​ ಕೈ ಎಳೆದ ಮಹಿಳಾ ಅಭಿಮಾನಿ; ಗಾಯಗೊಂಡ ಗಾಯಕನ ವಿಡಿಯೋ ವೈರಲ್​

ಅರಿಜಿತ್ ಅವರು ‘ಫೇಮ್ ಗುರುಕುಲ’ದ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಅರಿಜಿತ್ ಮೊದಲ ಬಾರಿಗೆ ಹಾಡಿದ್ದು 2011ರ ‘ಮರ್ಡರ್ 2’ ಸಿನಿಮಾದಲ್ಲಿ. ಅವರು ‘ಫಿರ್ ಮೊಹಾಬತ್’ ಹಾಡು ಗಮನ ಸೆಳೆಯಿತು. ನಂತರ ‘ಯಾರಿಯಾ..’, ‘ತುಮ್ ಹಿ ಹೋ’ ಮೊದಲಾದ ಸೂಪರ್ ಹಿಟ್ ಹಾಡುಗಳನ್ನು ಹಾಡಿದರು. ಕನ್ನಡದಲ್ಲಿ ಅವರು ‘ನಿನ್ನಿಂದಲೇ’ ಸಿನಿಮಾದ ‘ಮೌನ ತಾಳಿತೆ..’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾದ ‘ದೇವ ದೇವ..’ ಕನ್ನಡ ವರ್ಷನ್ ಅವರು ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.