ಯಾವಾಗ ಒಟಿಟಿಗೆ ಬರಲಿದೆ ಪೃಥ್ವಿರಾಜ್ ನಟನೆಯ ‘ಆಡು ಜೀವಿತಂ’ ಸಿನಿಮಾ? ಇಲ್ಲಿದೆ ಬ್ಯಾಡ್ ನ್ಯೂಸ್
ಸಿನಿಮಾ ಬಿಡುಗಡೆ ಆದ ಬಳಿಕ ಒಟಿಟಿ ಬಗ್ಗೆ ಚರ್ಚೆ ಶುರುವಾಗುತ್ತದೆ. ಥಿಯೇಟರ್ನಲ್ಲಿ ಸಿನಿಮಾ ಮೆಚ್ಚುಗೆ ಪಡೆದು, ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದರೆ ಸಿನಿಮಾ ಒಟಿಟಿ ರಿಲೀಸ್ ದಿನಾಂಕ ವಿಳಂಬ ಆಗುತ್ತದೆ. ಅದೇ ರೀತಿ ‘ಆಡು ಜೀವಿತಂ’ ಸಿನಿಮಾಗಾಗಿ ಕೆಲವರು ಕಾಯುತ್ತಿದ್ದಾರೆ.
ಮಲಯಾಳಂ ಸೂಪರ್‌ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅಭಿನಯದ ‘ಆಡು ಜೀವಿತಂ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬ್ಲೆಸ್ಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಾರ್ಚ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಆಡು ಜೀವಿತಂ’ ಸಿನಿಮಾ ಮೆಚ್ಚುಗೆ ಪಡೆಯಿತು. 100 ಕೋಟಿ ರೂಪಾಯಿ ಗಳಿಕೆ ಮಾಡಿದ ಮಲಯಾಳಂನ ಕೆಲವೇ ಕೆಲವು ಸಿನಿಮಾಗಳಲ್ಲಿ ಇದು ಕೂಡ ಒಂದು. ಈ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ಸಿಕ್ಕಿದೆ.
ಸಿನಿಮಾ ಬಿಡುಗಡೆ ಆದ ಬಳಿಕ ಒಟಿಟಿ ಬಗ್ಗೆ ಚರ್ಚೆ ಶುರುವಾಗುತ್ತದೆ. ಥಿಯೇಟರ್ನಲ್ಲಿ ಸಿನಿಮಾ ಮೆಚ್ಚುಗೆ ಪಡೆದು, ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದರೆ ಸಿನಿಮಾ ಒಟಿಟಿ ರಿಲೀಸ್ ದಿನಾಂಕ ವಿಳಂಬ ಆಗುತ್ತದೆ. ಅದೇ ರೀತಿ ‘ಆಡು ಜೀವಿತಂ’ ಸಿನಿಮಾಗಾಗಿ ಕೆಲವರು ಕಾಯುತ್ತಿದ್ದಾರೆ. ಜನಪ್ರಿಯ OTT ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಪೃಥ್ವಿರಾಜ್ ನಟನೆಯ ಈ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ.
ಮೇ 10ಕ್ಕೆ ‘ಆಡು ಜೀವಿತಂ’ ಸಿನಿಮಾ ಒಟಿಟಿಗೆ ಬರಲಿದೆ ಎಂದು ಸುದ್ದಿ ಆಗಿತ್ತು. ಆದರೆ ಈಗ ದಿನಾಂಕ ಬದಲಾಗಿದೆ. ಈ ಬ್ಲಾಕ್‌ಬಸ್ಟರ್ ಚಿತ್ರ ಮೇ 26ರಿಂದ ಸ್ಟ್ರೀಮ್ ಆಗಲಿದೆಯಂತೆ. ಈ ಸಿನಿಮಾ ಮಲಯಾಳಂ ಜೊತೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಸಾರ ಕಾಣಲಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆಯಂತೆ. ಡಿಸ್ನಿ ಪ್ಲಸ್ ಹಾಟ್ಸ್ಟಾರ್ 30 ಕೋಟಿ ರೂಪಾಯಿ ಪಡೆದುಕೊಂಡಿದೆ.
ಇದನ್ನೂ ಓದಿ: ‘ಸಲಾರ್’ಗೆ ಎರಡು ಬಾರಿ ನೋ ಅಂದಿದ್ದ ಪೃಥ್ವಿರಾಜ್ ಸುಕುಮಾರ್ ಕೊನೆಗೆ ಒಪ್ಪಿದ್ದು ಏಕೆ?
ಪೃಥ್ವಿರಾಜ್ ಸುಕುಮಾರ್ ನಟನೆಯ ಈ ಸಿನಿಮಾದಲ್ಲಿ ಅಮಲಾ ಪೌಲ್ ನಟಿಸಿದ್ದಾರೆ. ಅಲ್ಲದೆ, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್, ಕೆಆರ್ ಗೋಕುಲ್, ಅರಬ್ ನಟರಾದ ತಾಲಿಬ್ ಅಲ್ ಬಲೂಶಿ, ರಿಕ್ ಅಬೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಕನ್ನಡದಲ್ಲಿ ‘ಹೊಂಬಾಳೆ ಫಿಲ್ಮ್ಸ್’ ಬಿಡುಗಡೆ ಮಾಡಿದೆ. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರಕ್ಕಾಗಿ 31 ಕೆಜಿ ತೂಕ ಇಳಿಸಿಕೊಂಡಿದ್ದರು. ಈ ಸಿನಿಮಾಗೆ ನಿರ್ದೇಶಕರು ಹಲವು ವರ್ಷ ಮುಡಿಪಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:07 pm, Tue, 7 May 24