AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​

ನಟಿ ಸುಹಾನಾ ಖಾನ್​ ಅವರು ಈವರೆಗೆ ಮಾಡಿರುವುದು ಒಂದು ಸಿನಿಮಾ ಮಾತ್ರ. ಹಾಗಿದ್ದರೂ ಕೂಡ ಅವರು ಪದೇ ಪದೇ ಆಸ್ತಿ ಖರೀದಿ ಮಾಡುತ್ತಿದ್ದಾರೆ. ಕಳೆದ ವರ್ಷ 12.91 ಕೋಟಿ ರೂಪಾಯಿ ನೀಡಿ ಅವರು ಜಮೀನು ಖರೀದಿಸಿದ್ದರು. ಈಗ ಮತ್ತೆ 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಕೊಂಡುಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಿಂದಲೂ ಸುಹಾನಾ ಖಾನ್​ ಹಣ ಗಳಿಸುತ್ತಿದ್ದಾರೆ.

10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​
ಸುಹಾನಾ ಖಾನ್​
Follow us
ಮದನ್​ ಕುಮಾರ್​
|

Updated on:Feb 25, 2024 | 8:40 AM

ಶಾರುಖ್​ ಖಾನ್​ (Shah Rukh Khan) ಪುತ್ರಿ ಸುಹಾನಾ ಖಾನ್​ ಅವರು ನಟಿಯಾಗಿ ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ. ಅವರ ಮೊದಲ ಸಿನಿಮಾ ‘ದಿ ಆರ್ಚೀಸ್​’ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಯಿತು. ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಈ ನಡುವೆ ಸುಹಾನ್​ ಖಾನ್​ (Suhana Khan) ಅವರು ಬೇರೆ ಬೇರೆ ವಿಚಾರಗಳಿಂದ ಸುದ್ದಿ ಆಗುತ್ತಿದ್ದಾರೆ. ಕಳೆದ ವರ್ಷ ಅವರು ಹತ್ತಾರು ಕೋಟಿ ರೂಪಾಯಿ ನೀಡಿ ಆಸ್ತಿ (Suhana Khan Property) ಖರೀದಿ ಮಾಡಿದ್ದರು. ಈಗ ಮತ್ತೆ ಅವರು ಬರೋಬ್ಬರಿ 10 ಕೋಟಿ ರೂಪಾಯಿ ನೀಡಿ ಜಮೀನು ಖರೀದಿಸಿದ್ದಾರೆ. ಅವರ ಬೆಳವಣಿಗೆ ಕಂಡು ಫ್ಯಾನ್ಸ್ ವಾವ್​ ಎನ್ನುತ್ತಿದ್ದಾರೆ.

2023ರ ಜೂನ್​ 1ರಂದು ಸುಹಾನಾ ಖಾನ್​ ಅವರು ಮುಂಬೈ ಸಮೀಪದ ಅಲಿಭಾಗ್​ನಲ್ಲಿ 1.5 ಎಕರೆ ವಿಸ್ತೀರ್ಣದ ಆಸ್ತಿ ಕೊಂಡುಕೊಂಡಿದ್ದರು. ಅದಕ್ಕೆ ಅವರು ಬರೋಬ್ಬರಿ 12.91 ಕೋಟಿ ರೂಪಾಯಿ ನೀಡಿದ್ದರು. 77.46 ಲಕ್ಷ ರೂಪಾಯಿ ಸ್ಟ್ಯಾಂಪ್​ ಡ್ಯೂಟಿ ಭರ್ತಿ ಮಾಡಿದ್ದರು. ಆಗಲೇ ಅಭಿಮಾನಿಗಳು ಹುಬ್ಬೇರಿಸಿದ್ದರು. ಅದಾಗಿ ಕೆಲವೇ ತಿಂಗಳು ಕಳೆಯುವುದರೊಳಗೆ ಸುಹಾನ್​ ಖಾನ್​ ಈಗ ಮತ್ತೆ ಆಸ್ತಿ ಖರೀದಿ ಮಾಡಿ ಸುದ್ದಿ ಆಗಿದ್ದಾರೆ.

ಅಲಿಭಾಗ್​ನಲ್ಲಿ ಆಸ್ತಿ ಹೊಂದುವುದು ಎಂದರೆ ಬಿಟೌನ್​ ಸೆಲೆಬ್ರಿಟಿಗಳಿಗೆ ಪ್ರತಿಷ್ಠೆಯ ವಿಚಾರ. ಈಗಾಗಲೇ ಶಾರುಖ್​ ಖಾನ್​ ಅವರು ಅಲ್ಲಿ ಬಂಗಲೆ ಹೊಂದಿದ್ದಾರೆ. ಅವರ ಪುತ್ರಿ ಸುಹಾನಾ ಖಾನ್ ಈಗ ಖರೀದಿಸಿರುವ ಆಸ್ತಿ 1.8 ಎಕರೆ ಇದೆ. ಫೆಬ್ರವರಿ 12ರಂದು ಈ ವ್ಯವಹಾರ ನಡೆದಿದ್ದು, ಸುಹಾನಾ ಖಾನ್​ ಅವರು 57 ಲಕ್ಷ ರೂಪಾಯಿ ಸ್ಟ್ಯಾಂಪ್​ ಡ್ಯೂಟಿ ಭರ್ತಿ ಮಾಡಿದ್ದಾರೆ. ಕೇವಲ ಒಂದು ಸಿನಿಮಾ ಮಾಡಿ ಇಷ್ಟೆಲ್ಲ ಶ್ರೀಮಂತಿಕೆ ತೋರಿಸುತ್ತಿರುವ ಸ್ಟಾರ್​ ಕಿಡ್​ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗುವ ಮೂಲಕವೂ ಸುಹಾನಾ ಖಾನ್​ ಅವರು ಹಣ ಸಂಪಾದನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಗಳು ಸುಹಾನಾ ಜೊತೆ ಸಿನಿಮಾ ಮಾಡಲ್ಲ ಎಂದ ಶಾರುಖ್ ಖಾನ್; ಅರ್ಧಕ್ಕೆ ನಿಂತಿತು ಚಿತ್ರ

ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಅಲಿಭಾಗ್​ನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ನಟಿ ಜೂಹಿ ಚಾವ್ಲಾ ಅವರು ಅಲ್ಲಿ ಜಮೀನು ಹೊಂದಿದ್ದು, ಸಾವಯವ ಕೃಷಿಗೆ ಅದನ್ನು ಬಳಕೆ ಮಾಡುತ್ತಿದ್ದಾರೆ. ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ, ರೋಹಿತ್​ ಶರ್ಮಾ, ಸಚಿನ್​ ತೆಂಡುಲ್ಕರ್​ ಕೂಡ ಅಲ್ಲಿ ಆಸ್ತಿ ಹೊಂದಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಅಲಿಭಾಗ್​ನಲ್ಲಿ 8 ಎಕರೆ ಜಮೀನು ಖರೀದಿ ಮಾಡಿದ್ದು ವರದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:57 am, Sun, 25 February 24