ಮಹಿಳೆಯರ ಮಧ್ಯೆಯೇ ರೊಮ್ಯಾನ್ಸ್; ‘ಹೀರಾಮಂಡಿ’ ದೃಶ್ಯದ ಬಗ್ಗೆ ಸೋನಾಕ್ಷಿ ಮಾತು

ಸ್ವಾತಂತ್ರ್ಯಪೂರ್ವ ಕಾಲದ ಕಹಾನಿಯನ್ನು ಈ ಸೀರಿಸ್​ನಲ್ಲಿ ಹೇಳಲಾಗಿದೆ. ಲಾಹೋರ್​​ನ ರೆಡ್​ಲೈಟ್ ಏರಿಯಾ ಹೀರಾಮಂಡಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಬ್ರಿಟಿಷರ ಆಳ್ವಿಕೆ ವೇಳೆ ಇವರ ಪರಿಸ್ಥಿತಿ ಯಾವ ರೀತಿಯಲ್ಲಿ ಇತ್ತು ಎಂಬುದನ್ನು ಈ ಸೀರಿಸ್​ನಲ್ಲಿ ತೋರಿಸಲಾಗಿದೆ.

ಮಹಿಳೆಯರ ಮಧ್ಯೆಯೇ ರೊಮ್ಯಾನ್ಸ್; ‘ಹೀರಾಮಂಡಿ’ ದೃಶ್ಯದ ಬಗ್ಗೆ ಸೋನಾಕ್ಷಿ ಮಾತು
ಸೋನಾಕ್ಷಿ
Follow us
ರಾಜೇಶ್ ದುಗ್ಗುಮನೆ
|

Updated on: May 08, 2024 | 11:01 AM

ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ದೇಶನದ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಮಧ್ಯೆ ಈ ಸರಣಿಯಲ್ಲಿ ನಟಿಸಿದ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸೋನಾಕ್ಷಿ ಸಿನ್ಹಾ ನಟನೆಯಲ್ಲಿ ಹೆಚ್ಚು ಅಂಕ ಪಡೆದಿದ್ದಾರೆ. ಸ್ವತಂತ್ರ ಪೂರ್ವ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ಇಬ್ಬರು ಮಹಿಳೆಯರು ರೊಮ್ಯಾನ್ಸ್ ಮಾಡೋ ದೃಶ್ಯ ಇದೆ. ಅದನ್ನು ಹೇಗೆ ನಿರ್ವಹಿಸಿದಿರಿ ಎನ್ನುವ ಪ್ರಶ್ನೆಗೆ ಸೋನಾಕ್ಷಿ ಉತ್ತರಿಸಿದ್ದಾರೆ.

ನ್ಯೂಸ್18 ಇಂಗ್ಲಿಷ್​ಗೆ ನೀಡಿದ ಸಂದರ್ಶನದಲ್ಲಿ ಸೋನಾಕ್ಷಿ ಸಿನ್ಹಾ ಮಾತನಾಡಿದ್ದಾರೆ. ‘ಆರಂಭದಲ್ಲಿ ಬನ್ಸಾಲಿ ಅವರು ನನಗೆ ಪಾತ್ರದ ಬಗ್ಗೆ ವಿವರಿಸಿದ್ದರು. ಹೀರಾಮಂಡಿಯಲ್ಲಿ ಆ ವಿಚಾರದಲ್ಲಿ ಓಪನ್ ಆಗಿರುತ್ತಿದ್ದರು. ನಮ್ಮ ಸೀರಿಸ್​ನಲ್ಲಿ ಉಸ್ತಾದ್​ಜಿ ಅವರು ಗೇ ಎಂದು ಓಪನ್ ಆಗಿ ಹೇಳಿಕೊಳ್ಳುತ್ತಿದ್ದರು’ ಎಂದು ಸಿನಿಮಾ ಬಗ್ಗೆ ಮಾತನಾಡಿದ್ದಾರೆ ಸೋನಾಕ್ಷಿ ಸಿನ್ಹಾ.

ಫರೀದಾನ್ ಹಾಗೂ ಅವರ ಮನೆಯ ಕೆಲಸದಾಕೆ ಮಧ್ಯೆ ರೊಮ್ಯಾನ್ಸ್ ನಡೆಯುತ್ತದೆ. ಈ ದೃಶ್ಯದ ಬಗ್ಗೆ ಸೋನಾಕ್ಷಿ ಮಾತನಾಡಿದ್ದಾರೆ. ‘ನಾನು ಮಾಡಿದ ಫರೀದಾನ್ ಪಾತ್ರ​ ಭಿನ್ನವಾಗಿದೆ. ಆಕೆ 9 ವರ್ಷ ಇದ್ದಾಗಲೇ ಮಾರಾಟಕ್ಕೆ ಒಳಗಾಗುತ್ತಾಳೆ. ಈ ಕಾರಣಕ್ಕೆ ಆಕೆಗೆ ಪುರುಷರು ಅಂದರೆ ದ್ವೇಷ ಇರಬಹುದು. ಇಲ್ಲಿ ಎಲ್ಲವನ್ನೂ ಓಪನ್ ಆಗಿ ತೋರಿಸಲಾಗಿದೆ. ಬನ್ಸಾಲಿ ಅವರು ಹಲವು ರೀತಿಯ ವಿಚಾರಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ’ ಎಂದಿದ್ದಾರೆ ಸೋನಾಕ್ಷಿ. ಈ ಸಿನಿಮಾದಲ್ಲಿ ಪ್ರತಿ ಪಾತ್ರಧಾರಿಗಳಿಗೂ ವಿಶೇಷ ರೀತಿಯ ಉಡುಗೆ ನೀಡಲಾಗಿತ್ತು. ಇದು ಸೋನಾಕ್ಷಿಗೆ ಇಷ್ಟ ಆಗಿದೆ. ಅವರ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿದ್ದು, ಅವರ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ಹೀರಾಮಂಡಿ’ ಸೀರಿಸ್​ಗೆ ನಿರ್ದೇಶಕ ಬನ್ಸಾಲಿ ಹಾಗೂ ಸ್ಟಾರ್ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಸ್ವಾತಂತ್ರ್ಯಪೂರ್ವ ಕಾಲದ ಕಹಾನಿಯನ್ನು ಈ ಸೀರಿಸ್​ನಲ್ಲಿ ಹೇಳಲಾಗಿದೆ. ಲಾಹೋರ್​​ನ ರೆಡ್​ಲೈಟ್ ಏರಿಯಾ ಹೀರಾಮಂಡಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಬ್ರಿಟಿಷರ ಆಳ್ವಿಕೆ ವೇಳೆ ಇವರ ಪರಿಸ್ಥಿತಿ ಯಾವ ರೀತಿಯಲ್ಲಿ ಇತ್ತು ಎಂಬುದನ್ನು ಈ ಸೀರಿಸ್​ನಲ್ಲಿ ತೋರಿಸಲಾಗಿದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ, ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಮುಂತಾದವರು ‘ಹೀರಾಮಂಡಿ’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ. ಇವರೆಲ್ಲರಿಗೂ ದೊಡ್ಡ ಮಟ್ಟದ ಸಂಭಾವನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