ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೆ: ‘ಅನಿಮಲ್’ ಸಿನಿಮಾ ವಿರುದ್ಧ ಸಿಡಿದೆದ್ದ ಖುಷ್ಬು

Kushboo: ನಟಿ, ಮಹಿಳಾ ಆಯೋಗದ ಅಧ್ಯಕ್ಷೆ ಖುಷ್ಬು ಟಿವಿ9 ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಸಂವಾದದಲ್ಲಿ ಮಾತನಾಡಿ, ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿರುವ ‘ಅನಿಮಲ್’ ಸಿನಿಮಾದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೆ: ‘ಅನಿಮಲ್’ ಸಿನಿಮಾ ವಿರುದ್ಧ ಸಿಡಿದೆದ್ದ ಖುಷ್ಬು
ಅನಿಮಲ್-ಖುಷ್ಬು
Follow us
ಮಂಜುನಾಥ ಸಿ.
|

Updated on:Feb 25, 2024 | 10:17 PM

ಟಿವಿ9 ‘ಆಟ್ ಇಂಡಿಯಾ ಥಿಂಕ್ಸ್ ಟುಡೆ’ ಕಾರ್ಯಕ್ರಮದ ಮೊದಲ ದಿನ ಹಲವು ವಿಷಯಗಳ ಬಗ್ಗೆ ಚಿಂತನ-ಮಂಥನ ನಡೆಯಿತು. ಉದ್ಯಮ, ರಾಜಕೀಯ, ಸಿನಿಮಾ, ಕ್ರೀಡೆ, ಸಂಗೀತ, ಮಹಿಳಾ ಸಬಲೀಕರಣ ಇನ್ನೂ ಕೆಲವು ವಿಷಯಗಳ ಬಗ್ಗೆ ಆಯಾ ಕ್ಷೇತ್ರದ ನುರಿತರು, ಸಂಶೋಧಕರು, ಆಸಕ್ತರು ಸಂವಾದ ನಡೆಸಿದರು. ನಟಿ ಆಗಿರುವ ಜೊತೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯೂ ಆಗಿರುವ ಖುಷ್ಬು ‘ಮಹಿಳೆ: ಹೊಸ ‘ನಾಯಕ’ ಎಂಬ ಸಂವಾದದಲ್ಲಿ ಇತರೆ ಕೆಲವು ನುರಿತರೊಡನೆ ಭಾಗವಹಿಸಿದ್ದರು. ಈ ವೇಳೆ ‘ಅನಿಮಲ್’ (Animal) ಸಿನಿಮಾದ ವಿರುದ್ಧ ಟಬು ಅಸಮಾಧಾನ ಹೊರಹಾಕಿದರು.

‘ನಾವು ಸಮಾನ ಹಕ್ಕು, ಸಮಾನ ಗೌರವ, ಸಮಾನ ಘನತೆ ಬಗ್ಗೆ ಮಾತನಾಡುತ್ತೀವಿ. ಎಲ್ಲ ಮಹಿಳೆಯರಿಗೂ ಇವನ್ನು ಕೊಡಿಸಲು ಹೋರಾಡುತ್ತಿದ್ದೇವೆ. ಇಂಥಹಾ ಸಮಯದಲ್ಲಿಯೇ ಮಹಿಳೆಯನ್ನು ಕೀಳಾಗಿ ತೋರಿಸುವ, ಮಹಿಳೆಯ ಘನತೆಗೆ ಘಾಸಿ ಮಾಡುವ ಕತೆಗಳು, ದೃಶ್ಯಗಳುಳ್ಳ ‘ಅನಿಮಲ್’ ಅಂಥಹಾ ಸಿನಿಮಾಗಳು ಬಿಡುಗಡೆ ಆಗುತ್ತವೆ. ಇಂಥಹಾ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗುತ್ತವೆ. ನಾವು ಸಿನಿಮಾವನ್ನಲ್ಲ ಬದಲಿಗೆ ಅದನ್ನು ನೋಡುತ್ತಿರುವ ಜನಗಳ ಮನಸ್ಥಿತಿಯ ಬಗ್ಗೆ ಚಿಂತನೆ ಮಾಡಬೇಕಿದೆ’ ಎಂದು ಖುಷ್ಬು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ:ಖುಷ್ಬುಗೆ ಕೇರಳ ದೇವಾಲಯದಲ್ಲಿ ಪೂಜೆ, ಧನ್ಯ ಎಂದ ನಟಿ

