What India Thinks Today: ಟಿವಿ9 ವೇದಿಕೆಯಲ್ಲಿ 2ನೇ ದಿನ ಮಾತಾಡಲಿರುವ ಆಯುಷ್ಮಾನ್ ಖುರಾನಾ
ಟಿವಿ9 ನೆಟ್‌ವರ್ಕ್‌ನ ವಾರ್ಷಿಕ ಪ್ರಮುಖ ಸಮಾವೇಶದ ಎರಡನೇ ಆವೃತ್ತಿ, ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಗ್ಲೋಬಲ್ ಸಮಿಟ್-2024 ಇಂದು (ಫೆಬ್ರವರಿ 25) ಪ್ರಾರಂಭ ಆಗುತ್ತಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಕೂಡ ಭಾಗಿಯಾಗಲಿದ್ದಾರೆ.
ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾನ್ಕ್ಲೇವ್: ಭಾರತದ ನಂಬರ್ ಒನ್ ನ್ಯೂಸ್ ನೆಟ್‌ವರ್ಕ್ ಟಿವಿ9 ಜಾಗತಿಕ ಸಮಿಟ್ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today Conclave) 2ನೇ ಆವೃತ್ತಿಯು ಫೆಬ್ರವರಿ 25ರಂದು ಪ್ರಾರಂಭವಾಗಲಿದೆ. ಈ ಈವೆಂಟ್ ಫೆಬ್ರವರಿ 27ರ ತನಕ ನಡೆಯಲಿದೆ. ಕಾರ್ಯಕ್ರಮದ ಸಿದ್ಧತೆಗಳು ಪೂರ್ಣಗೊಂಡಿದ್ದು, ವಿವಿಧ ವಿಭಾಗಗಳ ಗಣ್ಯರು ಇದರಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ‘India: Poised For The Next Big Leap’ ಎಂಬುದು ಇದರ ಥೀಮ್. ರವೀನಾ ಟಂಡನ್, ಶೇಖರ್ ಕಪೂರ್ ಮತ್ತು ರಾಕೇಶ್ ಚೌರಾಸಿಯಾ ಅವರಂತಹ ತಾರೆಯರು ಸಮಾವೇಶದ ಮೊದಲ ದಿನ ಉಪಸ್ಥಿತರಿದ್ದರೆ, 2ನೇ ದಿನದ ಈವೆಂಟ್ ಕೂಡ ದೊಡ್ಡ ತಾರೆಯರಿಂದ ತುಂಬಿರುತ್ತದೆ. ಈ ಕಾರ್ಯಕ್ರಮದಲ್ಲಿ ನಟ ಆಯುಷ್ಮಾನ್ ಖುರಾನಾ (Ayushmann Khurrana) ಕೂಡ ಭಾಗಿಯಾಗಲಿದ್ದಾರೆ.
2ನೇ ದಿನ ಬರ್ತಾರೆ ಆಯುಷ್ಮಾನ್ ಖುರಾನಾ:
ಕಳೆದ ದಶಕದಿಂದ ಸಿನಿಮಾ ರಂಗದಲ್ಲಿ ತಮ್ಮ ಅದ್ಭುತ ನಟನೆಯಿಂದ ಜನರನ್ನು ರಂಜಿಸುತ್ತಿರುವ ನಟ ಆಯುಷ್ಮಾನ್ ಖುರಾನಾ ಅವರು ಟಿವಿ 9 ನೆಟ್‌ವರ್ಕ್‌ನ ವಾಟ್ ಇಂಡಿಯಾ ಥಿಂಗ್ಸ್ ಟುಡೇ ಕಾನ್ಕ್ಲೇವ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಕಾರ್ಯಕ್ರಮದ ‘ಫೈರ್‌ಸೈಡ್ ಚಾಟ್ – ಹೊಸ ಭಾರತಕ್ಕಾಗಿ ಸಿನಿಮಾ’ ವಿಶೇಷ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಆಯುಷ್ಮಾನ್ ಖುರಾನಾ ಅವರು ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾರೆ. ಅವರ ಸಂವಾದ ಗೋಷ್ಠಿಯು ಸಮಾರಂಭದ ಎರಡನೇ ದಿನದಂದು ಅಂದರೆ ಫೆಬ್ರವರಿ 26ರಂದು ನಡೆಯಲಿದೆ. ಈ ಗೋಷ್ಠಿ ಮಧ್ಯಾಹ್ನ 1:20ಕ್ಕೆ ಪ್ರಾರಂಭವಾಗುತ್ತದೆ.
ಆಯುಷ್ಮಾನ್ ಖುರಾನಾ ಸಿನಿಮಾ ಜರ್ನಿ:
ಆಯುಷ್ಮಾನ್ ಖುರಾನಾ ಅವರು 2012ರಲ್ಲಿ ‘ವಿಕ್ಕಿ ಡೋನರ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅಭಿನಯಿಸಿದ ಅವರು ಚೊಚ್ಚಲ ನಟನೆಗಾಗಿ ‘ಫಿಲ್ಮ್‌ಫೇರ್’ ಪ್ರಶಸ್ತಿಯನ್ನು ಪಡೆದರು. ಇದರ ನಂತರ ಅವರು ‘ಬೇವಕೂಫಿಯಾ’, ‘ಹವೈಜಾದಾ’, ‘ನೌಟಂಕಿ ಸಾಲಾ’ ಮತ್ತು ‘ಮೇರಿ ಪ್ಯಾರಿ ಬಿಂದು’ ಚಿತ್ರಗಳಲ್ಲಿ ಕೆಲಸ ಮಾಡಿದರು.
ಇದನ್ನೂ ಓದಿ: What India Thinks Today: ಟಿವಿ9ನಲ್ಲಿ ತಮ್ಮ ಜೀವನದ ಸಿಹಿ-ಕಹಿ ಕ್ಷಣಗಳನ್ನು ಹಂಚಿಕೊಳ್ಳಲಿರುವ ನಟಿ ರವೀನಾ ಟಂಡನ್
2015ರಲ್ಲಿ ತೆರೆಕಂಡ ‘ದಮ್ ಲಗಾ ಕೆ ಹೈಶಾ’ ಚಿತ್ರದಿಂದ ಆಯುಷ್ಮಾನ್ ಖುರಾನಾ ಅವರಿಗೆ ಅಪಾರ ಮನ್ನಣೆ ಸಿಕ್ಕಿತು. ಇದಾದ ನಂತರ ‘ಅಂಧಾಧುನ್’ ಚಿತ್ರಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಲ್ಲದೆ, ಅವರು ‘ಆರ್ಟಿಕಲ್ 15’, ‘ಬಾಲಾ’, ‘ಡಾಕ್ಟರ್ ಜಿ’, ‘ಡ್ರೀಮ್ ಗರ್ಲ್’ ಮತ್ತು ‘ಡ್ರೀಮ್ ಗರ್ಲ್ 2’ ಸಿನಿಮಾಗಳಲ್ಲಿ ಅಭಿನಯಿಸಿ ಭರ್ಜರಿ ಮನರಂಜನೆ ನೀಡಿದರು. ಈ ಚಿತ್ರಗಳು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದಿವೆ. ನಟನಾಗಿ ಮಾತ್ರವಲ್ಲದೇ ಉತ್ತಮ ಗಾಯಕರೂ ಆಗಿರುವ ಅವರು ಹಲವು ಗೀತೆಗಳನ್ನು ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.