‘ಈ ಹಿಂದೆ ‘ಕಬೀರ್ ಸಿಂಗ್’ ಸಿನಿಮಾ ಬಿಡುಗಡೆ ಆದಾಗಿಯೇ ಇದೇ ವಿಷಯ ಚರ್ಚೆಯಾಗಿತ್ತು. ಆ ಸಿನಿಮಾದ ನಿರ್ದೇಶಕ ಹಾಗೂ ‘ಅನಿಮಲ್’ ಸಿನಿಮಾದ ನಿರ್ದೇಶಕ ಒಬ್ಬರೇ. ನಾನು ನಿರ್ದೇಶಕರ ಮೇಲೆ ತಪ್ಪು ಹೊರಿಸುವುದಿಲ್ಲ. ಇಂಥಹಾ ಸಬ್ಜೆಕ್ಟ್​ ಅನ್ನು ಜನ ನೋಡುತ್ತಿದ್ದಾರೆ ಯಶಸ್ಸು ಸಿಗುತ್ತಿದೆ ಎಂಬ ಕಾರಣಕ್ಕೆ ಆತ ಮಾಡುತ್ತಿರಬಹುದು. ಆದರೆ ಇಂಥಹಾ ಸಿನಿಮಾಗಳನ್ನು ಜನ ನೋಡುತ್ತಿದ್ದಾರೆ. ಅದರಲ್ಲಿಯೂ ಯುವಕರು, ಮಹಿಳೆಯರನ್ನು ಕೀಳಾಗಿ ತೋರಿಸುವ ಇಂಥಹಾ ಸಿನಿಮಾಗಳನ್ನು ನೋಡಿ ನಮಗೆ ಅದು ಇಷ್ಟವಾಯಿತು ಎನ್ನುತ್ತಿದ್ದಾರಲ್ಲ, ಮೊದಲು ಅವರ ಮನಸ್ಥಿತಿಯನ್ನು ನಾವು ಬದಲಾಯಿಸಬೇಕಿದೆ’ ಎಂದಿದ್ದಾರೆ.

‘ನಾನು ‘ಅನಿಮಲ್’ ಸಿನಿಮಾ ನೋಡಿಲ್ಲ, ನನ್ನ ಮಕ್ಕಳನ್ನು ಸಹ ಅಂಥಹಾ ಸಿನಿಮಾಗಳನ್ನು ನೋಡಲು ಬಿಡುವುದಿಲ್ಲ. ಆದರೂ ನನ್ನ ಇಬ್ಬರು ಹೆಣ್ಣು ಮಕ್ಕಳು ಕುತೂಹಲದಿಂದ ಆ ಸಿನಿಮಾವನ್ನು ನೋಡಿದರು. ಆದರೆ ನೋಡಿ ಬಂದು ಅದೊಂದು ಕೆಟ್ಟ ಸಿನಿಮಾ, ದಯವಿಟ್ಟು ನೋಡಬೇಡ ಎಂದು ಮನವಿ ಮಾಡಿದರು. ಸ್ತ್ರೀದ್ವೇಷವನ್ನು ಮೆರೆಸುತ್ತಿರುವ, ಸ್ತ್ರೀದ್ವೇಷ ಮಾಡುವುದು, ಸ್ತ್ರೀಯರ ಮೇಲೆ ದೌರ್ಜನ್ಯ ಮಾಡುವುದನ್ನು ‘ಹೀರೋಯಿಸಂ’ ಎಂದು ತೋರಿಸುತ್ತಿರುವ ಸಿನಿಮಾಗಳು ಹಿಟ್ ಆಗುತ್ತಿದೆಯೆಂದರೆ ನಾವು ನಮ್ಮ ಸಮಾಜದ ಬಗ್ಗೆ ಮತ್ತೊಮ್ಮೆ ಯೋಚೆ ಮಾಡಬೇಕಿದೆ’ ಎಂದಿದ್ದಾರೆ ಖುಷ್ಬು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:01 pm, Sun, 25 February 24